ಕೈಕಂಬ: ಪೊಳಲಿ ದೇವಳದ ಸರ್ವಮಂಗಳಾ ಹಾಲ್ ನಲ್ಲಿ ಭಾನುವಾರ ಪ್ರತಿಷ್ಟಿತ ಕುಟುಂಬದವರ ಮದುವೆ ಕಾರ್ಯಕ್ರಮವಿದ್ದ ಕಾರಣ ಸಂಭ್ರಮಾಚರಣೆಗೆ ದೊಡ್ಡ ದೊಡ್ಡ ಕಾರುಗಳಲ್ಲಿ ಆಗಮಿಸಿದ ನೆಂಟರಿಷ್ಟರು ತಮ್ಮ ವೆಹಿಕಲ್ ಗಳನ್ನು ಜಾಗ ಇದ್ದ ಕಡೆ ಪಾರ್ಕ್ ಮಾಡಲಾಗಿತ್ತು. ಹಲಾವಾರು ವಾಹನಗಳನ್ನು ಪೊಳಲಿ ದೇವಳಕ್ಕೆ ಬರುವ ರಸ್ತೆ ಬದಿಯಲ್ಲೆ ಪಾರ್ಕ ಮಾಡಿದ ಪರಿಣಾಮ ದೇವಳಕ್ಕೆ ಬರುವ ಭಕ್ತಾದಿಗಳಿಗೆ ಒಂದು ಗಂಟೆ ಬ್ಲಾಕ್ ಆಗಿತ್ತು ಕೆಲವರು ನಿಂತಲ್ಲೆ ವಾಹನಗಳನ್ನು ನಿಲ್ಲಿಸಿ ರಸ್ತೆ ಬದಿಯಲ್ಲೆ ವಾಹನಗಳನ್ನು ಬಿಟ್ಟು ನಡೆದುಕೊಂಡು ಹೋಗುವ ದೃಷ್ಯ ಕಂಡು ಬಂತು. ದಿನ ದಿನದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪೊಳಲಿ ದೇವಾಲಯಕ್ಕೆ ಆಗಮಿಸುತ್ತಿದ್ದು ಇದರಿಂದ ವಹಿಕಲ್ ನವರಿಗೆ ಪಾರ್ಕ್ ಮಾಡಲು ಸರಿಯಾದ ಜಾಗವಿಲ್ಲದೆ ಪರದಾಡುತ್ತಿರುವ ದೃಷ್ಯ ಕಂಡು ಬಂತು. 



