ಕೈಕಂಬ:ಕೊಂಕಣ್ ಕರಾವಳಿ ತೀರದ ಕೊಂಕಣಿ ಕಥೋಲಿಕ್ ಕ್ರೈಸ್ತರಿಗೆ ಸೆ.8ರಂದು ಇಮ್ಮಡಿ ಸಂಭ್ರಮ. ಒಂದೆಡೆ ಆದಿಪಾರಂಪರಹಿತ ಯೇಸುವಿ ತಾಯಿ ಸಂತ ಜೊಕಿಂ ಮತ್ತು ಅನ್ನಾರವರ ಪುತ್ರಿ ಕನ್ಯಾಮೇರಿಯ ಜನನದ ಅದ್ದೂರಿಯಾದರೆ ಇನ್ನೊಂದೆಡೆ ಹಚ್ಚ ಹಸುರಾಗಿ ಬಸುರಿಯಂತೆ ಬೆಳೆದು ನಿಂತ ತೆನೆಭರಿತ ಹೊಲಗದ್ದೆಗಳಿಂದ ತೆನೆ, ತರಕಾರಿ ಹಣ್ಣುಹಂಪಲುಗಳಿಂದ ಸಂತುಷ್ಠಿ ಜೀವನಕ್ಕೆ ಭಗವಂತನಿಗೆ ಉದಾತ್ತ ಮನಸ್ಸಿನ ಹೊಸ ಅಕ್ಕಿಯ ಸವಿಯೂಟದೊಡನೆ ಇಡೀ ಕುಟುಂಬದ ಸುಂದರ ಬೇಸುಗೆ.
ವಾಮಂಜೂರು ಸಂತಶ್ರಮಿಕ ಜೋಸೆಫರ ಚರ್ಚಿನಲ್ಲಿ ಕಳೆದ 9 ದಿನಗಳಿಂದ ಬಲಿಪೂಜೆ, ವಿಶೇಷ ಪ್ರಾರ್ಥನೆ, ಮುದ್ದು ಎಳೆಯರಿಂದ ಮೇರಿ ಮಾತೆಯ ಗ್ರೊಟ್ಟೊ ಎದುರು ಪುಷ್ಪಾರ್ಚನೆ, ಧರ್ಮಗುರುಗಳಾದ ವಂದನೀಯ ಸಿಪ್ರಿಯನ್ ಪಿಂಟೊರವರಿಂದ ಪ್ರವಚನ , ಸುಮಾರು ಒಂದು ಸಾವಿರ ಜನರಿಂದ ಹಬ್ಬಕ್ಕೆ ಕ್ಷಣಗಣನೆ ಎಂಬಂತೆ ನೊವೇನಾದಲ್ಲಿ ಪಾಲ್ಗೊಳ್ಳುವಿಕೆ. ಸೆ.8 ರಂದು ವಾಮಂಜೂರು ಜಂಕ್ಷನ್‍ನಲ್ಲಿ ಹೊಸತೆನೆಯ ಆರ್ಶಿರ್ವಾದ, ಪುಟಾಣಿಗಳಿಂದ ಪುಷ್ಪಾರ್ಚನ, ಪ್ರೀತಿಯ ಪ್ರತೀಕ ಮರಿಯಮ್ಮನವರ ಮೆರವಣಿಗೆ ಇದ್ದು ಮುಗ್ದರಿಂದ ಪುಷ್ಪಗಳ ಸಿಂಚನಗೈದು ಬಲಿಪೂಜೆಗೆ ಅದ್ದೂರಿಯಿಂದ ಚಾಲನೆ ಪಾ.ಸಿಪ್ರಿಯನ್‍ರವರಿಂದ ವಿಬಿನ್ನ ರೀತಿಯ ಸಂದೇಶ ಮತ್ತು ಬಲಿಪೂಜೆ ನೇರವೇರಿತು.
ಭಕ್ತಾದಿಗಳಿಗೆ ಸಾಂಕೇತಿಕವಾಗಿ ತೆನೆವಿತರಿಸಲಾಯಿತು. ಸುಮಾರು ಎರಡು ಸಾವಿರ ಭಕ್ತಾದಿಗಳಿಗೆ ಕಬ್ಬು ನೀಡಲಾಯಿತು. ಕರಾವಳಿ ಕ್ರೈಸ್ತರ ಕನ್ಯಾಮರಿಯಮ್ಮ ಜಯಂತಿ ಉತ್ಸವದ ಪರಂಪರೆಗೆ ವಾಮಂಜೂರು ಚರ್ಚಿನಲ್ಲಿ ಪಾ.ಸಿಪ್ರಿಯನ್ ಪಿಂಟೋ ಮತ್ತು ಕ್ಲಿಪರ್ಡ್ ಪಿಂಟೊರವರ ನೇತ್ರತ್ವದಲ್ಲಿ ಅನೇಕ ಧಾರ್ಮಿಕ ಆಕರ್ಷಣೆಗಳಿದ್ದು ಸಡಗರವೇ ಸಡಗರ ಕಂಗೊಳಿಸಿತು.











