ವಿಟ್ಲ: ಸಂತ ರೀಟಾ ವಿದ್ಯಾಸಂಸ್ಥೆ ವಿಟ್ಲ ಇದರ ಆಶ್ರಯದಲ್ಲಿ ಜು.4 ರಂದು ಸೋಮವಾರ ದಂದು ಶಾಲಾ ವಾಹನ ಚಾಲಕ,ಮಾಲಕರ ಹಾಗು ಪೋಷಕರಲ್ಲಿ ಮಕ್ಕಳ ರಕ್ಷಣೆಯ ಕುರಿತು ಜಾಗೃತಿ ಮೂಡಿಸಲು ರಸ್ತೆ ಸುರಕ್ಷತಾ ಮುಂಜಾಗೃತಿ ಸಭೆಯು ನಡೆಯಿತು. ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ವಿಟ್ಲ ಠಾಣೆ ಉಪನಿರೀಕ್ಷಕರಾದ ಪ್ರಕಾಶ್ ದೇವಾಡಿಗ ಮಾತನಾಡಿ ಮಕ್ಕಳ ಹಿತದೃಷ್ಠಿಯಿಂದ ಅವರನ್ನು ಕರೆತರುವ ವಾಹನ ಚಾಲಕರು ಹಾಗೂ ಪೋಷಕರು ಅನುಸರಿಸಬೇಕಾದ ನೀತಿನಿಯಮಗಳನ್ನು ಚಾಲಕರು ಸಾಧ್ಯವಾದಷ್ಟು ಕಾನೂನನ್ನು ಕೈಗೆತ್ತಿಕೊಳ್ಳದೆ ಅದನ್ನು ಗೌರವಿಸಿ ತಮ್ಮ ವಾಹನಗಳಲ್ಲಿ ಮಕ್ಕಳನ್ನು ಇತಿ ಮಿತಿಯೊಳಗೆ ಕರೆತರಬೇಕೆಂದು ಸೂಚಿಸಿದರು.
ಶಾಲಾ ಸಂಚಾಲಕರಾದ ವಂದನೀಯ ಫಾ| ಎರಿಕ್ ಕ್ರಾಸ್ತಾ, ಆಡಳಿತ ಮಂಡಳಿಯ ಸದಸ್ಯರಾದ ಉಲ್ಲಾಸ್ ಸಿಕ್ವೇರಾ, ಹಿಲಾರಿ ಮಸ್ಕರೇನ್ಹಸ್, ಚರ್ಚ್ ಪಾಲನಾ ಉಪಾಧ್ಯಕ್ಷರಾದ ಲೂವಿಸ್ ಮಸ್ಕರೇನ್ಹಸ್, ಸಲಹಾ ಸಮಿತಿ ಗೌರವ ಸಲಹೆಗಾರರಾದ ಸುದರ್ಶನ್ ಪಡಿಯಾರ್, ಪಟ್ಟಣ ಪಂಚಾಯತ್ ಸದಸ್ಯೆ ಉಷಾ ಕೆ. ಹಾಗೂ ಜಂಟಿ ಶಾಲಾ ಮುಖ್ಯಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಜಯರಾಮ ಶಾಸ್ತ್ರೀ ಹಾಗೂ ಸ್ವಾಗತವನ್ನು ಸಚಿನ್ ಸರ್ ಇವರು ನಿರ್ವಹಿಸಿದರು.

