ಹೆಸರೆನೋ ಫ್ಯಾಷನ್ಆಗಿದೆಆದರೆ, ಈ ಹಣ್ಣುತಿನ್ನೋಕೆ ಎಷ್ಟು ಫ್ಯಾಷನ್ಆಗಿದೆಎಂಬುವುದೇಒಂದು ಸ್ವಾರಸ್ಯಕರ ಸಂಗತಿ.’ಫೆಸಿಫ್ಲೋರ ಎಡ್ಯುಲಸ್’ಎಂಬ ವೈನ್ ಪ್ರಬೇಧಕ್ಕೆ ಸೇರಿದ ಫ್ಯಾಷನ್ಫ್ಲವರ್ ಹೆಚ್ಚಾಗಿ ಬ್ರೆಜಿಲ್, ಪೆರುಗ್ವೆ ಹಾಗೂ ಉತ್ತರ ಅರ್ಜಂಟಿನಾಗಳಲ್ಲಿ ಪ್ರಮುಖವಾಗಿಕಂಡುಬರುತ್ತದೆ.ಫೆಸಿಫ್ಲೋರ ಎಂಬ ಶಬ್ದದಮೂಲ ಲ್ಯಾಟಿನ್ಭಾಷೆಯಾಗಿದ್ದು,ಇದನ್ನುಇಂಗ್ಲೀಷ್ನಲ್ಲಿ’ಫ್ಯಾಷನ್ ಫ್ಲವರ್’ಎಂದುಕರೆಯಲಾಗುತ್ತದೆ.ಈ ಹೂವಿಗೆ ಫ್ಯಾಷನ್ ಫ್ಲರ್ವ ಎಂದು ಹೆಸರಿಸಿದವರು ಸ್ಪಾನಿಶ್ ಮಿಷನರಿಗಳು.ಇದರಲ್ಲಿ ಬೆಳೆಯುವ ಹಣ್ಣುಗಳನ್ನು ಅಮೇರಿಕಾ ಮತ್ತುಕಾಮನ್ವೆಲ್ತ್ ರಾಷ್ಟ್ರಗಳಲ್ಲಿ ಫ್ಯಾಷನ್ ಫ್ರೂಟ್ಎಂದೂದಕ್ಷಿಣಆಫ್ರಿಕಾದಲ್ಲಿಪರ್ಪಲ್ ಗ್ರೆಸಿಡಿಲ್ಲಾ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.
ಈ ಹಣ್ಣನ್ನುಉಷ್ಣವಲಯ ಮತ್ತು ಸಮಶೀತೋಷ್ಣ ವಲಯ ದೇಶಗಳಾದ ದಕ್ಷಿಣಅಮೇರಿಕಾ, ಕೆರೆಬಿಯನ್, ಆಫ್ರಿಕಾ, ಮಧ್ಯಅಮೇರಿಕಾ, ದಕ್ಷಿಣಏಷ್ಯಾ, ವಿಯೇಟ್ನಾಂ, ಇಸ್ರೇಲ್, ಆಸ್ಟ್ರೇಲಿಯಾ, ದಕ್ಷಿಣಕೊರಿಯಾ ಮತ್ತು ಹವಾಯಿ ದ್ವೀಪಗಳಲ್ಲಿ ವಾಣಿಜ್ಯಉದ್ದೇಶ ಹಾಗೂ ಇದರಲ್ಲಿರುವ ಸಿಹಿಯ ಗುಣದಿಂದಾಗಿಯಥೇಚ್ಚವಾಗಿ ಬೆಳೆಯುತ್ತಾರೆ.ಈಹಣ್ಣಿನ ಬಹುಭಾಗವು ಹೆಚ್ಚಿನ ನೀರಿನಂಶಗಳಿಂದ ಕೂಡಿದ್ದುಇದುಕಲ್ಲಂಗಡಿಅಥವಾ ಸೌತೆಕಾಯಿಯ ಪ್ರಬೇಧಕ್ಕೆ ಸೇರಿದ್ದುನೋಡಲುಓವಲ್ಆಕಾರವನ್ನು ಹೊಂದಿರುತ್ತದೆ.