ಮುಂಬಯಿ: ಮಹಾರಾಷ್ಟ್ರ ಕೊಂಕಣ್ ಅಸೋಸಿಯೇಶನ್ ಮುಂಬಯಿ ತನ್ನ ವಾರ್ಷಿಕ ಪ್ರತಿಭಾ ಪುರಸ್ಕಾರ-2016ನ್ನು ಕಳೆದ ರವಿವಾರ ಕುರ್ಲಾ ಪಶ್ಚಿಮದಲ್ಲಿನ ಜೆರಿಮೆರಿ ಸೈಂಟ್ ಜೂಡ್ ಚರ್ಚ್‍ನ ಸಭಾಗೃಹದಲ್ಲಿ ಅಸೋಸಿಯೇಶನ್‍ನ ಅಧ್ಯಕ್ಷೆ ಶ್ರೀಮತಿ ಬೆನೆಡಿಕಾಚ್ಬಿ.ರೆಬೆಲ್ಲೊ ಅಧ್ಯಕ್ಷತೆಯಲ್ಲಿ ನೇರವೇರಿಸಿತು.ಕಾರ್ಯಕ್ರಮದಲ್ಲಿ ಸೈಂಟ್ ಜೂಡ್ ಚರ್ಚಿನಾ ಧರ್ಮಗುರುಗಳಾದ ರೆ|ಫಾ| ಲ್ಯಾನ್ಸಿ ಪಿಂಟೋ ಉಪಸ್ಥಿತರಿದ್ದು, 2015-2016ನೇ ಸಾಲಿನ ಪರೀಕ್ಷೆಯಲ್ಲಿ ಸರ್ವೋತ್ಕೃಷ್ಟರಾಗಿ ಉತ್ತೀರ್ಣರಾದ ಸಂಸ್ಥೆಯ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಪ್ರದಾನಿಸಿ ಗೌರವಿಸಿದರು. ಹಾಗೂ ವಿಲಿಯಂ ಡಿ’ಸೋಜಾ ವಕೋಲಾ ಮತ್ತು ಅಸೋಸಿಯೇಶನ್‍ನ ಮಾಜಿ ಅಧ್ಯಕ್ಷ ವಾಲ್ಟರ್ ಡಿ’ಸೋಜಾ ಉಪಸ್ಥಿತರಿದ್ದು, ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.

ಬಹು ಭಾಷೆಗಳನ್ನು ಕಲಿಯುವುದರಿಂದ ಜೀವನ ಸುಗಮವಾಗುತ್ತದೆ. ಇದ್ದರಿಂದ ಅನ್ಯ ಭಾಷಿಕರ ಬಾಂಧವ್ಯ ಸಮೀಪಿಸುತ್ತದೆ. ಬಹುಭಾಷಾ ಪರಿಣತೆ ಮೇಧಾವಿತನದ ಆಸ್ತಿಯಂತಿದ್ದು, ಕೊಂಕಣಿ ಭಾಷೆಯ ಮೂಲಕ ಸದಾ ಸರ್ವರನ್ನೂ ಪ್ರೋತ್ಸಾಹಿಸುತ್ತಿರುವ ಕೊಂಕಣ್ ಅಸೋಸಿಯೇಶನ್‍ನ ಸೇವೆ ಅನನ್ಯವಾದದ್ದು, ಇಂತಹ ಸಂಸ್ಥೆಯ ಸೇವೆಯಲ್ಲಿ ನಿಸ್ವಾರ್ಥ ಮನೋಭಾವದಿಂದ ಪಾಲ್ಗೊಂಡು ನಾವೂ ನೆಮ್ಮದಿಯನ್ನೂ ಅನುಗ್ರಹವನ್ನೂ ಪಡೆಯಬೇಕು ಎಂದು ಫಾ| ಪಿಂಟೋ ಆರ್ಶಿವಾದಿಸಿದರು.ಪದಾಧಿಕಾರಿಗಳಾದ ಜೋನ್ ವೇಗಸ್, ವಿಕ್ಟರ್ ಪಿರೇರಾ, ಜೋನ್ ರೋಡ್ರಿಗಸ್ ಇವರು ಕಾರ್ಯಕ್ರಮ ಉಸ್ತುವರಿಯಲ್ಲಿ ಜರುಗಿಸಲ್ಪಟ್ಟ ಕಾರ್ಯಕ್ರಮವನ್ನು ಸ್ಥಾಪಕಾಧ್ಯಕ್ಷ ಲಿಯೋ ಫೆರ್ನಾಂಡಿಸ್ ಜೆರಿಮೆರಿ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿ ಸಂಸ್ಥೆಯ ಚಟುವಟಿಕೆಗಳನ್ನು ವಿವರಿಸಿದರು. ವಿನ್ಸೆಂಟ್ ಕ್ಯಾಸ್ತೆಲಿನೋ ಧನ್ಯವಾದಗೈದರು.
