ಪ್ರಪಂಚದಅತ್ಯಂತಎತ್ತರದಯುದ್ಧಭೂಮಿಯೇ ಸಿಯಾಚಿನ್ ಗ್ಲೇಸಿಯರ್.ಸಿಯಾಚಿನ್ ಎಂಬ ಹೆಸರು ಈ ಹಿಮಶಿಖರದಲ್ಲಿ ಹೇರಳವಾಗಿ ಬೆಳೆಯುವ ಸಿಯಾನ್ ಎಂಬ ಹೂವುಗಳಿಂದಾಗಿ ಬಂದಿದೆ.ಸಿಯಾಚಿನ್ ತನ್ನ ಪೂರ್ವ ಮಗ್ಗುಲಲ್ಲಿ ಪಾಕ್ ಮತ್ತುಪಶ್ಚಿಮ ಮಗ್ಗುಲಲ್ಲಿ ಚೀನಾದೇಶಗಳನ್ನು ಇಟ್ಟುಕೊಂಡಿರುವಂತಹ ಪರ್ವತ ಪ್ರದೇಶವಾಗಿದ್ದು ಲಡಾಕ್ನಿಂದ 125 ಕಿ.ಮೀ ದೂರ ಹಾಗೂ ಸಮುದ್ರ ಮಟ್ಟದಿಂದ 18,875 ಅಡಿ ಎತ್ತರದಲ್ಲಿದೆ. ಒಟ್ಟು 77 ಕಿ.ಮೀ ವಿಸ್ತೀರ್ಣವನ್ನು ಹೊಂದಿರುವ ಈ ಪ್ರದೇಶಭಾರತ, ಪಾಕಿಸ್ತಾನ ಹಾಗೂ ಚೀನಾಗಳ ಗಡಿಗಳ ಮಧ್ಯದಲ್ಲಿದೆ. ಇದು ಹವಾಮಾನ ವೈಪರೀತ್ಯದಿಂದಲೇಅತ್ಯಂತಕುಖ್ಯಾತಿಯನ್ನು ಪಡೆದಂತ ವಿಶ್ವದಅತ್ಯಂತಎತ್ತರದಯುದ್ಧಭೂಮಿಯಾಗಿದೆ.
ಸಿಯಾಚಿನ್ ಗ್ಲೇಸಿಯರ್ನಲ್ಲಿ ಭಾರತೀಯ ಸೇನೆಯುಸುಮಾರು 3ದಶಕಗಳಿಂದ (1984ರ ನಂತರ) ಇಲ್ಲಿನ ಭೂ ಪ್ರದೇಶದ ಮೇಲೆ ಅತ್ಯಂತ ನಿಗಾವಹಿಸಿ ಕಣ್ಣಲ್ಲಿಕಣ್ಣಿಟ್ಟುಕಾಯುತ್ತಿದೆ.ಇದಕ್ಕೆಮುಖ್ಯಕಾರಣಸಿಯಾಚಿನ್ ಪ್ರದೇಶವುಅತ್ಯಂತ ಪ್ರಮುಖವಾಗಿಪಾಕಿಸ್ತಾನ ಮತ್ತುಚೀನಾದೇಶಗಳ ವ್ಯಾಪಾರನೇರ ವ್ಯಾಪಾರ ಸಂಬಂಧಕ್ಕಿದ್ದಏಕೈಕ ಭೂಮಾರ್ಗವಾಗಿದ್ದು,ತಮ್ಮ ಬಾಂಧವ್ಯವನ್ನು ಮತ್ತಷ್ಟು ಹತ್ತಿರ ಬೆಸೆಯುವಉದ್ದೇಶದಿಂದ ಈ ಪ್ರದೇಶವನ್ನುತಮ್ಮವಶಕ್ಕೆ ಪಡೆದುಕೊಳ್ಳಲು ಪಾಕ್ ಮತ್ತುಚೀನಾ ದೇಶಗಳು ಪೈಪೋಟಿಗಿಳಿದಿದ್ದವು.
