ಮೊಸರೆಂದರೆಯಾರಿಗೆಗೊತ್ತಿಲ್ಲ ಹೇಳಿ?ಮೊಸರೆಂದರೆ ಹೆಚ್ಚಿನವರಿಗೆ ಪಂಚಪ್ರಾಣ.ಮೊಸರೆಂಬುದುಎಲ್ಲರೂ ಎಷ್ಟ ಪಡುವ ಬಹುಪಯೋಗಿಆಹಾರ.ಹಾಲನ್ನುನಿಂಬೆ ರಸಅಥವಾ ವಿನಿಗರ್ನಗುಣವಿರುವಆಮ್ಲೀಯ ಪದಾರ್ಥದೊಂದಿಗೆ ಸಂಯೋಗಗೊಳಿಸಿ ನಂತರದ್ರವ ಭಾಗವನ್ನು ಬಸಿದು ಪಡೆಯಲಾಗುವಒಂದುಕ್ಷೀರೋತ್ಪನ್ನವನ್ನು ಮೊಸರುಎಂದುಕರೆಯಲಾಗುತ್ತದೆ.
ಹಾಲು ಅತಿಯಾಗಿ ಹುಳಿಯಾಗಲು ಬಿಟ್ಟಂತೆಇದು ನೈಸಗರ್ಿಕವಾಗಿ ಮೊಸರಾಗಿ ಪರಿವರ್ತನೆಯಾಗುತ್ತದೆ. ಹಾಲಿನಲ್ಲಿಆಮ್ಲೀಯತೆಯು ಹೆಚ್ಚಿಂದಂತೆಯೂ ಹಾಲಿನಲ್ಲಿರುವ ಪ್ರೊಟೀನು ಅಂಶಗಳು ಘನ ಸ್ಥಿತಿಗೆ ತಲುಪುತ್ತಾಹಾಲು ಮೊಸರಾಗುತ್ತದೆ.ಇದರಲ್ಲಿ ಹಾಲಿಂಗಿತಲೂ ಸುಮಾರುಒಂದೂವರೆ ಪಟ್ಟುಅಧಿಕಕಾಲ್ಸಿಯಂನ ಅಂಶಗಳು ಇರುವುದರಿಂದಇದು ಹೃದಯಕ್ಕೆಅತ್ಯಂತ ವೆಗವಾಗಿ ಶಕ್ತಿಯನ್ನು ನೀಡುತ್ತದೆ.

ಮೊಸರಿನಹದಿನಾರುಆರೋಗ್ಯಕಾರಿ ಅಂಶಗಳು ಇಲ್ಲಿವೆ:
1. ನಿಯಮಿತವಾಗಿ ಮೊಸರನ್ನು ಸೇವಿಸುವುದರಿಂದಜೀರ್ಣಕ್ರೀಯೆ ಸುಲಭವಾಗುತ್ತದೆ.
2. ಮೊಸರಿನ ಸೇವನೆಯಿಂದ ಹೃದಯದಕಾರ್ಯಕ್ಷಮತೆ ಹೆಚ್ಚಿ ಹೃದಯಾಘಾತದ ಸಂಭವನೀಯತೆಯನ್ನುಕಡಿಮೆ ಮಾಡುತ್ತದೆ.
3. ಮೊಸರುದೇಹದರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
4. ಇದರಲ್ಲಿಕ್ಯಾಲ್ಸಿಯಂ ಅಂಶ ಹೆಚ್ಚಿರುವಕಾರಣದೇಹದ ಮೂಳೆಗಳು ದೃಢಗೊಳ್ಳುತ್ತವೆ.
5. ಮೊಸರಿನ ಸೇವನೆಯಿಂದಚರ್ಮದಕಾಂತಿಯು ಹೆಚ್ಚುತ್ತದೆ.
6. ಮೊಸರಿನ ಸೇವನೆಯಿಂದತಲೆಹೊಟ್ಟನ್ನು ಸುಲಭವಾಗಿ ನಿವಾರಿಸಬಹುದಾಗಿದೆ.
7. ಸ್ಥೂಲಕಾಯದವರು ಮೊಸರನ್ನುಕ್ರಮಬದ್ಧವಾಗಿ ಸೇವಿಸುವುದರಿಂದಹೆಚ್ಚಿದತೂಕವನ್ನು ಇಳಿಸಲು ಸಹಾಯ ಮಾಡುತ್ತದೆ.
8. ಮನಸ್ಸಿನ ದುಗುಡ ಹಾಗೂ ಮಾನಸಿಕ ಉದ್ವೇಗವನ್ನು ನಿಯಂತ್ರಿಸುವಲ್ಲಿ ಮೊಸರುಸಹಕಾರಿಯಾಗಿದೆ.
9. ಮೂಲವ್ಯಾಧಿಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದುಉತ್ತಮವಾದಆಹಾರವಾಗಬಲ್ಲುದು.
10. ಇದು ಬಾಯಿಗೆ ಸಂಬಂಧಿಸಿದ ವಿವಿಧರೀತಿಯ ಸೊಂಕುಗಳನ್ನು ನಿವಾರಿಸುತ್ತದೆ.
