ಆಧುನಿಕ ಜಗತ್ತಿನಲ್ಲಿ ಚಿತ್ರಕಲೆ, ಶಿಲ್ಪ ಕಲೆಗಳು ವೈವಿಧ್ಯ ಪೂರ್ಣವಾಗಿರೂಪುಗೊಂಡು ಕಲಾರಸಿಕರಿಗೆ ಪ್ರಭಾವ ಬೀರುತ್ತಾ ಬಂದಿದೆ.ಒಬ್ಬ ಶಿಲ್ಪಿ ತನ್ನಅಪೂರ್ವ ಜಾಣ್ಮೆಯಿಂದ ಎಂತಹ ಕಲ್ಲನ್ನುಕೂಡ ಮೂರ್ತಿಯನ್ನಾಗಿ ಮಾಡಬಲ್ಲನು.ಅಲ್ಲದೇತನ್ನಕ್ರಿಯಾ ಶೀಲತೆಯಿಂದ ಯಾವ ವಸ್ತುವಿನಲ್ಲಿಯೂಕೂಡಕಲಾದೇವತೆಯನ್ನು ಪ್ರತಿಷ್ಠಾಪನೆ ಮಾಡಬಲ್ಲರು. ಇಂತಹ ನೂರಾರುಜನ ಹಿರಿಯಕಲಾವಿದರು ನಮ್ಮ ನಾಡಿನಲ್ಲಿದ್ದಾರೆ.
ಈ ಹಿರಿಯಕಲಾವಿದರಿ ಸರಿಸಾಟಿಎಂಬಂತೆಉಡುಪಿಯ, ಉದಯೋನ್ಮುಖಯುವಕಲಾವಿದರಲ್ಲಿ ಮಹೇಶ್ ಮರ್ಣೆ ಒಬ್ಬರು .
Icecream ganapa

chockpis art

stage setting

IMG-20151006-WA0032ಉಡುಪಿಯಿಂದ ಸುಮಾರು 20ಕಿ.ಮೀ ದೂರದಲ್ಲಿರುವ ಮರ್ಣೆ ಗ್ರಾಮದಲ್ಲಿ 1984 ರಲ್ಲಿ ಜನಿಸಿದ ಮಹೇಶ್ಗೆ ಶಿಲ್ಪ ಕೆತ್ತನೆಯ ಹವ್ಯಾಸ ಹುಟ್ಟಿಕೊಂಡಿತು.ಮರ್ಣೆ ಶ್ರೀಧರ ಆಚಾರ್ಯ ಮತ್ತು ಲಲಿತಾ ದಂಪತಿ ಪುತ್ರರಾಗಿರುವಇವರು ಉನ್ನತ ವ್ಯಾಸಂಗ ಮಾಡಲು ಇಷ್ಟ ವಿದ್ದರೂ ಮನೆಯ ಆರ್ಥಿಕ ಪರಿಸ್ಥಿತಿಯಿಂದ ಅದನ್ನು ಸಾಧಿಸಲು ಸಾಧ್ಯವಾಗಲಿಲ್ಲ.ಆದರೆ ತನ್ನಇಷ್ಟದ ಹವ್ಯಾಸವನ್ನೇ ವೃತ್ತಿಯನ್ನಾಗಿ ಸ್ವೀಕರಿಸಿ ಆ ವೃತ್ತಿಯಲ್ಲಿರುವ ಕಲಾವಂತಿಕೆಯನ್ನು ನಾಡಿನ ಜನರಿಗೆ ಉಣಬಡಿಸುತ್ತಾರೆ. ಮಹೇಶ್ ಮರ್ಣೆ ಯಲ್ಲಿರುವ ಕಲಾವಿದ ಶಿಲ್ಪಿ ಉನ್ನತರೂಪ ಪಡೆದಿದ್ದು,ಖ್ಯಾತ ಶಿಲ್ಪಿ ಗುಣವಂತೇಶ್ವರ ಭಟ್ರವರ ಮಾರ್ಗದರ್ಶನದಲ್ಲಿ ಬೆಳೆದ ಅವರು ಶಿಲ್ಪಕಲೆಯಲ್ಲಿ ಪರಿಪಕ್ವತೆಯನ್ನು ಸಾಧಿಸುತ್ತಾ ಹೋದರು.