ಸೈನ್ಯದ ಜೀವಾಳವೇ ಹೆಲಿಕಾಪ್ಟರ್ಗಳು:
ಸಿಯಾಚಿನ್ಗೆ ಯಾವುದೇರೀತಿಯರಸ್ತೆ ಮಾರ್ಗಗಳಿರುವುದಿಲ್ಲ. ಹಾಗೂ ಇಲ್ಲಿಕಾರ್ಯ ನಿರ್ವಹಿಸುವ ಸೈನ್ಯಕ್ಕೆಪ್ರಮುಖಸೇನಾ ಕೇಂದ್ರ ಲೇಹ್ಅಗಿದ್ದು,ಇಲ್ಲಿಂದ ಸೈನಿಕರನ್ನು ಭಾರತದಊಂಐ(ಭಾರತೀಯಏರೋನಾಟಿಕಲ್ ಲಿಮಿಟೆಡ್) ನಿಮರ್ಿತಚೀತಾ ಹೆಲಿಕಾಪ್ಟರ್ಗಳ ಮೂಲಕವೇ ಸಾಗಾಟ ನಡೆಸಲಾಗುತ್ತದೆ.ಇಲ್ಲಿನ ಹವಾಮಾನವುಕ್ಷಣಕ್ಷಣವೂಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ವೈಪರೀತ್ಯಕ್ಕೆ ಒಳಗಾಗುತ್ತಿರುತ್ತದೆ.ಅಂದರೆ ಸಿಯಾಚಿನ್ನ ಸೌತೆರೋರೇಂಜ್ ಪ್ರದೇಶದಲ್ಲಿ ಗಾಳಿಯ ವೇಗ ಗಂಟೆಗೆ 200ಕಿ.ಮೀ ಗಿಂತಲೂಅಧಿಕವಾಗಿರುವುದರಿಂದಇಲ್ಲಿ ಕಾಪ್ಟರ್ಗಳು ಗಾಳಿಯ ವೇಗವನ್ನು ಸೀಳಿಕೊಂಡು ಮುಂದೆ ಸಾಗುವುದು ಹಾಗೂ ಇಲ್ಲಿ ನಿರಂತರವಾಗಿ ಹೆಲಿಕಾಪ್ಟರ್ನ್ನುಲ್ಯಾಂಡಿಂಗ್ ಹಾಗೂ ಟೇಕ್ಆಫ್ ಮಾಡುವುದುಅತ್ಯಂತ ಕಷ್ಟ ಸಾಧ್ಯವಾಗಿದೆ.ಸಿಯಾಚಿನ್ ನಿಂದ 154ಕಿ.ಮೀ ದೂರದಲೇಹ್ನಲ್ಲಿ ಸೈನಿಕರಆಸ್ಪತ್ರೆಇದ್ದುಇಲ್ಲಿಕ್ಯಾಪ್ಟನ್ ದೀಪ್ಶಿಕಾಪಾಂಡೆ (ಆಜಜಠಿಞಚಿಕಚಿಟಿಜಜ) ಮೆಡಿಕಲ್ಆಫೀಸರ್ ಆಗಿ ಕೆಲಸ ನಿರ್ವಹಿಸುತ್ತಾ ಹವಾಮಾನ ವೈಪರೀತ್ಯದಿಂದಅನಾರೋಗ್ಯಕ್ಕಿಡಾಗುವ ಸೈನಿಕರಆರೋಗ್ಯದಕಾಳಜಿ ವಹಿಸುತ್ತಾರೆ.ಆರ್ಮ್ ಏವಿಯೇಶನ್ಕೋರ್ನ ಮೇಜರ್ ವಿಕಲ್ಪ್ ಶರ್ಮಾ  ಮತ್ತು ಅವರತಂಡದ ಸಹಕಾರದೊಂದಿಗೆಸೈನಿಕರಿಗೆಅವಶ್ಯವಿರುವಆಹಾರ ಹಾಗೂಯುದ್ಧ ಸಾಮಗ್ರಿಗಳನ್ನು ಹೆಲಿಕಾಪ್ಟರ್ ಮೂಲಕ ಪೂರೈಸುವ ಕೆಲಸವನ್ನು ಮಾಡಲಾಗುತ್ತಿದೆ.ಇಲ್ಲಿ ಸೈನಿಕ ತರಬೇತಿಕೇಂದ್ರವೂ ಲೇಹ್ನಲ್ಲಿದ್ದುಇಲ್ಲಿನ ಸಂಪೂರ್ಣಉಸ್ತುವಾರಿಯನ್ನುಕರ್ನಲ್ ಹರಿಹರನ್ರವರ ನೇತೃತ್ವದಲ್ಲಿ ನಿರ್ವಹಿಸಲಾಗುತ್ತಿದೆ.