ಈ ಕಾಯಿಯು ಬಲಿತಾಗ ನೋಡಲು ಹಳದಿ ಅಥವಾಕಡು ನೇರಳೆ ಬಣ್ಣವನ್ನು ಹೊಂದಿದ್ದು ಹಣ್ಣಾದಂತೆಇದರ ಮೇಲ್ಮೈ ಮೆದುವಾಗುತ್ತಾ ಹೋಗುತ್ತದೆ.ಹಾಗೂ ಒಳಭಾಗದಲ್ಲಿಅಸಂಖ್ಯಸಂಖ್ಯೆಯ ಬೀಜಗಳ ಸುತ್ತರಸಭರಿತವಾದ ಸ್ವಾದಿಷ್ಟ ಭರಿತಅಂಶವನ್ನು ಒಳಗೊಂಡಿರುತ್ತದೆ.ಈ ಹಣ್ಣನ್ನು ನೇರವಾಗಿ ಬಿಡಿಸಿ ತಿನ್ನಬಹುದಾಗಿದ್ದುಜೊತೆಜೊತೆಗೆಜ್ಯೂಸ್ರೂಪದಲ್ಲೂಸೇವಿಸುವುದುಆರೋಗ್ಯಕ್ಕೆಉತ್ತಮವಾಗಿದೆ.ಇದರಜ್ಯೂಸ್ನ್ನುಇತರಜ್ಯೂಸ್ಜೊತೆ ಬೆರೆಸುವುದರಿಂದಇದರಜ್ಯೂಸ್ನಸ್ವಾದಿಷ್ಟತೆಯನ್ನುಇನ್ನಷ್ಟುಹೆಚ್ಚಿಸಲು ಸಹಕಾರಿಯಾಗಿದೆ.
ಈ ಹಣ್ಣನ್ನು ಬೆಳೆಗಾರರು ತೆಳುವಾದ ಅರಣ್ಯರೀತಿಯಲ್ಲಿ ಬೆಳೆಯುತ್ತಾರೆ.ಫ್ಯಾಷನ್ ಪ್ರೂಟ್ ಬಳ್ಳಿಗೆ ಫಲವತ್ತಾದಉಷ್ಣಾಂಶವಿರುವ ಪ್ರದೇಶದಅಗತ್ಯವಿದ್ದು,ಒಮ್ಮೆ ನಾಟಿ ಮಾಡಿದರೆ ಸುಮಾರುಐದರಿಂದ ಏಳು ವರ್ಷದವರೆಗೆ ಬದುಕಬಲ್ಲದು. ಈ ಬಳ್ಳಿಯು ಅತ್ಯಂತ ವೇಗವಾಗಿ ಬೆಳೆಯುವ ಗುಣವನ್ನು ಹೊಂದಿದ್ದುವರ್ಷದಲ್ಲಿ 15 ರಿಂದ 20 ಅಡಿಯಷ್ಟುಉದ್ದಕ್ಕೆ ಬೆಳೆಯಬಲ್ಲುದು.ಈ ಹಣ್ಣನ್ನುಬ್ರಿಟನ್ ನಂತಹಅತೀಉಷ್ಣಾಂಶವಿದುವ ಪ್ರದೇಶದಲ್ಲೂ ಯಶಸ್ವಿಯಾಗಿ ಬೆಳೆಯಲಾಗುತ್ತದೆ. ಫ್ಯಾಷನ್ಫ್ರೂಟ್ಹೂವನ್ನು ಪೆರುಗ್ವೆದೇಶದರಾಷ್ಟ್ರೀಯ ಪುಷ್ಪವಾಗಿಯೂಅಂಗೀಕರಿಸಲಾಗಿದೆ.
