ಕೈಕಂಬಅಡ್ಡೂರು 30ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ವತಿಯಿಂದ ಗುರುಪುರ ಗ್ರಾ.ಪಂ,ಸದಸ್ಯ ಮತ್ತು ಸಮಾಜ ಸೇವಕ ಮಹಮ್ಮದ್ ಸಾದಿಖ್ ಅಡ್ಡೂರು ಇವರನ್ನು ಫಲ ಪುಷ್ಪ ನೀಡಿ ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೈಕಂಬ ಹೋಟೆಲ್ ಉದ್ಯಮಿ ಹರಿರಾವ್, ವಿಶ್ವ ಹಿಂದೂ ಪರೊಷತ್ ಕಾರ್ಯಧ್ಯಕ್ಷ ಜಿತೇಂದ್ರ ಕೊಟ್ಟಾರಿ, ಜಿ.ಪಂ. ಸದಸ್ಯ ಯು.ಪಿ.ಇಬ್ರಾಹಿಂ, ಪೊಳಲಿ ಹಿಂದೂ ಜಾಗರಣ ವೇದಿಕೆ ಸಂಚಾಲಕ ಪೇಮ್ ಶೆಟ್ಟಿ, ತಾ.ಪಂ.ಸದಸ್ಯ ಸಚಿನ್ ಅಡಪ, ಗುರುಪುರ ಗ್ರಾ.ಪಂ. ಉಪಾಧ್ಯಕ್ಷ ಜಿ.ಎಮ್. ಉದಯ್ ಭಟ್, ವಕೀಲರು ದುರ್ಗಾವಾಹಿನಿ ಜಿಲ್ಲಾ ಸಹ ಸಂಯೋಜಕಿ ವಿದ್ಯ ಮಲ್ಯ,ಗಣೇಶೋತ್ಸವ ಸಮಿತಿ ಅಧ್ಯಕ್ಷ ರಮೇಶ್ ಕುಲಾಲ್,ಕಾರ್ಯದರ್ಶಿ ಸುಭಾಶ್‍ಚಂದ್ರ ಪೊನ್ನೆಲ ಉಪಸ್ಥಿತರಿದ್ದರು.






