ಹಾವೇರಿ: ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಕಾರ್ಯಾಚರಿಸುತ್ತಿರುವ ಮುಈನುಸುನ್ನಾ ಮೋರಲ್ ಅಕಾಡಮಿ ವಿದ್ಯಾಸಂಸ್ಥೆಯ ನೂತನ ವಸತಿ ಶಾಲಾ ಕಟ್ಟಡದ ಶಿಲಾನ್ಯಾಸವನ್ನು ಉಳ್ಳಾಲ ಸಹಿತ ಹಲವು ಮೊಹಲ್ಲಾಗಳ ಖಾಝಿ ಅಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ನೇರವೇರಿಸಿದರು. 
ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಕುಗ್ರಾಮಗಳಿಂದ ಬಂದ ವಿದ್ಯಾರ್ಥಿಗಳು ಮುಈನುಸುನ್ನಾದಲ್ಲಿ ವಸತಿ ಸಹಿತ ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಪ್ರಾಸ್ತಾವಿಕವಾಗಿ ಮಾತಾನಾಡಿದ ಸಂಸ್ಥೆಯ ಪ್ರಧಾನ ಕಾರ್ಯದಶೀ ಮುಸ್ತಫಾ ನಈಮಿ ತಿಳಿಸಿದರು. ಸಮಾರಂಭದಲ್ಲಿ ಹಮೀದ್ ಫೈಝಿ ಕಿಲ್ಲೂರು, ಹಾವೇರಿ ಜಿಲ್ಲಾ ಎಸ್‍ಎಸ್‍ಎಫ್ ಅಧ್ಯಕ್ಷ ಇಕ್ಬಾಲ್ ರಾಣಿಬೆನ್ನೂರು, ಸವಣೂರು ತಾಲೂಕು ಮಾನವ ಹಕ್ಕು ಸಂಘಟನೆಯ ಅಧ್ಯಕ್ಷ ಬಾಬನ್ ಸಾಬ್ ರಾಯಚೂರು ಸಹಿತ ಹಲವು ಗಣ್ಯವ್ಯಕ್ತಿಗಳು ಭಾಗವಹಿಸಿದ್ದರು.