ವಿವಿಧರೀತಿಯತಳಿಗಳು:
ಫ್ಯಾಷನ್ ಫ್ಯೂಟ್ನಲ್ಲಿಗಾಢ ಹಳದಿ ಬಣ್ಣದ’ಪ್ಲಾವಿಕಪರ್ಾ’ ಎಂಬ ಜಾತಿಯ ಹಣ್ಣನ್ನು’ಗೋಲ್ಡನ್ಫ್ಯಾಷನ್ಫ್ರ್ಯೂಟ್’ಎಂತಲೂಕರೆಯಲಾಗುತ್ತದೆ. ಇದರಗಾತ್ರವುದ್ರಾಕ್ಷಿ ಹಣ್ಣಿನಷ್ಟಿದ್ದು ಮೆದುವಾಗಿಜಾರುವ ಮೇಲ್ಮೈನ್ನು ಹೊಂದಿರುತ್ತದೆ.ಈ ‘ಪ್ಲಾವಿಕಪರ್ಾ’ ತಳಿಯನ್ನು ಆಸ್ಟ್ರೇಲಿಯಾದೇಶದಲ್ಲಿಗೋಲ್ಡನ್ಫ್ರೂಟ್ ಗಿಡಗಳ ಮಧ್ಯ ಮಧ್ಯದಲ್ಲಿಎಡೆಕೃಷಿಯಾಗಿ ಬೆಳೆಯಲಾಗುತ್ತದೆ.ಕಡು ನೇರಳೆ ಬಣ್ಣದ’ಎಡ್ಯೂಲಸ್’ ತಳಿಯು ಲಿಂಬೂ ಹಣ್ಣಿನಗಾತ್ರವಾಗಿದ್ದು ಹಳದಿ ಫ್ಯಾಷನ್ ಫ್ರೂಟ್ಗಿಂತಕಡಿಮೆಆಮ್ಲೀಯಅಂಶವನ್ನು ಹೊಂದಿದ್ದು ಹೆಚ್ಚು ಪರಿಮಳ ಹಾಗೂ ಸ್ವಾದಿಷ್ಟತೆಯಿಂದಕೂಡಿರುತ್ತದೆ.ಈ ವಿವಿಧ ತಳಿಗಳ ಹಣ್ಣಿನರಸ ಹಾಗೂ ಮೇಲಿನ ಸಿಪ್ಪೆಯು ಮನುಷ್ಯನಆರೋಗ್ಯಕ್ಕೆಅತ್ಯಂತಅತ್ಯವಶ್ಯಕವಾಗಿ ಬೇಕಾಗುವ ‘ಫೋಲಿಪಿನೋಲ್’ ಹಾಗೂ ಇತರ ಜೀವಸತ್ವಗಳನ್ನು ಹೊಂದಿದೆ.
ಜೀವಸತ್ವ ಮತ್ತುಖನಿಜಾಂಶದಆಗರ:
ಫ್ಯಾಷನ್ ಫ್ಯೂಟ್ನಲ್ಲಿಹೇರಳವಾಗಿ ಮನುಷ್ಯನದೇಹಕ್ಕೆಅವಶ್ಯವಾಗಿ ಬೇಕಾಗುವ ಜೀವಸತ್ವಗಳು ಮತ್ತು ಖನಿಜಾಂಶಗಳು ಲಭ್ಯವಿದ್ದು ಅವುಗಳಲ್ಲಿ ವಿಶೇಷವಾಗಿ ಜೀವಸತ್ವಗಳಾದ ವಿಟಮಿನ್ ‘ಎ’8%,ಬೆಟಾಕರೋಟೇನ್ 7%,ರೈಬೋ ಫ್ಲೆವಿನ್ 11%, ನಿಯಾಸಿನ್ 10%, ವಿಟಮಿನ್ ಬಿ6 8%, ಫೋಲೇಟ್ (ಬಿ9) 4%, ಕೋಲಿನ್ 2%, ವಿಟಮಿನ್ ‘ಸಿ’ 36%,ವಿಟಮಿನ್ ‘ಕೆ’ 1% ದಷ್ಷು ಪ್ರಮಾಣದಲ್ಲಿ ಲಭ್ಯವಿದ್ದು,ಖನಿಜಾಂಶಗಳಾದ ಕ್ಯಾಲ್ಸಿಯಂ 1%, ಐರನ್ 12%, ಮೆಗ್ನೇಷಿಯಂ 8%, ರಂಜಕ 10%, ಪೊಟಾಷಿಯಂ 7%, ಸೋಡಿಯಂ 2%,ಝಿಂಕ್ 1% ರಷ್ಟು ಪ್ರಮಾಣದಲ್ಲಿ ಲಭ್ಯವಿದೆ.ಮನುಷ್ಯನಆರೋಗ್ಯಕ್ಕೆಅವಶ್ಯಕವಾಗಿ ಬೇಕಾಗುವ ವಿಟಮಿನ್ ಹಾಗೂ ಖನಿಜಾಂಶಗಳಲ್ಲಿ ಬಹುಪಾಲು ಈ ಹಣ್ಣಿನಲ್ಲೇ ಹೇರಳವಾಗಿ ದೊರೆಯುತ್ತದೆ.100 ಗ್ರಾಂ ಈ ಹಣ್ಣಿನ ಸೇವನೆಯಿಂದ ಸುಮಾರು 97 ಕ್ಯಾಲೊರಿಯಷ್ಟು ಶಕ್ತಿಯುದೇಹಕ್ಕೆಲಭ್ಯವಾಗುತ್ತದೆ.
ಹಣ್ಣಿನಬಳಕೆ:
ಆಸ್ಟ್ರೇಲಿಯಾ ಮತ್ತುನ್ಯೂಜಿಲೆಂಡ್ ದೇಶಗಳಲ್ಲಿ ಈ ಹಣ್ಣಿಗೆವಾಣಿಜ್ಯವಾಗಿ ಬಹಳ ಬೇಡಿಕೆಯಿದ್ದುತಾಜಾ ಹಣ್ಣಿನರೂಪದಲ್ಲಿ ಹಾಗೂ ಸಂಸ್ಕರಿಸಿದ ರೂಪದಲ್ಲಿ ಮಾರುಕಟ್ಟೆಯಲ್ಲಿದೊರೆಯುತ್ತಿದ್ದುಇವುಗಳನ್ನು ಫ್ರೂಟ್ ಸಲಾಡ್ ಹಾಗೂತಾಜಾ ಹಣ್ಣಿನ ಪಲ್ಪ್ಗಳನ್ನು ತಯಾರಿಸಲು ಬಳಸಲಾಗುತ್ತದೆ.ಸಾಮಾನ್ಯವಾಗಿ ಮರುಭೂಮಿ ಪ್ರದೇಶಗಳಲ್ಲಿ ಇದರಲ್ಲಿರುವ ನೀರಿನಂಶದಕಾರಣದಿಂದಾಗಿಹೇರಳವಾಗಿ ಬಳಸಲಾಗುತ್ತದೆ.ಇವುಗಳನ್ನು ಕೇಕ್, ಐಸ್ಕ್ರೀಂ, ವೆನಿಲಾ ಸ್ಲೈಸ್ತಯಾರಿಕೆಗಳಲ್ಲೂ ಬಳಸಲಾಗುತ್ತದೆ.ಆಸ್ಟ್ರೇಲಿಯಾದಲ್ಲಿ 1920 ರಿಂದ ಫ್ಯಾಷೋನ್ ಎಂಬ ಬ್ರಾಂಡ್ ಮೂಲಕ ಈ ಹಣ್ಣಿನರಸದಿಂದತಯಾರಿಸಲಾದ ಮದ್ಯವು ಮಾರುಕಟ್ಟೆಯಲ್ಲಿದೊರೆಯುತ್ತದೆ.
