ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ನಳ್ಳಿಯಲ್ಲಿ ಅಶುದ್ದ ನೀರು ಪೂರೈಕೆಯಾಗುತ್ತಿದೆ ಎನ್ನುವ ದೂರುಗಳು ಸಾರ್ವಜನಿಕರಿಂದ ಕೇಳಿ ಬಂದಿದೆ. ಮಳೆಗಾಲ ಆರಂಭವಾದ ಹಿನ್ನಲೆಯಲ್ಲಿ ನದಿಯಿಂದ ಮೇಲೆತ್ತಲಾದ ಕೆಸರು ಮಿಶ್ರಿತ ಕಂದು ಬಣ್ಣದ ನೀರನ್ನು ಶುದ್ದೀಕರಿಸದೆ ಜನರಿಗೆ ಕುಡಿಯಲು ಸರಬರಾಜು ಮಾಡಲಾಗುತ್ತಿದೆ ಎನ್ನುವ ಆರೋಪ ವ್ಯಕ್ತವಾಗಿದೆ.

DSC_1052

DSC_1051
ಬಂಟ್ವಾಳ ಪುರಸಭಾ ವ್ಯಾಪ್ತಿಯ ಪ್ರದೇಶಗಳಿಗೆ ಜಕ್ರಿಬೆಟ್ಟುವಿನಲ್ಲಿರುವ ಕಿರು ರೇಚಕ ಸ್ಥಾವರದಿಂದ ನೀರು ಪೂರೈಕೆಯಾಗುತ್ತಿದೆ. ನೇತ್ರಾವತಿ ನದಿಯಿಂದ ಮೇಲತ್ತಲ್ಪಟ್ಟ ನೀರನ್ನು ಇಲ್ಲಿ ಶುದ್ದೀಕರಿಸಿ ಬಳಿಕ ಪೈಪ್ಲೈನ್ ಮೂಲಕ ಜನರಿಗೆ ತಲುಪಿಸಲಾಗುತ್ತದೆ. ಆದರೆ ಕಳೆದ ಒಂದೆರಡು ದಿನಗಳಿಂದ ಕೆಸರು ಮಿಶ್ರಿತ ಮಲೀನ ನೀರು ನಳ್ಳಿಯಲ್ಲಿ ಬರುತ್ತಿರುವುದರಿಂದ ನೀರು ಬಳಕೆದಾರರು ಆತಂಕ್ಕೀಡಾಗಿದ್ದಾರೆ. ನದಿಯಲ್ಲಿ ಹರಿದು ಬರುವ ನೀರನ್ನು ಶುದ್ದೀಕರಿಸದೇ ಯಥಾವತ್ತಾಗಿ ಜನರಿಗೆ ಪೂರೈಕೆ ಮಾಡಲಾಗುತ್ತಿದ್ದು ಅಶುದ್ದ ನೀರನ್ನು ಕುಡಿಯಲು, ಇನ್ನಿತರ ಅಗತ್ಯತೆಗಳಿಗೆ ಬಳಕೆ ಮಾಡುವ ಅನಿವಾರ್ಯತೆ ಒದಗಿ ಬಂದಿದೆ ಎಂದು ಕೆಲ ನಾಗರೀಕರು ಆರೋಪಿಸಿದ್ದಾರೆ. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಒಂದಲ್ಲ ಒಂದು ರೀತಿಯ ರೋಗಗಳು ಜನರನ್ನು ಕಾಡಲು ಪ್ರಾರಂಭಿಸಿದ್ದು ಪುರಸಭೆ ಸರಬರಾಜು ಮಾಡುವ ಅಶುದ್ದ ನೀರನ್ನು ಸೇವಿಸಿ ಇನ್ನಷ್ಟು ರೋಗಗಳು ವಕ್ಕರಿಸ ಬಹುದು ಎನ್ನುವ ಭೀತಿ ವ್ಯಕ್ತವಾಗಿದೆ. ನೀರನ್ನು ಶುದ್ದೀಕರಿಸಿಯೇ ಪೂರೈಕೆ ಮಾಡುವಂತೆ ಒತ್ತಾಯಗಳು ಕೇಳಿ ಬಂದಿದೆ.

By Suddi9

Leave a Reply

Your email address will not be published. Required fields are marked *