ಮುಂಬಯಿ: ಜ್ಞಾನ ಭಾರತಿ ಆಧ್ಯಾತ್ಮಿಕ ವೇದಿಕೆ ಮುಂಬಯಿ ಸಂಸ್ಥೆಯು ಗುರು ಪೂರ್ಣಿಮ ನಿಮಿತ್ತ ಇಂದಿಲ್ಲಿ ರವಿವಾರ ಅಪರಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಭವನದಲ್ಲಿನ ರಾಧಾಭಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಬೆಜ್ಜವಳ್ಳಿ ಅಯ್ಯಪ್ಪ ಸಂಸ್ಥಾನ ಹಾಗೂ ಬಾರ್ಕೂರು ಮಹಾಸಂಸ್ಥಾನ ಪೀಠಾಧಿಪತಿ ಶ್ರೀ ವಿದ್ಯಾ ವಾಚಸ್ಪತಿ ಡಾ| ವಿಶ್ವ ಸಂತೋಷ ಭಾರತಿ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಗುರುವಂದನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ನೇರವೇರಿಸಿತು.
ಜ್ಞಾನ ಭಾರತಿ ಆಧ್ಯಾತ್ಮಿಕ ವೇದಿಕೆ ಮುಂಬಯಿ ಅಧ್ಯಕ್ಷ ಡಾ| ಸತ್ಯ ಪ್ರಕಾಶ್ ಎಸ್.ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನೇರವೇರಿಸಲ್ಪಟ್ಟ ಧಾರ್ಮಿಕ ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ, ಗೌರವ ಅತಿಥಿsಗಳಾಗಿ ಐಕಳ ಹರೀಶ್ ಶೆಟ್ಟಿ, ನ್ಯಾ| ಯು.ಶೇಖರ ಶೆಟ್ಟಿ, ಸಂತೋಷ ಶೆಟ್ಟಿ ಇನ್ನ ಕುರ್ಕಿಲಬೆಟ್ಟು, ಸಿಎ| ಶಂಕರ ಬಿ.ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ವಿರಾರ್ ಶಂಕರ ಶೆಟ್ಟಿ, ಲತಾ ಜಯರಾಮ ಶೆಟ್ಟಿ, ಭಾಸ್ಕರ ಎಂ.ಶೆಟ್ಟಿ, ಕುಶಲ ಭಂಡಾರಿ, ಜೆ.ಪಿ ಶೆಟ್ಟಿ, ಸುರೇಶ ಬಿ.ಶೆಟ್ಟಿ, ಶಿವರಾಮ ನಾಯ್ಕ್, ಭುಜಂಗ ಶೆಟ್ಟಿ, ಜಯ ಸಿ.ಸುವರ್ಣ, ಚಂದ್ರಹಾಸ ಶೆಟ್ಟಿ, ಗಣೇಶ ಶೆಟ್ಟಿ ವಿಕ್ರೋಲಿ ಮೊದಲಾದವರು ಉಪಸ್ಥಿತರಿದ್ದರು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ವಿದೂಷಿ ನಂದಿನಿ ರಾವ್ ಬಳಗ ಬೆಂಗಳೂರು ಅವರು ಭಕ್ತಿಗೀತೆ, ಭಾವಗೀತೆ ಮತ್ತು ಜಾನಪದ ಸಾದರ ಪಡಿಸಿದ್ದು, ಯಕ್ಷ ವ್ಯಾಖ್ಯಾನ, ಕರ್ಣಪರ್ವ ಯಕ್ಷಗಾನದ ದ್ವಂದ ಭಾಗವತಿಕೆಯನ್ನು ಯಕ್ಷ ಸಮ್ರಾಟ ಪಟ್ಲ ಸತೀಶ್ ಶೆಟ್ಟಿ ಅವರು ಮತ್ತು ಗಾನಕೋಗಿಲೆ ರಾಘವೇಂದ್ರ ಆಚಾರ್ಯ ನಡೆಸಿದ್ದು, ಇದರ ವಿಶ್ಲೇಷಣೆಯನ್ನು ಶ್ರೀಗಳು ಪ್ರಸಂಗ ರೂಪದಲ್ಲಿ ವಿವರಿಸಿದರು. ಆಧ್ಯಾತ್ಮಿಕ ವೇದಿಕೆಯ ಪದಾಧಿಕಾರಿಗಳಾದ ಜಯ ಕೆ.ಸೂಡ, ಶಾಂತರಾಮ ಶೆಟ್ಟಿ, ರಮೇಶ್ ಎಸ್.ಶೆಟ್ಟಿ, ಶ್ರೀಮತಿ (ಡಾ|) ಸತ್ಯ ಸೀತರಾಮ ಶೆಟ್ಟಿ, ಲತಾ ಪ್ರಭಾಕರ ಶೆಟ್ಟಿ, ವೇಣುಗೋಪಾಲ್ ಸಿ.ಶೆಟ್ಟಿ ಸೇರಿದಂತೆ ನೂರಾರು ಭಕ್ತಾಭಿಮಾನಿಗಳು ಉಪಸ್ಥಿತರಿದ್ದು, ವಿನೋದಾ ಚೌಟ ಪ್ರಾರ್ಥನೆಗೈದರು. ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ ವರದಿ : ರೋನ್ಸ್ ಬಂಟ್ವಾಳ್