ಪೂರ್ವಆಫ್ರಿಕಾ, ಬ್ರೆಜಿಲ್, ಕೊಲಂಬಿಯಾ ಮತ್ತುಡೊಮೆನಿಕಲ್ ರಿಪಬ್ಲಿಕ್ಗಳಲ್ಲಿ ಫ್ಯಾಷನ್ ಫ್ಯೂಟ್ನಿಂದತಯಾರಿಸಲಾದಜ್ಯೂಸ್ನ್ನುಪಾನೀಯವಾಗಿ ಬಳಸುತ್ತಾರೆ.ಡೊಮೆನಿಕಲ್ ರಿಪಬ್ಲಿಕ್ಗಳಲ್ಲಿ ಫ್ಯಾಷನ್ ಫ್ಯೂಟ್ ಸ್ವಾದವಿರುವ ಶಿರಫ್ಗಳು ಮಾರಕಟ್ಟೆಯಲ್ಲಿಸಿಗುತ್ತವೆ. ಇತ್ತೀಚಿನ ದಿನಗಳಲ್ಲಿ ಭಾರತದಆಂಧ್ರಪ್ರದೇಶದ ಚಿಂತಪಳ್ಳಿ ಕಾಡುಗಳಲ್ಲಿ ವೈನ್ತಯಾರಿಕೆಯಉದ್ದೇಶದಿಂದಫ್ಯಾಷನ್ಪ್ರೂಟ್ ಹಣ್ಣನ್ನುಅಧಿಕ ಪ್ರಮಾಣದಲ್ಲಿಬೆಳೆಯಲು ಪ್ರಾರಂಭಿಸಿದ್ದಾರೆ.ಇದನ್ನುಅಸ್ಸಾಂನ ದಟ್ಟಾರಣ್ಯಗಳಲ್ಲಿ ಹಾಗೂ ಕೇರಳದಲ್ಲಿ ಹಳದಿ ಬಣ್ಣದ ತಳಿಯ ಹಣ್ಣನ್ನು ಹೇರಳವಾಗಿ ಬೆಳೆಯಲಾಗುತ್ತದೆ.ಮೆಕ್ಸಿಕೋದಲ್ಲಿ ಈ ಹಣ್ಣನ್ನು ಮೆಣಸಿನಪುಡಿ ಮತ್ತು ನಿಂಬೆ ಹಣ್ಣಿನರಸದೊಂದಿಗೆ ನೇರವಾಗಿತಿನ್ನಲು ಬಳಸುತ್ತಾರೆ.
ಆರೋಗ್ಯಕ್ಕೆ ಆಗುವ ಲಾಭಗಳು:
ಈ ಹಣ್ಣಿನಲ್ಲಿವಿವಿಧರೀತಿಯ ರೋಗಗಳು ಹಾಗೂ ರೋಗ ಲಕ್ಷಣಗಳಿಗೆ ರಾಮ ಬಾಣವಾಗಿ ಕೆಲಸ ನಿರ್ವಹಿಸುವ ಗುಣಗಳಿವೆೆ.ಈ ಹಣ್ಣಿನಲ್ಲಿರುವ ವಿಶೇಷ ಔಷಧೀಯ ಗುಣಗಳು ಕ್ಯಾನ್ಸರ್ನ ಅಂಶಗಳು ಜೀವಕೋಶಗಳಲ್ಲಿ ವೇಗವಾಗಿ ಹರಡುವುದನ್ನು ನಿಯಂತ್ರಿಸುವುದರೊಂದಿಗೆಜೀರ್ಣ ಶಕ್ತಿಯನ್ನು ಹೆಚ್ಚಿಸುವ ವಿಶೇಷ ಅಂಶವನ್ನು ಹೊಂದಿದೆ.ದೇಹದರೋಗ ನಿರೋಧಕ ಶಕ್ತಿಯನ್ನು ವೇಗವಾಗಿ ವೃದ್ಧಿಸುವುದರಜೊತೆಗೆಇದರ ವಿಶೇಷ ಔಷದೀಯ ಅಂಶವುಕಣ್ಣಿನದೃಷ್ಟಿಯ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕರಿಸುತ್ತದೆ. ಈ ಹಣ್ಣಿನ ಸೇವನೆಯಿಂದಚರ್ಮದಕಾಂತಿಯನ್ನು ಹೆಚ್ಚಿಸಿ ದೇಹದಲ್ಲಿದ್ರವಾಂಶವನ್ನು ಸಮತೋಲನದಲ್ಲಿರಿಸುವಲ್ಲಿಯೂ ಸಹಕರಿಸುತ್ತದೆ.