ಮುಂಬಯಿ : ಮಾಯಾನಗರಿಯ ನಾಗದೇವರ ಕ್ಷೇತ್ರ ಎಂದೇ ಪ್ರಸಿದ್ಧಿಯಲ್ಲಿರುವ ಮುಂಬಯಿ ಉಪನಗರದ ಪೊವಾಯಿ ಇಲ್ಲಿನ ಪಂಚಕುಟೀರದ ಶ್ರೀ ಮಹಾಶೇಷ ರುಂಡಮಾಲಿನಿ ಮಂದಿರದಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ಸುವರ್ಣ ಬಾಬಾ ಅವರ ನೇತೃತ್ವದಲ್ಲಿ ನಾಗರ ಪಂಚಮಿಯನ್ನು ಅದ್ದೂರಿಯಿಂದ ಆಚರಿಸಲಾಯಿತು.ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ನಾಗಬನ ಮತ್ತು ಹತ್ತು ಹೆಡೆಯ ನಾಗದೇವರುಗಳನ್ನು ಸ್ಥಾಪಿಸಲ್ಪಟ್ಟಿರುವ ಕ್ಷೇತ್ರದಲ್ಲಿ ಕಳೆದ ಸುಮಾರು ಆರು ದಶಕಗಳಿಂದ ಮಹಾಶೇಷ ರುಂಡಮಾಲಿನಿ ಶ್ರೀ ದೇವಿಯ ಆರಾಧನೆ ಮತ್ತು ನಾಗರಪಂಚಮಿ ಹಾಗೂ ದಸರ ಉತ್ಸವವನ್ನು ವೈಭವಪೂರ್ಣವಾಗಿ ನಡೆಸಲಾಗುತ್ತಿದ್ದು, ಇಂದಿಲ್ಲಿ ಬೆಳಗ್ಗೆ 7ರಿಂದ ಶ್ರೀ ಮಹಾಗಣಪತಿ ಪೂಜೆ ಸ್ವಸ್ತಿ ವಾಚನ, ನವಗ್ರಹ ಹೋಮ, ದಿಕ್ಪಾಲ ಹೋಮ, ಅಷ್ಟ ದಿಕ್ಪಾಲ ಬಲಿ (ಪ್ರಾಕಾರ ಬಲಿ), ಶಿಖರ ಕುಂಭಾಭಿಷೇಕ (ಬ್ರಹ್ಮಕಲಶ) ಶ್ರೀ ನಾಗರದೇವರ ಸನ್ನಿಧಿಯಲ್ಲಿ ನವಕ ಪ್ರಧಾನ ಹೋಮ, ಪಂಚಾಮೃತ ಅಭಿಷೇಕ, ಸಹಸ್ರ ನಾರಿಕೇಳಾಭಿಷೇಕ, ನವಕಲಶ ಮಹಾಭಿಷೇಕ, ನಾಗದೇವರ ಮೂರ್ತಿಬಲಿ, ನಾಗದರ್ಶನ ಮತ್ತು ತೀರ್ಥಪ್ರಸಾದ ವಿತರಣೆ ನೆರವೇರಿಸಲ್ಪಟ್ಟಿತು.Swarna Mndir Powai-9

Swarna Mndir Powai-4

Swarna Mndir Powai-3

Swarna Mndir Powai-12

Swarna Mndir Powai-21

Swarna Mndir Powai-25

ಗಣೇಶ್ ಎರ್ಮಾಳ್ ಮತ್ತು ಬಳಗದ ವತಿಯಿಂದ ಭಕ್ತಿ ರಸಮಂಜರಿ ಮುಂತಾದ ಇತರರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾದರಗೊಂಡವು. ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಉದ್ಯಮಿ, ಸಮಾಜಸೇವಕರು ಮಹಾನೀಯರು ಆಗಮಿಸಿ ಶ್ರೀದೇವರಿಗೆ ಪೂಜೆಸಲ್ಲಿಸಿದರು.ನೆರೆದಿದ್ದ ನೂರಾರು ಸಂಖ್ಯೆಯ ಸದ್ಭಕ್ತರನ್ನು ಶಿಸ್ತುಬದ್ಧವಾಗಿ ಪೂಜಾಧಿಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಲ್ಲವರ ಎಸೋಸಿಯೇಶನ್‍ನ ಸೇವಾದಳದ ಮುಖ್ಯಸ್ಥ ಗಣೇಶ್ ಕೆ.ಪೂಜಾರಿ ನೇತೃತ್ವದಲ್ಲಿ ಸೇವಾದಳದ ಕಾರ್ಯಕರ್ತರು ಶ್ರಮಿಸಿದ್ದು, ಸಮಾಜ ಸೇವಕರುಗಳಾದ ಕೇಶವ ಅಂಚನ್, ಸುಧಾಕರ ಪೂಜಾರಿ, ನ್ಯಾ| ರವಿ ಕೋಟ್ಯಾನ್, ಜಗಧೀಶ್ ಸುವರ್ಣ ಮತ್ತು ರಾಹುಲ್ ಸುವರ್ಣ ಮುಂತಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.

ಚಿತ್ರ ವರದಿ : ರೋನ್ಸ್ ಬಂಟ್ವಾಳ್

By Suddi9

Leave a Reply

Your email address will not be published. Required fields are marked *