ಸಿಯಾಚಿನ್ ಪ್ರದೇಶದಲ್ಲಿ ಕಾಪ್ಟರ್ಗಳು ಸೈನ್ಯದ ಜೀವಾಳವಾಗಿದ್ದು ಪ್ರತಿ ನಿತ್ಯ ಹೆಲಿಕಾಪ್ಟರ್ಗಳಿಂದಾಗಿ ಎರಡು ಮಂದಿ ಸೈನಿಕರಜೀವ ಉಳಿಸಲಾಗುತ್ತಿದೆ.ಲೇಹ್ ಬೇಸ್ಕ್ಯಾಂಪ್ನಲ್ಲಿ ಪ್ರತಿ 7 ನಿಮಿಷಕ್ಕೊಂದು ಹೆಲಿಕಾಪ್ಟರ್ಲ್ಯಾಂಡಿಂಗ್ ಹಾಗೂ ಟೇಕ್ಆಫ್ಆಗುತ್ತದೆ.ಇದಕ್ಕಾಗಿಇಲ್ಲಿ ಸೈನ್ಯವುತನ್ನದೇಅದಏವಿಯೇಶನ್ ನಿಯಂತ್ರಣಾಕೊಠಡಿಯನ್ನೂ ಹೊಂದಿದೆ.ಸಿಯಾಚಿನ್ನಲ್ಲಿ ಸೈನಿಕರು ಹವಾಮಾನ ವೈಪರೀತ್ಯಅದರಲ್ಲೂವಿಶೇಷವಾಗಿ ಹಿಮಪಾತಕ್ಕೆ ಸಿಲುಕಿದಾಗ ಅವರನ್ನು ಕೇವಲ 40 ನಿಮಿಷದಲ್ಲಿಅಲ್ಲಿಂದ ಲೇಹ್ಗೆಚೀತಾಹೆಲಿಕಾಪ್ಟರ್ ಮೂಲಕ ಏರ್ಲಿಫ್ಟ್ಮಾಡಲಾಗುತ್ತದೆ.

1025.jpg

1040.jpg

1015.jpg

1019.jpg

1021.jpg
ಸೈನಿಕರಉಡುಗೆತೊಡುಗೆ:

ಇಲ್ಲಿನ ಸಾಮಾನ್ಯಉಷ್ಣತೆ -45 ರಿಂದ -50 ಡಿಗ್ರಿಸೆಲ್ಸಿಯಸ್ವರೆಗೂ ಇಳಿಯುವುದರಿಂದ ಸಾಮಾನ್ಯವಾಗಿ ನೀರುಸೊನ್ನೆಡಿಗ್ರಿ ಸೆಲ್ಸಿಯಸ್ಉಷ್ಣತೆಯಲ್ಲಿ ಮಂಜುಗಡ್ಡೆಯಾಗಿ ಮಾಪರ್ಾಡಾಗುತ್ತದೆ.ಅಂತಹದ್ದರಲ್ಲಿ -45 ಡಿಗ್ರಿಎಂದರೆಪರಿಸ್ಥಿತಿ ಹೇಗಿರಬೇಡ ನೀವೇ ಊಹಿಸಿ.ಇಲ್ಲಿನ ನೀರು ಹಿಮವಾಗಿ ಮಾರ್ಪಡುವುದರಿಂದನಡೆದಾಡಲುಸ್ನೋ ಬೂಟುಗಳನ್ನು ಸೈನಿಕರು ಬಳಸುತ್ತಾರೆ. ಒಂದು ವೇಳೆಬೂಟಿನಲ್ಲಿ ಕಾಲು ಬೆವರಿದರೆ ಆ ಬೆವರು ಹಿಮವಾಗಿ ಮಾರ್ಪಾಡಾಗುವ ಸಂದರ್ಭಗಳೂ ಅಧಿಕವಾಗಿದ್ದು ಸೈನಿಕರು ಬಹಳ ಎಚ್ಚರಿಕೆಯಿಂದಿರಬೇಕಾಗುತ್ತದೆ.ಇಲ್ಲಿನ ಸೈನಿಕರುಧರಿಸುವ ಧಿರಿಸಿನ ಬೆಲೆ ಸುಮಾರು ರೂ.55,000/- ಇದ್ದು ವಿಶೇಷವಾಗಿ ಚಳಿಯಿಂದ ರಕ್ಷಿಸಿಕೊಳ್ಳಲು ಅವಶ್ಯವಾಗಿರುವರೀತಿಯಲ್ಲಿಇದನ್ನು ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಬಳಸಲಾಗುವ ಉಡುಗೆಗಳೆಂದರೆ,

* ವಿಂಡ್ ಶೀಡರ್ (ಚಳಿಯಿಂದ ರಕ್ಷಿಸಿಕೊಳ್ಳುವ ವಿಶೇಷ ಉಡುಗೆ)