ಸಹೋದರರರಾದ ಸಂತೋಷ್ ಮತ್ತು ಉಮೇಶ್ ಅವರ ಪ್ರೋತ್ಸಾಹದೊಂದಿಗೆ ಶಿಲ್ಪ ಕಲಾ ತರಬೇತಿಯನ್ನು ಪೂರ್ಣಗೊಳಿಸಿದರು.ಪ್ರತಿಭಾವಂತ ಕಲಾವಿದ ಗೋಪಾಡ್ಕರ್ರವರ ಪರಿಚಯವಾದ ನಂತರ ಅವರಲ್ಲಿ ತನ್ನ ಕಲಾಸೇವೆಯನ್ನು ಮುಂದುವರಿಸಿದ ಮಹೇಶ್ ರವರು ಈವರೆಗೆ ಸಾವಿರಾರು ಕಾಷ್ಟ ಹಾಗೂ ಶಿಲೆಗಳಿಂದ ಶಿಲ್ಪವನ್ನು ರಚಿಸಿರುತ್ತಾರೆ. ಥರ್ಮೋಫೋಮ್ ನಲ್ಲಿ 10 ಅಡಿ ಎತ್ತರದ ಸುಂದರ ನಟರಾಜನ ವಿಗ್ರಹ, ಏಳು ಅಡಿ ಎತ್ತರದ ನಟರಾಜನ ವಿಗ್ರಹ, ಥರ್ಮೋ ಕೋಲ್ನಲ್ಲಿ ಮಹಾಗಣಪತಿ ಮುಂತಾದ ಶಿಲ್ಪ ಕಲಾಕೃತಿಯನ್ನು ರಚಿಸಿರುತ್ತಾರೆ.

