ಸುದ್ದಿ9 ಬಂಟ್ವಾಳ: : ಭಾರತೀಯ ಜನತಾ ಪಾಟರ್ಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ 12ನೇ ದಿನದ ಪಾದಾಯಾತ್ರೆಗೆ ಪಂಜಿಕಲ್ಲಿನಲ್ಲಿ ಚಾಲನೆ ನೀಡಲಾಯಿತು. ವಂದೆ ಮಾತರಂ ಹಾಡಿನ ಬಳಿಕ ಆರಂಭಗೊಂಡ ಪಾದಾಯಾತ್ರೆಯು ಕೂರಿಯಾಳ, ಅಮ್ಟಾಡಿ, ಕಳ್ಳಿಗೆ ಗ್ರಾಮಗಳಲ್ಲಿ ಸಂಚರಿಸಿತು.
12ನೇ ದಿನದ ಪಾದಯಾತ್ರೆಯಲ್ಲಿ ಕಾರ್ಯಕ್ರಮದ ರುವಾರಿ ರಾಜೇಶ್ ನಾಕ್ ಉಳಿಪಾಡಿಗುತ್ತು, ಪ್ರಮುಖರಾದ ಪ್ರತಾಪ್ಸಿಂಹ ನಾಯಕ್, ದೇವದಾಸ್ ಶೆಟ್ಟಿ, ರಾಮ್ದಾಸ್, ಪುರುಷ ಸಾಲ್ಯಾನ್ ನೆತ್ತರಕೆರೆ, ಪ್ರಥ್ವಿರಾಜ್, ರಝಾಕ್, ರಮಾನಾಥ ರಾಯಿ, ಸಂಜೀವ ಪೂಜಾರಿ, ಕರುಣೇಂದ್ರ ಪೂಜಾರಿ ಮತ್ತಿತರರು ಹಾಜರಿದ್ದರು.