*ವಿಂಡ್ಟ್ರೌಜರ್
* ನೀರಿನ ಕ್ಯಾನ್ಗಳು
* ಹಿಮ ಬೂಟುಗಳು (ಹಿಮಗಡ್ಡೆಯಲ್ಲಿ ನಡೆದಾಡಲು ಅನುಕೂಲವಾಗುವಂತೆ ವಿನ್ಯಾಸ)
* ಹಿಮ ಕೈಗವಸುಗಳು
* ಹಿಮದಿಂದಕಣ್ಣನ್ನುರಕ್ಷಿಸುವ ವಿಶೇಷ ಕನ್ನಡಕಗಳು (ಸ್ನೋಗಾಗಲ್)
* ಸೈನಿಕರಇರಿಸುವಿಕೆಯನ್ನುಗುರುತಿಸುವ ವಿಶೇಷ ಟ್ರಾನ್ಸ್ರಿಸೀವರ್ಗಳು
* ಹಿಮಗಡ್ಡೆಯನ್ನುಕತ್ತರಿಸುತ್ತಾ ಮುಂದಕ್ಕೆ ಸಾಗಲು ಅನುಕೂಲವಾಗುವ ಕೈಕೊಡಲಿಗಳು.
ಹಿಮದಿಂದಾವೃತವಾದ ನೀರಿನ ಹೊಂಡಗಳಿಗೆ ಬೀಳದಂತೆ ತಪ್ಪಿಸಿಕೊಳ್ಳಲು ಒಬ್ಬರನ್ನೊಬ್ಬರು ಸರಪಣೆಯಂತೆಜೋಡಿಸಿಕೊಂಡು ಮುನ್ನಡೆಯಲು ಹಗ್ಗಗಳನ್ನು ಬಳಸಲಾಗುತ್ತದೆ.
ಇಲ್ಲಿನ ಸೈನಿಕರುತಮ್ಮದೇಹದಉಷ್ಣತೆಯನ್ನು ಕಾಪಾಡಿಕೊಳ್ಳಲು ಹೀಟರ್ಗಳ ಬಳಕೆ ಮಾಡುತ್ತಾರೆ ಹಾಗೂ ಆಹಾರವನ್ನು ಬಿಸಿ ಮಾಡಲು ಸೀಮೆ ಎಣ್ಣೆಯನ್ನು ಬಳಸಲಾಗುತ್ತದೆ. ಇಲ್ಲಿಕ್ಷಣಕ್ಷಣಕ್ಕೂ ಹವಾಮಾನ ವೈಪರೀತ್ಯಗಳಾಗುತ್ತಿರುವ ಕಾರಣಕ್ಕಾಗಿ ಕಾಪ್ಟರ್ಗಳ ಹಾರಾಟ ಕಷ್ಟ ಸಾಧ್ಯವಾಗುವ ಸಂದರ್ಭಗಳು ಬಂದಾಗ ಸೀಮೆಎಣ್ಣೆಯ ಕೊರತೆ ಬಾರದರೀತಿಯಲ್ಲಿಇಲ್ಲಿದಾಸ್ಥಾನು ಮಾಡಲಾಗುತ್ತದೆ. ಇಲ್ಲಿನ ಚಳಿಯಿಂದಾಗಿ ದೇಹದಜೀರ್ಣ ಶಕ್ತಿಯ ಪ್ರಮಾಣವೂಕಡಿಮೆಯಾಗುವುದರಿಂದ ಸೈನಿಕರಿಗೆರೆಡೀ ಹಾಗೂ ಒಣ ಆಹಾರವನ್ನೇ ನೀಡಲಾಗುತ್ತದೆ. ಯಾವುದೇತ್ಯಾಜ್ಯವನ್ನುಎಸೆದರೆಅದುಇಲ್ಲಿನ ಚಳಿಯ ಕಾರಣದಿಂದಯಾವುದೇಕಾರಣಕ್ಕೂ ಕೊಳೆಯುವುದಿಲ್ಲ, ಅದ್ದರಿಂದತ್ಯಾಜ್ಯವನ್ನೂಅಲ್ಲಿಂದ ಕಾಪ್ಟರ್ಗಳ ಮೂಲಕವೇ ಸಂಗ್ರಹಿಸಿ ವಾಪಾಸ್ ಲೇಹ್ಗೆತರುವಜವಾಬ್ದಾರಿಯೂ ಆರ್ಮೀ ಏವಿಯೇಶನ್ಕೋರ್ನ ಮೇಲಿದೆ. ಈ ಮೂಲಕ ತ್ಯಾಜ್ಯ ನಿರ್ವಹಣೆಯನ್ನೂ ಸಮರ್ಪಕವಾಗಿ ಮಾಡುವ ಮೂಲಕ ಸೈನ್ಯವುಇಲ್ಲಿ ವಿಶೇಷ ಸಾಧನೆಯನ್ನು ಮಾಡುತ್ತಿದೆ.
