ಕೈಕಂಬ: ಪೊಳಲಿ ಕ್ಷೇತಕ್ಕೆ ದೂರದೂರದಿಂದ ಬರುವ ಭಕ್ತಾಧಿಗಳಿಗೆ ದೇವರ ದರ್ಶನ ಪಡೆದು ಬಂದು ತಂಗಲು ಅನುಕೂಲ ವಾಗುವಂತಹ ಸುಸಜ್ಜಿತವಾದ 13 ಕೊಠಡಿಗಳ ಫಲ್ಗುಣಿ ವಸತಿ ಗೃಹವನ್ನು ಹಾಗೂ ಶೌಚಾಲಯದ ಉದ್ಘಾಟನೆಯನ್ನು ಜು.10ರಂದು ಭಾನುವಾರ ಸಚಿವ ರಮಾನಾಥ ರೈ ಅವರು ನೆರವೇರಿಸಿ ಮಾತನಾಡಿದರು.ಹೆಸರಾಂತ ಪೊಳಲಿ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಅಧಿಕವೇ ಇದೆ. ವಸತಿ ವ್ಯವಸ್ಥೆ ಇಲ್ಲದೆ ಇದ್ದುದರಿಂದ ಗ್ರಾಮೀಣ ಸೊಗಡಿನ ದೇವಳದ ಪರಿಸರದಲ್ಲಿ ಒಂದಷ್ಟು ಹೊತ್ತು ಇದ್ದು ಹೋಗುವ ಅಥವಾ ತಂಗಿ ಮರುದಿನ ಹೋಗುವ ಮನಸ್ಸಿದ್ದವರಿಗೆ ಅಥವಾ ದೂರದೂರಿನಿಂದ ಬಂದವರಿಗೆ ಉಳಿದುಕೊಳ್ಳಲು ಆಗದೆ ತೆರಳುವುದು ಅನಿವಾರ್ಯವಾಗಿತ್ತು. ಈ ಸಮಸ್ಯೆ ನೀಗಿಸುವುದಕ್ಕೆ ವಷಱಗಳ ಹಿಂದೆಯೇ ಯೋಜನೆಯನ್ನು ರೂಪಿಸಲಾಗಿತ್ತು. ಅಂದಿನ ಮುಜರಾಯಿ ಇಲಾಖೆಯ ಸಚಿವ ಅಮರನಾಥ ಶೆಟ್ಟಿ ವಸತಿಗ್ರಹಕ್ಕೆ ಹಣವನ್ನು ಬಿಡುಗಡೆಮಾಡಿದ್ದರು ಕೂಡ. ಆದರೆ ಕಾರಣಾಂತರದಿಂದ ಕಟ್ಟಡ ನಿರ್ಮಾಣ ನೆನೆಗುದಿಗೆ ಬಿದ್ದಿತ್ತು. ಇದೀಗ ವಸತಿಗ್ರಹ ಕನಸು ನನಸಾಗುವುದಕ್ಕೆ ಹೆಚ್ಚಿನ ಮುತುರ್ಜಿ ವಹಿಸಿದ್ದರ ಫಲವಾಗಿ ಅನುದಾನ ಬಿಡುಗಡೆ ಮಾಡಲಾಯಿತು. ಸುಸಜ್ಜಿತವಾದ ಕಟ್ಟಡವೂ ಉದ್ಘಾಟನೆಗೊಂಡಿದೆ. ಕ್ಷೇತ್ರದ ಅಭಿವ್ರದ್ಧಿಯ ನಿಟ್ಟಿನಲ್ಲಿ ಇದೂ ಮುಖ್ಯವಾಗುತ್ತದೆ. ರಥಬೀದಿಗೆ ಕಾಂಕ್ರೀಟಿಕರಣ ಗೊಳಿಸಿ ಭಕ್ತಾಧಿಗಳಿಗೆ ಅನುಕೂಲವಾಗುವಂತೆ ಮಾಡಿ ಇನ್ನು ಹೆಚ್ಚಿನ ಕೆಲಸಗಳು ಈ ಭಾಗದಲ್ಲಿ ಆಗಬೇಕಿದೆ. ಇದಕ್ಕೆ ಎಲ್ಲರು ಕೈ ಜೋಡಿಸಿದಾಗ ಇಂತಹ ಕಾರ್ಯಕ್ರಮಗಳನ್ನು ಮಾಡಬಹುದು ಎಂದು ಹೇಳಿದರು.ಕ್ಷೇತ್ರದ ಸರ್ವೋನ್ನತ ಅಭಿವೃದ್ಧಿಗೆ ಸಹಕಾರ ನೀಡುವ ಭರವಸೆ ನೀಡಿದ ಅವರು ದೇವಳದ ಜೀರ್ಣೋದ್ದಾರ ನೆರವೇರಲು ಎಲ್ಲರು ಸಹಕರಿಸಬೇಕು ಎಂದು ಹೇಳಿದರು.
ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಹರಿನಾರಾಯಣ ಆಸ್ರಣ್ಣ ಅವರು ಮಡಿವಂತಿಕೆಯಿಂದ ದೇವರನ್ನು ಕಾಣಬಹುದು ದೇವಳದ ಸುತ್ತಮುತ್ತ ಸ್ವಚ್ಚತೆ ಇದ್ದು ಹತ್ತರವೇ ಅಥಿತಿಗೃಹದಲ್ಲಿ ಮಲಗಿ ನಿದ್ರಿಸಿದರೆ ದೇವರನ್ನು ಕಾಣಬಹುದು. ದೇವಲದಲ್ಲಿಯೇ ದೂರದಿಂದ ಬರುವ ಭಕ್ತಾಧಿಗಳಿಗೆ ಉಳಕೊಳ್ಳಲು ಅಥಿತಿಗೃಹ ಇದ್ದರೆ ಬರುವ ಭಕ್ತಾಧಿಗಳು ಹೆಚ್ಚಾಗುತ್ತಾರೆ ಎಂದು ನುಡಿದರು.
ಈ ನಡುವೆ ದೇವಳಕ್ಕೆ ಬಂದ ಪುತ್ತೂರು ಶಾಸಕಿ ಶಕುಂತಳ ಶೆಟ್ಟಿ ಅವರು ಮಾತಾಡಿ ತಾಯಿ ಕೃಪೆಯಿಂದ ನಾನು ಸಹ ಭಾಗವಹಿಸುವಂತಾಯಿತು ಎಂದು ಶುಭ ನುಡಿದರು.
ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿತುಂಬೆ, ಕರಿಯಂಗಳ ಗ್ರಾಮ ಪಂ.ಅಧ್ಯಕ್ಷೆ ಪಿ ಚಂದ್ರಾವತಿ, ಉಳಿಪಾಡಿಗುತ್ತು ರಾಜೇಶ್ ನಾೈಕ್ , ತಾಲೂಕು ಪಂಚಾಯತ್ ಸದಸ್ಯ ಯಶವಂತ ಪೂಜಾರಿ ಪೊಳಲಿ, ಚಂದ್ರಶೇಖರ ಭಂಡಾರಿ, ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯ, ಪೊಳಲಿ ಕ್ಷೇತದ್ರ ತಂತ್ರಿ ವೆಂಕಟೇಶ್, ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ, ಮೊಕ್ತೇಸರರಾದ ಯು. ತಾರಾನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್ ದೇವಳದ ಕಾರ್ಯನಿರ್ವಹಣಾಧಿಕಾರಿ ಹರೀಶ್ಚಂದ್ರ ಉಪಸ್ಥಿತರಿದ್ದರು. ಕೆ. ರಾಮ್ ಭಟ್ ಪೊಳಲಿ ಸ್ವಾಗತಿಸಿ ಸುಬ್ರಾಯ ಕಾರಂತ ವಂದಿಸಿದರು. ಅವಿನಾಶ್ ಕಡೆಶಿವಾಲಯ ನಿರೂಪಿಸಿದರು.





