11. ಮೊಸರರಿನ ಸೇವನೆಯಿಂದ ಪಚನ (ಜೀರ್ಣ) ಕ್ರೀಯೆಯು ಸರಾಗವಾಗಿ ನಡೆದು ಹಸಿವನ್ನು ಹೆಚ್ಚಿಸುತ್ತದೆ.
12. ರಕ್ತದಲ್ಲಿನಕೊಲೆಸ್ತ್ರಾಲ್ನ್ನುಕಡಿಮೆ ಮಾಡಿರಕ್ತ ಪರಿಚಲನೆಗೆ ಸಹಕಾರವನ್ನು ನೀಡುತ್ತದೆ.
13. ಮುಖದಲ್ಲಿಕಂಡು ಬರುವಕಪ್ಪು ಕಲೆಗಳನ್ನು ನಿವಾರಿಸುತ್ತದೆ.
14. ಉರಿ ಮೂತ್ರದತೊಂದರೆಇರುವವರು ಮೊಸರನ್ನು ಪ್ರತಿನಿತ್ಯ ಸೇವಿಸಿದರೆ ಸಹಕಾರಿಯಾಗಬಲ್ಲದು.ರಾಮಬಾಣವಾಗಿ ಕೆಲಸ ಮಾಡುತ್ತದೆ.
15. ಶರೀರ ವರ್ಧಕವಾಗಿ ಮೊಸರಿನೊಂದಿಗೆ ಸಕ್ಕರೆಯನ್ನು ಸೇರಿಸಿ ಸೇವಿಸಬಹುದು.
16. ನಿಯಮಿತ ಮೊಸರಿನ ಸೇವನೆಯಿಂದವೀರ್ಯ ವೃದ್ಧಯಾಗುತ್ತದೆ.
ಅಡ್ಡ ಪರಿಣಾಮಗಳು:
ಮೊಸರುಆರೋಗ್ಯಕ್ಕೆ ಒಳ್ಳೆಯದೇನೋ ನಿಜ ಆದರೆಇದನ್ನು ಸೇವಿಸುವಾಗ ಎಚ್ಚರಿಕೆಯೂಅಗತ್ಯ. ಅವುಗಳೆಂದರೆ,
1. ಮೂತ್ರಪಿಂಡಗಳ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿದ್ದವರು, ಜ್ವರ, ನೆಗಡಿ, ಕಫ ಹಾಗೂ ಪಿತ್ತ ಮತ್ತುರಕ್ತಪಿತ್ತವಿದ್ದವರಿಗೆಇದು ನಿಷಿದ್ಧ.
2. ರಾತ್ರಿ ಹೊತ್ತು ಮೊಸರನ್ನು ಸೇವಿಸಬಾರದು, ಇದರಿಂದ ಆ ವ್ಯಕ್ತಿಯಆಯಸ್ಸುಕಡಿಮೆಯಾಗುತ್ತದೆಆಯುವರ್ೇದದಲ್ಲೂಇದರಉಲ್ಲೇಖವಿದೆ. ಯಾಕೆಂದರೆರಾತ್ರಿಯಊಟದ ನಂತರದೇಹಕ್ಕೆಅಷ್ಟೊಂದು ಕೆಲಸವನ್ನು ನಾವು ನೀಡುವುದಿಲ್ಲ. ಬೇಗನೇ ನಿದ್ದೆಗೆ ಶರಣಾಗುತ್ತೇವೆ. ಇದರಿಂದಾಗಿ ಊಟ ಸರಿಯಾಗಿಜೀರ್ಣವಾಗುವುದಿಲ್ಲ ಇದರಿಂದಗಿ ಮೊಸರುದೇಹದ ಮೆಲೆ ಅಡ್ಡ ಪರಿಣಾಮವನ್ನು ಬೀರುವ ಸಾಧ್ಯತೆಅಧಿಕವಾಗಿರುತ್ತದೆ.
ಅತಿಯಾದರೆಅಮೃತವೂ ವಿಷ ಎಂಬ ಮಾತಿನಂತೆಯಾವುದನ್ನೂಆದರೂ ಹಿತ ಮಿತವಾಗಿಸೇವಿಸಿದಲ್ಲಿ ಅದುಆರೋಗ್ಯಕ್ಕೆಉತ್ತಮ.ಮನೆಯಲ್ಲೇತಯಾರಿಸಬಹುದದ ಬಹು ಬಳಕೆಯ ಕ್ಷೀರೋತ್ಪನ್ನವಾದ ಮೊಸರನ್ನುಆಹಾರದಜೊತೆಯಲ್ಲಿನಿಯಮಿತವಾಗಿ ಸೆವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
ಲೇಖನ ತಯಾರಿ:
ಸಂತೋಷ್ರಾವ್, ಪೆರ್ಮುಡ
ಉಪನ್ಯಾಸಕರು, ಮಾನವ ಸಂಪನ್ಮೂಲ ತರಬೇತಿಕೇಂದ್ರ, ಮೈಸೂರು
ದೂ:9742884160



