ಬಂಟ್ವಾಳ: ಕಂದಾಯ ಇಲಾಖೆಯಲ್ಲಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿಯವರ ಅಭಿನಂದನಾ ಕಾರ್ಯಕ್ರಮ ತಾ.ಪಂ.ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಜರಗಿತು. ನಿವೃತ್ತಿಗೊಂಡ ನಾರಾಯಣ ಪೂಜಾರಿ , ಪ್ರಥಮ ಗರ್ಜೆ ಸಹಾಯಕರಾಗಿ ಮುಂಭಡ್ತಿಗೊಂಡ ತಾರನಾಥ್ , ಶಾರದಾ, ದಾಕ್ಷಾಯಿಣಿ ಹಾಗೂ ಮಂಗಳೂರು ತಾಲೂಕಿಗೆ ವರ್ಗಾವಣೆಗೊಂಡಿರುವ ಗ್ರಾಮಕರಣಿಕರಾದ ಶಿಲ್ಪಾ ಕುಮಾರಿ, ಕುಮಾರಿ ಪವಿತ್ರಾ, ಶ್ರೀಮತಿ ಶಾಂತಾ ರವರನ್ನು ಅಭಿನಂದಿಸಲಾಯಿತು. ತಹಶೀಲ್ದಾರ್ ಪುರಂಧರ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ, ಉಪನೋಂದಾವಣಾಧಿಕಾರಿ ಕವಿತಾ ಉಪಸ್ಥಿತರಿದ್ದರು. ಗ್ರಾಮಕರಣಿಕರ ಸಂಘದ ಅಧ್ಯಕ್ಷ ಜನಾರ್ಧನ್ ಸ್ವಾಗತಿಸಿದರು. ಉಪತಹಶೀಲ್ದಾರ್ ಪರಮೇಶ್ವರ ನಾೈಕ್ ವಂದಿಸಿದರು. ಉಪತಹಶೀಲ್ದಾರ್ ಜೆ.ಪಿ.ರೋಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.

 

KAR_8157

By suddi9

Leave a Reply

Your email address will not be published. Required fields are marked *