ಇಲ್ಲಿಗೆ ಸಾಮಾಗ್ರಿಗಳನ್ನು ಸಾಗಾಟ ಮಾಡಲುರಷ್ಯ ನಿಮರ್ಿತಒ-17ಕಾಪ್ಟರ್ ಗಳನ್ನು ಬಳಸಲಾಗುತ್ತದೆ. ಈ ಕಾಪ್ಟರ್ಗಳು ಸುಮಾರು15,000ಕೆ.ಜಿ ಭಾರವನ್ನು ಸಾಗಿಸುವ ಸಾಮಥ್ರ್ಯವನ್ನು ಹೊಂದಿದ್ದು, ಸಿಯಾಚಿನ್ನಲ್ಲಿ ಎಲ್ಲಾ ಸಮಯದಲ್ಲೂಲ್ಯಾಂಡಿಂಗ್ ಹಾಗೂ ಟೇಕ್ಆಫ್ಅಸಾಧ್ಯವಾದ ಸಂದರ್ಭದಲ್ಲಿ(ಅಸಾಮಾನ್ಯ ಹಿಮಪಾತವಾಗುತ್ತಿರುವಾಗ) ವಸ್ತುಗಳನ್ನು ಮೇಲಕ್ಕೆ ಸುಲಭವಾಗಿ ಹಾಕಲು ಹಾಗೂ ಕಾಪ್ಟರ್ನಿಂದ ಕೆಳಗಿಳಿಸಲು ಸಹಾಯವಾಗುವಂತೆಹಿಂಬದಿಯಲ್ಲಿದೊಡ್ಡದಾದ ಬಾಗಿಲನ್ನು ಅಳವಡಿಸಲಾಗಿದೆ. ಸಿಯಾಚಿನ್ಗೆ ಪದಾರ್ಪಣೆ ಮಾಡುವ ಪೂರ್ವದಲ್ಲಿಇಲ್ಲಿ ಓ.ಪಿ ಬಾಬಾರವರದೇವಾಲಯಸಿಗುತ್ತದೆ. ಇಲ್ಲಿಗೆಆಗಮಿಸುವ ಸೈನಿಕರುಇಲ್ಲಿನ ಒ.ಪಿ ಬಾಬಾರದರ್ಶನ ಹಾಗೂ ಪೂಜೆಯನ್ನು ನೆರೆವೇರಿಸಿಯೇ ಇಲ್ಲಿಗೆ ಪ್ರಯಾಣ ಮುಂದುವರೆಸುತ್ತಾರೆ.