ಅದೇರೀತಿಕಡಿಮೆರಕ್ತದೊತ್ತಡಕ್ಕೆರಾಮಬಾಣವಾಗಿದ್ದುದೇಹದಲ್ಲಿರಕ್ತ ಪರಿಚಲನೆಯು ಸರಾಗವಾಗಿಆಗುವಂತೆ ನೋಡಿಕೊಳ್ಳುತ್ತದೆ.ಈ ಹಣ್ಣುಮೂಳೆಯ ಆರೋಗ್ಯವನ್ನು ಹೆಚ್ಚಿಸಿ ಮೂಳೆಯಲ್ಲಿ ಖನಿಜಾಂಶವನ್ನು ಹೆಚ್ಚಿಸುತ್ತದೆ ಮತ್ತುಇದರ ವಿಶೇಷ ಗುಣಗಳು ಮನುಷ್ಯನಚರ್ಮ ಸುಕ್ಕುಗಟ್ಟುವುದನ್ನು ನಿಯಂತ್ರಿಸಿ ಮುಪ್ಪಾದಂತೆಕಾಣುವುದನ್ನುತಡೆಯುತ್ತದೆ.ಈ ಹಣ್ಣನ್ನುಉರಿಯೂತತಡೆಗಟ್ಟುವಲ್ಲಿಯೂ ಸಹ ಬಳಸಲಾಗುತ್ತದೆ.ನಿದ್ರೆಯನ್ನು ಹೆಚ್ಚಿಸುವ ವಿಶೇಷ ಗುಣ ಈ ಹಣ್ಣಿಗಿದ್ದು, ಅಸ್ತಮಾಖಾಯಿಲೆಯ ನಿಯಂತ್ರಣಕ್ಕೂ ಈ ಹಣ್ಣನ್ನು ನೇರವಾಗಿ ಬಳಸಲಾಗುತ್ತದೆ.
ಈ ಹಣ್ಣು ಬಳ್ಳಿಗಳಲ್ಲಿ ಬೆಳೆಯುವ ಕಾರಣದಿಂದಾಗಿಇದುಪರಾವಂಬಿ ಸಸ್ಯವಾಗಿದೆ.ಅಂದರೆಇತರ ಮರಗಿಡಗಳನ್ನು ಆಶ್ರಯಿಸಿ ಅವುಗಳ ಸುತ್ತಹಬ್ಬಿಕೊಂಡು ಬೆಳೆಯುವುದರ ಜೊತೆಗೆಉತ್ತಮ ಸೂರ್ಯನ ಬೆಳಕನ್ನೂ ಸಹ ಬಯಸುತ್ತದೆ. ಈ ಹಣ್ಣಿಗೆ ಸುಮಾರು ನೂರಾರು ವರ್ಷಗಳ ಇತಿಹಾಸವಿದ್ದು ಸುಮಾರು 500ಕ್ಕೂ ಮಿಕ್ಕಿದ ಪ್ರಬೇಧಗಳಲ್ಲಿ ಇದು ಲಭ್ಯವಿದೆ. ಆದರೆಇದರ ಲಭ್ಯತೆ ಪ್ರಪಂಚದಾದ್ಯಂತ ವಿಭಿನ್ನವಾಗಿದೆ.
ಲೇಖನ ತಯಾರಿ:
ಸಂತೋಷ್ರಾವ್, ಪೆರ್ಮುಡ
ಪಟ್ರಮೆಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು,
ದೂ:9742884160
ಫೋಟೋ ಕೃಪೆ: ಅಂತರ್ಜಾಲ




