ವಿಟ್ಲ: ಯೂತ್ ಬಿಲ್ಲವ ಎಸೋಸಿಯೇಶನ್ ವಿಟ್ಲ ಮತ್ತು ಮಹಿಳಾ ಘಟಕ ಶಿವಗಿರಿ ಪೊನ್ನೋಟು ವಿಟ್ಲ ಇದರ ನಾಲ್ಕನೇ ವರ್ಷದ `ಆಟಿಡೊಂಜಿ ಕೂಟ’ ಕಾರ್ಯಕ್ರಮವು ಸಂಘದ ನಿವೇಶನದಲ್ಲಿ ಜು. 24 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರು ಆರೋಗ್ಯ ಮೇಲ್ವಿಚಾರಕ ಜಯರಾಮ ಪೂಜಾರಿ ಮತ್ತು ವಿಟ್ಲ ಮೂಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಲತಾ ರವರು ಚೆನ್ನೆ ಮಣೆ ಆಟದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

SHV_6732

SHV_6738

 

ಆಟಿ ತಿಂಗಳ ವಿಶೇಷ ತಿನಿಸುಗಳ ಬಗ್ಗೆ ಮತ್ತು ಅದರಿಂದ ಆರೋಗ್ಯ ಹೇಗೆ ವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಸಂಘದ ಅಧ್ಯಕ್ಷ ಚಂದ್ರಹಾಸ ಸುವರ್ಣ ವಹಿಸಿದ್ದರು. ಬ್ರಹ್ಮಶ್ರೀ ಸಹಕಾರ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ ವೇದಿಕೆಯಲ್ಲಿದ್ದರು. ತುಷಾರ ದಾಮೋಧರ್ ಸ್ವಾಗತಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ಸಂಜೀವ ಪೂಜಾರಿ ಪ್ರಸ್ತಾವಿಸಿದರು. ಸಂಗೀತ ಜಗದೀಶ್ ವಂದಿಸಿದರು. ಪುಷ್ಪಾ ಸಂಜೀವ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸದಸ್ಯರು ತಯಾರಿಸಿದ ಸುಮಾರು 35 ಕ್ಕೂ ಹೆಚ್ಚು ತಿನಿಸಿಗಳನ್ನು ಎಲ್ಲರೂ ಸವಿದರು.

By suddi9

Leave a Reply

Your email address will not be published. Required fields are marked *