ಸೈನಿಕರದೇವರು ಓ.ಪಿ ಬಾಬಾ:
ಓ.ಪಿ ಬಾಬ ದೇವಸ್ಥಾನದಲ್ಲಿಒಬ್ಬಯೋಧನೇದೇವರು.ಇಲ್ಲಿಯೋಧರೇಈತನಿಗೆ ಪೂಜೆಯನ್ನು ಭಕ್ತಿಯಿಂದ ನೆರವೇರಿಸುತ್ತಾರೆ. ಈ ಯೋಧನ ಹೆಸರೇ ಓಂ ಪ್ರಕಾಶ್.1984 ರಲ್ಲಿ ಭಾರತೀಯ ಸೈನ್ಯವುಆಪರೇಶನ್ ಮೇಘದೂತ್ಮೂಲಕ ಸಿಯಾಚಿನ್ನನ್ನು ಪಾಕ್ ಸೈನ್ಯದ ಉಪಟಳದಿಂದ ರಕ್ಷಿಸಿ ಗಡಿಯನ್ನು ಗುರುತಿಸಿ ಬೇಲಿ ಹಾಕುವ ಕಾರ್ಯಕ್ಕಾಗಿ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿರಾತ್ರಿಯ ವೇಳೆ ಪಾಕ್ ಸೈನ್ಯ ಸಿಯಾಚಿನ್ ಒಳಗೆ ನುಸುಳುತ್ತಿರುವುದನ್ನು ಗಮನಿಸಿದಯೋಧಓಂಪ್ರಕಾಶ್ತನ್ನ ಸಹ ಸೈನಿಕರ ನಿದ್ದೆಗೆ ಭಂಗವಾಗದಿರಲಿ ಎಂಬ ಉದ್ದೇಶದಿಂದತಾನೊಬ್ಬನೇ ಪಾಕ್ ಸೈನಿಕರ ವಿರುದ್ಧ ಹೋರಾಡುತ್ತಾ ಪಾಕ್ ಸೈನಿಕರನ್ನು ಹಿಮ್ಮೆಟ್ಟಿಸಿ ನಿಗೂಢವಾಗಿಕಾಣೆಯಾಗುತ್ತಾನೆ. ಅಂದಿನಿಂದ ಇಂದಿನ ವರೆಗೂ ಈ ಓಂ ಪ್ರಕಾಶ್ ಎಂಬ ಸೈನಿಕಏನಾದಎಂಬುವುದಕ್ಕೆಯಾವುದೇ ಕುರುಹುಗಳಿಲ್ಲ. ಅದರೆಈತನಆತ್ಮಇಲ್ಲಿನ ಸೈನಿಕರಮೈಯಲ್ಲಿ ಪವಾಡರೂಪದಲ್ಲಿ ಬಂದುತನ್ನಕುರಿತು ಹೇಳಿರುವ ಹಾಗೂ ಸಿಯಾಚಿನ್ನನ್ನು ತಾನುಇನ್ನೂ ಕಾವಲು ಕಾಯುತ್ತಿರುವುದಾಗಿ ಹೇಳಿದ ನಿದರ್ಶನಗಳೂ ಇವೆ. ಹೀಗಾಗಿ ಸಿಯಾಚಿನ್ನಲ್ಲಿ ಓಂ ಪ್ರಕಾಶ್ನನ್ನುದೇವರೆಂದೇ ಪೂಜಿಸಲಾಗುತ್ತಿದೆ.
ಸೈನಿಕರಜೀವನ ಶೈಲಿ:

ಸಿಯಾಚಿನ್ನಲ್ಲಿ ಸಾಮಾನ್ಯವಾಗಿ -30 ಡಿಗ್ರಿಯಷ್ಟುತಾಪಮಾನವಿದ್ದು ಸೈನಿಕರು ಚಳಿಯಿಂದ ರಕ್ಷಿಸಿಕೊಳ್ಳಲು ರಾತ್ರಿ ಹೊತ್ತುಇಲ್ಲಿಕ್ಯಾಂಪ್ ಫಯರ್ಹಾಕುತ್ತಾರೆ. ಇಲ್ಲಿ ಪ್ರತೀ ಮೂರು ತಿಂಗಳಿಗೊಮ್ಮೆ ಸೈನಿಕರನ್ನು ಬದಲಾವಣೆ ಮಾಡಲಾಗುತ್ತಿದ್ದು, ಪ್ರತೀ ಹೊಸ ಸೈನಿಕರ ತಂಡಗಳು ಇಲ್ಲಿ ಬಂದಾಗಲೂಇಲ್ಲಿ ಹಳೆಯ ತಂಡ ಹೊಸ ತಂಡಕ್ಕೆ ವೆಲ್ಕಂ ಪಾರ್ಟಿ  ನಡೆಸುತ್ತದೆ. ಇಡೀ ಸಿಯಾಚಿನ್ನ್ನು ಕಾಯಲುಒಟ್ಟು 800 ಮಂದಿ ಸೈನಿಕರನ್ನು ನಿಯೊಜಿಸಲಾಗುತ್ತದೆ. ಪ್ರತೀತಂಡದಲ್ಲೂ ಸುಮಾರುಐದು ಮಂದಿ ಸೈನಿಕರಿದ್ದು ದಿನವೊಂದಕ್ಕೆ ಸುಮಾರು 12 ರಿಂದ 16 ಕಿಮೀ ಸಿಯಾಚಿನ್ನಲ್ಲಿ ನಡೆದಡುತ್ತಾಕಾರ್ಯಾಚರಣೆಯನ್ನು ನಡೆಸುತ್ತಾರೆ. ನಂತರಎರಡು ದಿನಗಳಕಾಲ ಆಯ್ದ ಪ್ರದೇಶದಲ್ಲಿ ವಿಶ್ರಾಂತಿಯನ್ನು ಪಡೆಯುತ್ತಾರೆ. ಇಲ್ಲಿಯೋಧರುಜೋರಾಗಿ ಮಾತನಾಡಲೂಹಿಂಜರಿಯುತ್ತಾರೆ, ವೇಗವಾಗಿ ನಡೆದಾಡಿದಲ್ಲಿ ಶೀಘ್ರವಾಗಿ ಸುಸ್ತಾಗುವ ಹಾಗೂ ಬೆವರುವಕಾರಣಕ್ಕೆ ನಿಧಾನವಾಗಿ ನಡೆದಾಡುತ್ತಾರೆ.

