ಬಂಟ್ವಾಳ: ತಾಯಿ ಮತ್ತು ಎಳೆಯ ಮಗು ಕಾಣೆಯಾದ ¨ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ಕಾಮಾಜೆ ಗಂಗಾಧರ ಅವರ ಪತ್ನಿ ಅನಿತಾ (31) ಮಗಳು ಯಸ್ಮಿತಾ (5) ಕಾಣೆಯಾಗಿದ್ದಾರೆ ಎಂದು ದೂರು ನೀಡಲಾಗಿದೆ.
ಬಾಡಿಗೆ ಮನೆಯಲ್ಲಿ ವಾಸವಾಗಿರುವ ಗಂಗಾಧರ ಎಂದಿನಂತೆ ಗುರುವಾರ ಬೆಳಿಗ್ಗೆ 4 ಗಂಟೆಗೆ ಹೊಟೇಲ್ ಕೆಲಸಕ್ಕೆ ಹೋಗಿದ್ದರು. ಪತ್ನಿಮತ್ತು ಮಗು ಮನೆಯಲ್ಲಿದ್ದರು. ಸುಮಾರು 7.30ರ ವೇಳೆಗೆ ಹತ್ತಿರದ ಮಾವನ ಮನೆಯವರು ಮನೆಗೆ ಬಂದು ನೋಡಿದಾಗ ಪತ್ನಿ ಮತು ಮಗು ಮನೆಯಲ್ಲಿರದೆ ಕಾಣೆಯಾದ ಬಗ್ಗೆ ಸುಳಿವು ಸಿಕ್ಕಿತ್ತು. ಅನಿತಾ ಕೆಲವು ವರ್ಷಗಳಿಂದ ಮಾನಸಿಕವಾಗಿ ಹುಷಾರಿಲ್ಲದೇ ಚಿಕಿತ್ಸೆ ಪಡೆದಿದ್ದರು. ಇತ್ತೀಚೆಗೆ ಪೊಳಲಿ ಸಮೀಪದ ಅಡ್ಡೂರು ರಿಕ್ಷಾ ಚಾಲಕ ಸಂತೋಷನೊಂದಿಗೆ ಸಲುಗೆಯಿಂದ ಇರುತ್ತಿದ್ದಳು ಎನ್ನಲಾಗಿದೆ. ದೂರವಾಣಿ ಮೂಲಕ ಸಂಪರ್ಕ ಬೆಳೆದಿತ್ತು.
ಈತನೇ ನಿನ್ನೆ ಬೆಳಿಗ್ಗೆ ಕಾಮಾಜೆ ಮನೆಗೆ ಬಂದು ಸ್ನೇಹಿತನ ರಿಕ್ಷಾದಲ್ಲಿ ತಾಯಿ ಮತ್ತು ಮಗುವನ್ನು ಕರೆದು ಕೊಂಡು ಹೋಗಿದ್ದಾನೆ ಎಂದು ಠಾಣೆಗೆ ಸುಳಿವು ಸಿಕ್ಕಿದೆ. ಬಂಟ್ವಾಳ ನಗರ ಠಾಣೆಯಲ್ಲಿ ದಾಖಲಿಸಿ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ.

