ಕೈಕಂಬ: ಕರಿಯಂಗಳ ಗ್ರಾಮ ಕರಿಯಂಗಳ ಗ್ರಾಮ ಪಂಚಾಯತ್
ಕರಿಯಂಗಳ ಗ್ರಾಮ ಪಂಚಾಯತ್‍ನ 70ನೇ ವರ್ಷದ ಸ್ವಾತಂತ್ರ್ಯೋತ್ಸವವದ ಕರಿಯಂಗಳ ಗ್ರಾ.ಪಂ.ಅಧ್ಯಕ್ಷೆ ಚಂದ್ರವತಿ ಧ್ವಜಾರೋಹಣಗೈದರು.ಕರಿಯಂಗಳ ಗ್ರಾ.ಪಂ. ಉಪಾಧ್ಯಕ್ಷ ಚಂದ್ರಶೇಖರ ರಾವ್, ವೆಂಕಟೇಶ ನಾವಡ, ತಾ,ಪಂ,ಸದಸ್ಯ ಯಶವಂತ ಪೂಜಾರಿ ಪೊಳಲಿ, ಪಿ.ಡಿ.ಒ ನಯನ, ಕಾರ್ಯದರ್ಶಿ ಪದ್ಮವತಿ, ಗ್ರಾ.ಪಂ.ಸದಸ್ಯರು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

* ಗುರುಪುರ ಗ್ರಾಮ ಪಂಚಾಯತಿ
ಗುರುಪುರ ಗ್ರಾಮ ಪಂಚಾಯತಿಯಲ್ಲಿ 70ನೇ ಸ್ವಾತಂತ್ರ್ಯೋತ್ಸವವನ್ನು ಗ್ರಾಮ ಪಂಚಾಯತಿ ಅದ್ಯಕ್ಷೆ ರುಕೀಯಾ ನೆರವೇರಿಸಿದರು. ಪಿ.ಡಿ.ಒ ಬಿ.ಆರ್.ಹಜೇರಿ, ಕಾರ್ಯದರ್ಶಿ ಕೇಶವ ಮತ್ತು ಗ್ರಾ.ಪಂ.ಸದಸ್ಯರು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

*ಅಮ್ಮುಂಜೆ ಗ್ರಾಮ ಪಂಚಾಯತ್
ಅಮ್ಮುಂಜೆ ಗ್ರಾ.ಪಂ. 70ನೇ ವರ್ಷದ ಸ್ವಾತಂತ್ರ್ಯೋತ್ಸವದ ದ್ವಜಾರೋಹಣವನ್ನು ಅಮ್ಮುಂಜೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲತಾ ನೇರವೇರಿಸಿದರು. ದೇವದಾಸ್ ಹೆಗ್ಡೆ ಅಮ್ಮುಂಜೆಗುತ್ತು, ರಂಗನಾಥ್ ಅಮ್ಮುಂಜೆ ಗುತ್ತು, ಪಂಚಾಯತ್‍ನ ಸದಸ್ಯರು, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

* ಕೈಕಂಬ  ಪೊಂಪೈ ಚರ್ಚಿನಲ್ಲಿ ಸ್ವಾತ್ರಂತ್ರೋತ್ಸವ ಆಚರಣೆ
ಧ್ವಜಾರೋಹಣವನ್ನು ಪೊಂಪೈ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ| ಆಂಟನಿ ಲೋಬೋರವರು ನೆರವೇರಿಸಿದರು. ವೇದಿಕೆಯಲ್ಲಿ ಕಂದಾವರ ಗ್ರಾಮ ಪಂಚಾಯತಿಯ ಅಧ್ಯೆಕ್ಷೆ ವಿಜಯ ಗೋಪಾಲ ಸುವರ್ಣ, ಚರ್ಚಿನ ಉಪಾಧ್ಯಕ್ಷ ಜೋನ್ಸನ್ ಲೋಬೋ ಹಾಗೂ ಕಾರ್ಯದರ್ಶಿ ಲಿಲ್ಲಿ ಮಥಾಯಸ್ ಮತ್ತು ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.

*ಸಾಣೂರುಪದವಿನಲ್ಲಿ ನಡೆದ ಸ್ವಾತ್ರಂತ್ರೋತ್ಸವ ಆಚರಣೆ.

ಸಾಣೂರುಪದವಿನಲ್ಲಿ  ಸೊಲ್ತಾಡಿ ಶಿವಪ್ರಸಾದ್  ದ್ವಜರೋಹಣ ನೆರವೇರಿಸಿದರು. ಕರಿಯಂಗಳ ಗ್ರಾ.ಪಂ. ಉಪಾಧ್ಯಕ್ಷ  ಚಂದ್ರಶೇಖರ ರಾವ್ , ತಾ.ಪಂ.ಸದಸ್ಯ  ಯಶವಂತ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

bjp-15aug-flag hosting pompei church

DSC_6467

DSC_6475

By Suddi9

Leave a Reply

Your email address will not be published. Required fields are marked *