ಬಜಪೆ: ಮಂಬರುವ ಪರ್ವ ದಿನಗಳ ಹಿನ್ನೆಲೆಯಲ್ಲಿ ಸಾಮಾಜಿಕ ಶಾಂತಿ ಕಾಪಾಡಲು ಸರ್ವದರ್ಮಗಳ ಸಹಕಾರವು ಬಹಳ ಮುಖ್ಯ ಶಾಂತಿ ಕದಡಲು ಯತ್ನಿಸುವ ಯಾವುದೇ ಧರ್ಮದ ಕಿಡಿಗೇಡಿಗಳ ಬಗ್ಗೆ ಸರಿಯಾದ ಮಾಹಿತಿ ನೀಡಿ ಸಹಕರಿಸಬೇಕು ಎಂದು ಬಜಪೆ ಪೊಲಿಸ್ ಇನ್ಸಪೆಕ್ಟರ್ ಟಿ.ಡಿ. ನಾಗರಾಜ್ ಹೇಳಿದರು. ಹಿಂದೂಗಳ , ಮುಸ್ಲಿಂ, ಕ್ರೆಸ್ತ ಹಬ್ಬದ ಹಿನ್ನೆಲೆಯಲ್ಲಿ ಬಜಪೆ ಪೊಲೀಸ್ ಠಾಣೆಯಲ್ಲಿ ಸರ್ವಧರ್ಮಗಳ ಧಾರ್ಮಿಕ ಮುಖಂಡರು, ಸಂಘಟನೆಗಳು, ಜನಪ್ರತಿನಿಧಿಗಳು ಹಾಗೂ ನಾಗರಿಕರ ಉಪಸ್ಥಿತಿಯಲ್ಲಿ ಶುಕ್ರವಾರ ಜರಗಿದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಶೋಭಾಯಾತ್ರೆಯ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಕರು. ಸಮಯ ಹಾಗೂ ಶಿಸ್ತು ಪಾಲನೆಯ ಬಗ್ಗೆ ಗಮನಹರಿಸಬೇಕು ಎಂದು ಅವರು ಹೇಳಿದರು. ಬಜಪೆ ಠಾಣಾ ಎಸ್‍ಐ ಸತೀಶ್ ಕುಮಾರ್, ಸಿಬ್ಬಂದಿ ಶಶಿಧರ್ ,ಭಜರಂಗಧಳ ಸಂಚಾಲಕ ಭುಜಂಗ ಕುಲಾಲ್, ಹಿಂದೂ ಜಾಗರಣಾ ವೇದಿಕೆ ತಾಲೂಕು ಸಂಚಾಲಕ ಹರೀಶ್ ಮಟ್ಟಿ, ವಿನೋದ್ ಮಾಡ, ಕೃಷ್ಣ ಕಜೆಪದವು ,ಸುಕುಮಾರ್ ಅಮೀನ್,ಬಜಪೆ ಮಹಮ್ಮದ್ ನಿವೃತಪೊಲೀಸ್ ಉಪನಿರೀಕ್ಷಕ, ಅಡ್ಡೂರು ಮಸೀದಿ ಅಧ್ಯಕ್ಷ ಸೈಯ್ಯದ್, ಉಂಞ್ಞ ಬಜಪೆ, ಇಸ್ಮಾಯಿಲ್ ಬಜಪೆ, ಅನಿಲ್ ಬಜಪೆ ಮತ್ತಿತರು ಉಪಸ್ಥಿತರಿದ್ದರು.
