ವಿಟ್ಲ ಎರುಂಬು ಬೊಳ್ನಾಡು ಶ್ರೀ ಭಗವತೀ ತೀಯ ಸಮಾಜ ಸೇವಾ ವತಿಯಿಂದ ಎರುಂಬುವಿನಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.  ಈ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿದ ಅಳಿಕೆ ವಿದ್ಯಾಸಂಸ್ಥೆಯ ಉಪನ್ಯಾಸಕ ಶ್ರೀಧರ ಕೆ ಅಳಿಕೆ `ಗಿಡ ಮರಗಳನ್ನು ನೆಟ್ಟು ಬೆಳೆಸಿ ಭೂಮಿಯ ಒಡಲನ್ನು ತಂಪಾಗಿಸೋಣ,’ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬೊಳ್ನಾಡು ಶ್ರೀ ಭಗವತಿ ಕ್ಷೇತ್ರದ ಪುನರ್ ನಿರ್ಮಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಆನಂದ ಕಲ್ಲಕಟ್ಟ, ಯುವಜನ ಸಂಘದ ಅಧ್ಯಕ್ಷ ರಾಜೇಶ್ ಕರವೀರ, ಗೌರವ ಅಧ್ಯಕ್ಷ ಮೋನಪ್ಪ ಮುಡಾಯಿಬೆಟ್ಟು, ಮಹಿಳಾ ಸಂಘದ ಕಾರ್ಯದರ್ಶಿ ಸವಿತಾ ಚಂದ್ರಶೇಖರ್ ಹಾಗೂ ತೀಯ ಸಮಾಜ ಬಾಂಧವರು ಉಪಸ್ಥಿತರಿದ್ದು ಸಹಕರಿಸಿದರು.B (1)

B (2)

By suddi9

Leave a Reply

Your email address will not be published. Required fields are marked *