ಮುಂಬಯಿ: ಜೆರಿಮೆರಿಯಲ್ಲಿನ ಶ್ರೀ ಉಮಾ ಮಹೇಶ್ವರೀ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಿಸುತ್ತಿದ್ದು, ಇಂದಿಲ್ಲಿ ರವಿವಾರ ಬೆಳಿಗ್ಗೆ ಉಮಾಮಹೇಶ್ವರಿ ಸಾಮೂಹಿಕ ಅಶ್ಲೇಷ ಬಲಿ, ನಾಗತಂಬಿಲ, ನಾಗತನು, ಸೀಯಾಳ, ಪಂಚಾಮೃತ ಹಾಗೂ ಕ್ಷೀರಾಭಿಷೇಕ, ಮಹಾಪೂಜೆ ನೆರವೇರಿಸ ಲಾಯಿತು.ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಕೆ ಶೀನ ಪೂಜಾರಿ ಮತ್ತು ಲಲಿತಾ ಶೀನ ದಂಪತಿ ಮುಂದಾಳುತ್ವದ ಲ್ಲಿ ದೇವಸ್ಥಾನದ ಶಿಲಾಮಯ ಗುಡಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ನೆರವೇರಿಸಲಾದ ನಾಗರ ಪಂಚಮಿಯಲ್ಲಿ ನಗರದಾದ್ಯಂತ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.

ದೇವಸ್ಥಾನದಲ್ಲಿನ ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ ಮತ್ತು ಶ್ರೀ ಉಮಾ ಮಹೇಶ್ವರೀ ದೇವಿಗೆ ದೇವಸ್ಥಾನದ ಪ್ರಧಾನ ಆರ್ಚಕ ಶ್ರೀನಿವಾಸ ಎನ್.ಉಡುಪ ಅವರು ಪೂಜಾಧಿಗಳನ್ನು ನೆರವೇರಿಸಿ ನೆರೆದ ಸದ್ಭಕ್ತರನ್ನು ಅನುಗ್ರಹಿಸಿದರು. ದೇವಸ್ಥಾನದ ಆರ್ಚಕ ರಾಜೇಶ್ ಭಟ್ ಆರತಿಗೈದು ತೀರ್ಥಪ್ರಸಾದ ವಿತರಿಸಿ ಭಕ್ತಾಭಿಮಾನಿಗಳನ್ನು ಹರಸಿದರು. ನಾಗರಾಜ ಐತಾಳ್, ಎಸ್.ಎನ್ ಭಟ್, ರಂಗಣ್ಣ ಭಟ್ ಮತ್ತಿತರ ಪುರೋಹಿತರು ಪೂಜೆಗಳಲ್ಲಿ ಸಹಕರಿಸಿದ್ದರು. ನಾಗರಾಜ ಐತಾಳ್, ಎಸ್.ಎನ್ ಭಟ್, ರಂಗಣ್ಣ ಭಟ್ ಮತ್ತಿತರ ಪುರೋಹಿತರು ಪೂಜೆಗಳಲ್ಲಿ ಸಹಕರಿಸಿದ್ದರು.Uma Maheshwari Jerimeri-B2

Uma Maheshwari Jerimeri-A1

Uma Maheshwari Jerimeri-1

Uma Maheshwari Jerimeri-3

Uma Maheshwari Jerimeri-9

Uma Maheshwari Jerimeri-A1

Uma Maheshwari Jerimeri-B1

ಈ ಸಂದರ್ಭದಲ್ಲಿ ಶ್ರೀಮತಿ ಸರೀತಾ ಶ್ರೀಮತಿ ಸೋನಿಯಾ, ತರುಣ್, ತೋನ್ಸೆ ಸಂಜೀವ ಪೂಜಾರಿ, ರವೀಂದ್ರ ಎ.ಅವಿೂನ್, ಗೀತಾ ಶೆಟ್ಟಿ, ಸರೋಜಿನಿ ಪೂಜಾರಿ, ಶುಭಾ ದೇವಾಡಿಗರಿ, ಪ್ರಕಾಶ್ ರಾವ್, ಸತೀಶ್ ಪೂಜಾರಿ ಸೇರಿದಂತೆ ಹಲವಾರು ಅನೇಕ ಭಕ್ತರು ಸೇವಾರ್ಥಿಗಳಾಗಿ ಸಹಕರಿಸಿದರು. ಮಧ್ಯಾಹ್ನ ಮಹಾಪೂಜೆ, ಮಹಾರತಿ ನೆರವೇರಿಸಿ ಮಹಾ ಅನ್ನಸಂತಾರ್ಪಣೆ, ತೀರ್ಥಪ್ರಸಾದ ನಡೆಸಲ್ಪಟ್ಟಿತು.

ಚಿತ್ರ  ವರದಿ: ರೋನ್ಸ್ ಬಂಟ್ವಾಳ್

By suddi9

Leave a Reply

Your email address will not be published. Required fields are marked *