ಬಜಪೆ:ಹೆಚ್ಚುವರಿ ಲಾಗೆಜಿಗೆ ದಂಡ ಪಾವತಿಸಲು ಹಣವಿಲ್ಲದ ಕಾರಣ ಪ್ರಯಾನಿಕರೊಬ್ಬರು ನಿಗದಿತ ವಿಮಾನದಲ್ಲಿ ದುಬೈಗೆ ತೆರಳಳಾಗದೆ ಮನೆಗೆ ವಾಪಸುಹೋಗಬೇಕಾದ ಘಟನೆ ಮಂಗಳವಾರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಉಡುಪಿ ಶಂಕರ ಪುರದ ವೆಲೆರಿಯನ್ ಮಥಾಯಸ್ ಎಂಬವರು ಕುವೆಟ್ನಲ್ಲಿ ಕೆಲಸದಲ್ಲಿದ್ದು ದುಬೈಗೆ ತೆರಳುವ ಸಲುವಾಗಿ ಬೆಳಗ್ಗೆ 7.30ಕ್ಕೆ ವಿಮಾನ ನಿಲ್ದಾಣಕ್ಕೆ ಬಂದಿದ್ದರು. 8.30ರ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ವೆಲೆರಿಯನ್ ಹೋಗಬೇಕಾಗಿತ್ತು. ಲಾಗೇಜು ಹೆಚ್ಚುವರಿಯಾಗಿದ್ದ ಕಾರಣ ಬೋರ್ಡಿಂಗ್ ತಪಾಸಣೆ ವೇಳೆ 1500ರೂ,ದಂಡ ತೆರುವಂತೆ ಸೂಚಿಸಲಾಯಿತು. ನನ್ನಲ್ಲಿ 1000ರೂ ಮಾತ್ರ ಇರುವುದಾಗಿ ತಿಳಿಸಿದ್ದು ಉಳಿದ ಹಣವನ್ನು ಮತ್ತೆ ಪಾವತಿಸುವುದಾಗಿ ಹೇಳಿದಾಗ ಒಪ್ಪದ ಅಧಿಕಾರಿಗಳು ವೆಲೇರಿಯನ್ ಅವರನ್ನು ಹೊರಗೆ ಕಳುಹಿಸಿದರು. ಈ ಬಗ್ಗೆ ಅಕ್ರೋಶಗೊಂಡ ವೆಲೆರಿಯನ್ರವರು ಬಹಳ ಹೊತ್ತು ವಿಮಾನನಿಲ್ದಾಣದಲ್ಲಿ ತನಗಾದ ಅನ್ಯಾಯದ ಬಗ್ಗೆ ಪ್ರತಿಭಟನೆ ನಡೆಸಿದರು.