ಇಲ್ಲಿನ ಸೈನಿಕರಿಗೆ ನಡೆದಾಡುತ್ತಿರುವಅವಧಿಯಲ್ಲೇಹೆಲಿಕಾಪ್ಟರ್ಗಳ ಮೂಲಕ ಆಹಾರದ ಪೊಟ್ಟಣಗಳನ್ನು ಪ್ಯಾರಾಶೂಟ್ಗಳನ್ನು ಬಳಸಿ ಕೆಳಕ್ಕೆ ಇಳಿಯಬಿಡಲಾಗುತ್ತದೆ. ಯೋಧರು ಇವುಗಳನ್ನು ತಕ್ಷಣಅಲ್ಲಿಂದಸಂಗ್ರಹಿಸಬೇಕು ಇಲ್ಲವಾದರೆ ಹಿಮಪಾತದಲ್ಲಿಕ್ಷಣ ಮಾತ್ರದಲ್ಲಿಆಹಾರದ ಪೊಟ್ಟಣಗಳು ಹಿಮದಲ್ಲಿ ಮುಳುಗಿಬಿಡುತ್ತದೆ. ಹಾಗೂ ಇವುಗಳನ್ನು ಸಂಗ್ರಹಿಸಿ ಬಿಸಿ ಮಾಡಿಯೇತಿನ್ನಬೇಕು, ಯಾಕೆಂದರೆ ಇವುಗಳು ಮಂಜಿನಿಂದಗಟ್ಟಿಯಾಗಿರುತ್ತವೆ. ಸೈನಿಕರು ನಡೆದಾಡುವ ಸಂದರ್ಭದಲ್ಲಿ 16 ಕೆ.ಜಿತೂಕದ ಟೆಂಟ್ಗಳನ್ನು ಮತ್ತುಸುಮಾರು 25 ಕೆ.ಜಿತೂಕದ ಶಸ್ತ್ರಾಸ್ತ್ರಗಳನ್ನೂ ಹೊತ್ತುಕೊಂಡೇ ನಡೆಯಬೇಕಾಗಿದೆ.ಯೋಧರುಇಲ್ಲಿರಾತ್ರಿ ನಿದ್ರಿಸಬೇಕಾದರೆ ಬಿಸಿ ನೀರಿನಲ್ಲಿಕಾಲಿಟ್ಟು ಮಲಗಿದರೆಮಾತ್ರ ನಿದ್ರೆ ಬರುವಂತಹ ಸನ್ನಿವೇಶಗಳೂ ಇವೆ.ಪ್ರಪಂಚದಲ್ಲಿಯಾವುದೇ ಮಿಲಿಟರಿಯೂಇಂತಹಕಠಿಣ ಸನ್ನಿವೇಶದಲ್ಲಿ ಕಾರ್ಯಾಚರಿಸುತ್ತಿರುವ ಉದಾಹರಣೆಗಳೇ ಇಲ್ಲ. ಭಾರತೀಯ ಸೈನ್ಯ ಹಾಗೂ ನಮ್ಮ ಸೈನಿಕರು ನಿಜಕ್ಕೂಗ್ರೇಟ್ಅಲ್ಲವೇ?
