ವಿಟ್ಲ :ಭಗವತೀ ದೇವಸ್ಥಾನ ಮತ್ತು ಭಗವತೀ ಸೇವಾ ಸಮಿತಿ ವಿಟ್ಲ ಇದರ ಜಂಟಿ ಆಶ್ರಯದಲ್ಲಿ ಸಸಿ ವಿತರಣೆ ಮತ್ತು ವನಮಹೋತ್ಸವ ಕಾರ್ಯಕ್ರಮವು 24-07-2016 ರಂದು ಭಗವತೀ ದೇವಸ್ಥಾನದಲ್ಲಿ ನಡೆಯಿತು. ಪುತ್ತೂರು ವಿಧಾನ ಸಭಾ ಕ್ಷೆತ್ರದ ಶಾಸಕಿ ಮತ್ತು ಸಂಸದೀಯ ಕಾರ್ಯದರ್ಶಿ ಶಕುಂತಳಾ ಶೆಟ್ಟಿ ಸಸಿ ವಿತರಿಸಿ ಶುಭಹಾರೈಸಿದರು. ಈ ಕಾರ್ಯಕ್ರಮವನ್ನು ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಉದ್ಘಾಟಿಸಿದರು. ಪತ್ತೂರು ಉಪವಲಯ ಅರಣ್ಯಾಧಿಕಾರಿ ಲೋಕೇಶ್ ಎಸ್ ಎನ್ ವನಮಹೋತ್ಸವದ ಮಹತ್ವ ತಿಳಿಸಿದರು. ಅಧ್ಯಕ್ಷತೆ ಕೇಶವ ವಿ ಆರ್ ವಹಿಸಿದ್ದರು.

SHV_6708ಮುಖ್ಯ ಅತಿಥಿಗಳಾಗಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ವಿಟ್ಲ, ದಿನೇಶ್ ನಾಯಕ್ ಸಸ್ಯ ಶ್ಯಾಮಲ ವಿಟ್ಲ, ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಪ್ರೌಢ ಶಾಲೆಯ ಅಧ್ಯಾಪಕ ಈಶ್ವರ ಭಟ್ ಕಾನ, ವಿಟ್ಲ ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷ ವಿ ಭಾಸ್ಕರ ಶೆಟ್ಟಿ ಮತ್ತು ವಿಟ್ಲ ಶ್ರೀರಾಮ ಎಂಟರ್ ಪ್ರೈಸಸ್ ನ ಹರೀಶ್ ಪೂಜಾರಿ ಭಾಗವಹಿಸಿದ್ದರು. ಭಗವತಿ ದೇವಸ್ಥಾನದ ಗುರು ಸ್ವಾಮಿ ಮತ್ತು ಬಿ ಮೋಹನ, ಸೇವಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಡ್ಕ ಉಪಸ್ಥಿತರಿದ್ದರು. ಭಗವತೀ ಸೇವಾ ಸಮಿತಿಯ ಗೌರವಾಧ್ಯಕ್ಷ ಭಾರತ್ ಶಾಮಿಯಾನಾದ ಸಂಜೀವ ಪೂಜಾರಿ ಸ್ವಾಗತಿಸಿ ವಂದಿಸಿದರು. ಶಿಕ್ಷಕ ವಿಶ್ವನಾಥ ಬಿ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ವಲ್ ಕೆ ಸಹಕರಿಸಿದರು.

By suddi9

Leave a Reply

Your email address will not be published. Required fields are marked *