ಅಪೂರ್ವ ವೇದಿಕೆ ನಿರ್ಮಾಣ: ಕೇವಲ ಶಿಲ್ಪ ಕಲೆ ಅಲ್ಲದೇಅತ್ಯುತ್ತಮವಾದ ಪಾರಂ ಪಾರಿಕ ವೇದಿಕೆ ನಿರ್ಮಾಣದಲ್ಲಿಯೂ ಮಹೇಶ್ ಮರ್ಣೆಯವರದ್ದು ಎತ್ತಿದ ಕೈ. ತನ್ನಅಧ್ಬುತಕಲಾಕೃತಿಯಿಂದ ಹಲವಾರು ಸಂದರ ಕಾರ್ಯಕ್ರಮಗಳಲ್ಲಿ ವೇದಿಕೆ ನಿರ್ಮಾಣ ಮಾಡಿದ್ದಾರೆ. ಈ ವೇದಿಕೆಯನ್ನು ನೋಡಿದ ಹಲವಾರುಜನ ಕಲಾಪ್ರೇಮಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಐಸ್ಕ್ರೀಂಕಡ್ಡಿಯಿಂದ ಅರಳಿದ ಗಣಪ: ಪ್ರತಿ ವರ್ಷ ಗಣೇಶಚತುರ್ಥಿ ಸಂದರ್ಭ ಸೃಜನಾತ್ಮಕವಾಗಿಗಣಪತಿ ಕಲಾಕೃತಿಯನ್ನುರಚಿಸುತ್ತಾರೆ. ಈ ಬಾರಿ ಐಸ್ಕ್ರೀಂತಿನ್ನಲು ಬಳಸುವ ಕಡ್ಡಿಯನ್ನುಫೆವಿಕೋಲ್ಗಂನಿಂದ ಅಂಟಿಸಿ ದಪ್ಪ ಮಾಡಿಕೊಂಡು ಅದರಿಂದ ಗಣಪತಿಯ ಮುಖ, ಹೊಟ್ಟೆ ಕೈಕಾಲುಗಳನ್ನು ಕೆತ್ತನೆಯ ಮೂಲಕ ಮೂಡಿಸಿದ್ದಾರೆ.ಕಡ್ಡಿಯನ್ನುಕ್ರಮವಾಗಿ ಜೋಡಿಸಿ ಪ್ರಭಾವಳಿ, ಗಣಪತಿ ಪೀಠ ರಚಿಸಿದ್ದಾರೆ.ಇದಕ್ಕೆ 3500 ಐಸ್ಕ್ರೀಂಕಡ್ಡಿಉಪಯೋಗಿಸಲಾಗಿದೆ.ಗಣಪತಿಪ್ರಭಾವಳಿ, ಆಭರಣಗಳ ಅಲಂಕಾರಕ್ಕಾಗಿ ಕೆಂಪು ಮತ್ತುಕಪ್ಪು ಬಣ್ಣದ 750 ಬೆಂಕಿ ಕಡ್ಡಿ ಬಳಸಿದ್ದು, 24 ಇಂಚು ಎತ್ತರ ಮತ್ತು 17 ಇಂಚು ಅಗಲವಿರುವ ಈ ಕಲಾಕೃತಿ 15 ದಿನಗಳ ಕಠಿಣ ಪರಿಶ್ರಮದಿಂದರೂಪುಗೊಂಡಿದೆಎಂದುಅವರು ಹೇಳುತ್ತಾರೆ.
ಈ ಹಿಂದೆ ಬಾಟಲಿಯೊಳಗೆ ಗಣಪತಿ, ತರಕಾರಿಯಲ್ಲಿಗಣಪತಿ, ಸೀಮೆಯ ಸುಣ್ಣದಲ್ಲಿಗಣಪತಿಯಕಲಾಕೃತಿಯನ್ನು ರಚಿಸಿದ್ದಾರೆ.ಈಗಾಗಲೇ ಹತ್ತಾರು ಕಡೆಗಳಲ್ಲಿ ಇವರ ಸಾಧನೆಯನ್ನು ಗಮನಿಸಿ ಸನ್ಮಾನದೊರಕಿದೆ. ಈ ಕಲಾವಿದನನ್ನು ಸರಿಯಾದ ಮಾರ್ಗದರ್ಶನ, ಪ್ರೋತ್ಸಾಹ ನೀಡಿದ್ದೇಆದಲ್ಲಿರಾಷ್ಟ್ರ ಮಟ್ಟದಕಲಾವಿದನಾಗುವಲ್ಲಿ ಸಂದೇಹವಿಲ್ಲ. ತನ್ನಎಲ್ಲಾ ಬಗೆಯ ಕಲಾಪ್ರಕಾರಗಳಲ್ಲಿ ಸಾಧನೆಯನ್ನು ಮಾಡಿ ಹವ್ಯಾಸ ಮತ್ತುಉದ್ಯೋಗದಲ್ಲಿ ಹೊಸ ಪರಿಕಲ್ಪನೆಯನ್ನುತಂದ ಮಹೇಶ್ ಮರ್ಣೆ  ಅಭಿನಾಂದನಾರ್ಹರು.ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಮರ್ಣೆ ಕಾರ್ಯಕ್ಷೇತ್ರದ ವಿಶ್ವಕರ್ಮ ಸ್ವ ಸಹಾಯ ಸಂಘದಲ್ಲಿ ಸದಸ್ಯರಾಗಿರುವ ಅವರು ಈ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಯನ್ನು ಮಾಡಲಿ ಎಂಬುದು ನಮ್ಮ ಶುಭ ಹಾರೈಕೆ.

ರಾಘವೇಂದ್ರ ಪ್ರಭು, ಕರ್ವಾಲು.
ಉಪನ್ಯಾಸಕರು ಉಡುಪಿ ತರಬೇತಿ ಸಂಸ್ಥೆ(ಎಸ್.ಕೆ.ಡಿ.ಅರ್.ಡಿ.ಪಿ) 9880811036

By suddi9

Leave a Reply

Your email address will not be published. Required fields are marked *