ಬಜ್ಪೆ: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಿಯ ಬಗ್ಗೆ ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಮತಾಂದರನ್ನು ಬಂಧಿಸಿ ಸಮಗ್ರ ತನಿಕೆ ನಡೆಸುವಂತೆ ಬಜ್ಪೆ ಠಾಣಾ ನಿರೀಕ್ಷಕ ಟಿ ಡಿ. ನಾಗರಾಜ್ ಅವರಿಗೆ ಸಂಸದ ನಳಿನ್ ಕುಮಾರ್ ಕಟೀಲು ನೇತ್ರತ್ವದಲ್ಲಿ ಶುಕ್ರವಾರ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಕಟೀಲು ದೇವಳದ ಹರಿನಾರಾಯಣ ಆಸ್ರಣ್ಣ , ಈಶ್ವರ ಕಟೀಲು, ಸಂದೀಪ್ ಶೆಟ್ಟಿ ಮರವೂರು ಮತ್ತಿತರರು ಉಪಸ್ಥಿತರಿದ್ದರು. 