1947ನೇ ಇಸವಿಯಲ್ಲಿ ಭಾರತ ಮತ್ತು ಪಾಕಿಸ್ತಾನಗಳೆಂದು ದೇಶ ವಿಭಜನೆಯಾದ ನಂತರ ಪಾಕಿಸ್ತಾನ ಭೌಗೋಳಿಕ ವ್ಯಾಪ್ತಿಯಿಂದತೃಪ್ತವಾಗದೇ ಸಿಯಾಚಿನ್ ಹಾಗೂ ಕಾಶ್ಮೀರದ ಮೂಲಕ ಯುದ್ಧ ಮಾಡುತ್ತಲೇಇದೆ. ಈಗ ಸಿಯಾಚಿನ್ ಪ್ರದೇಶದಲ್ಲಿಗುಂಡಿನ ಮೊರೆತವಿಲ್ಲ ಬದಲಾಗಿ ಪರ್ವತ ಶಿಖರಗಳ ಎದೆಯಲ್ಲಿಗುಂಡಿನಗುರುತು ಮಾತ್ರ ಉಳಿದಿದೆ. ಶಿಮ್ಲಾ ಒಪ್ಪಂದದಪ್ರಕಾರಭಾರತ ಮಾತ್ತು ಪಾಕ್ಗಳ ಮಧ್ಯೆ ಗಡಿಗಳನ್ನು ಗುರುತಿಸಿ ಐಔಅ(ಐಟಿಜ ಔಜಿ ಅಠಟಿಣಡಿಠಟ)ಎಂದುಗುರುತಿಸಲಾಯಿತು. ಈಒಪ್ಪಂದದ ಪ್ರಕಾರ 24,190 ಅಡಿ ಎತ್ತರದ ಸಿಯಾಚಿನ್ನ ಪ್ರಮುಖ ಭೂ ಭಾಗಗಳನ್ನು ಗುರುತಿಸಿ ಅಲ್ಲಿ ಭಾರತದ ಬಾವುಟವನ್ನು ಹಾರಿಸಿದ ಶ್ರೇಯಸ್ಸುಕರ್ನಲ್ ನರೇಂದ್ರಕುಮಾರ್ ಮತ್ತುಅವರ150 ಮಂದಿ ಯೋಧರತಂಡಕ್ಕೆ ಸಲ್ಲುತ್ತದೆ.ಸಿಯಾಚಿನ್ ಹಿಮಶಿಖರ ಪಾಕ್ಕೈವಶವಾದರೆಚೀನಾ ಮತ್ತು ಪಾಕಿಸ್ತಾನದಗಡಿ ರೇಖೆಗಳು ಅತ್ಯಂತ ಹತ್ತಿರಕ್ಕೆ ಬಂದುಎಲ್ಲಾ ವ್ಯವಹಾರಗಳಿಗೂ ಇದು ಸಹಕಾರಿಯಾಗಲಿದೆಎಂಬುದೇ ಸಿಯಾಚಿನ್ನ ಪ್ರಾಮುಖ್ಯತೆ ಹೆಚ್ಚಲು ಕಾರಣ. ಇಲ್ಲಿಇದುವರೆಗೆ ಸುಮಾರು 910 ಸೈನಿಕರು ಪ್ರಾಣಾರ್ಪಣೆಯನ್ನು ಮಾಡಿದ್ದಾರೆಆದರೆಅದುಯುದ್ಧದಲ್ಲಿಅಲ್ಲಬದಲಾಗಿ ಭೀಕರ ಹವಾಮಾನ ವೈಪರೀತ್ಯಗಳಲ್ಲೊಂದಾದ ಹಿಮಪಾತದಿಂದಾಗಿ.
ಸಿಯಾಚಿನ್ಗೆ ಕರ್ತವ್ಯ ನಿರ್ವಹಿಸಲು ಹೊರಡುವ ಸೈನಿಕರೆಲ್ಲರೂವಾಪಾಸ್ಸು ಬರುತ್ತಾರೆಎನ್ನುವಖಚಿತತೆಇಲ್ಲ ಹಾಗೂ ವಾಪಾಸ್ಸು ಬಂದರೂಎಲ್ಲರೂ ಹಿಂದಿನ ರೀತಿಯೇಇರುತ್ತಾರೆಎಂದು ಹೇಳಲಾಗುವುದಿಲ್ಲ. ಇಲ್ಲಿಕಾರ್ಯನಿರ್ವಹಿಸುವ ವೇಳೆ ತೆಗೆಯಲಾದ ಫೋಟೋ ಹಾಗೂ ವೀಡಿಯೋಗಳನ್ನು ಅಧ್ಯಯನ ನಡೆಸಿ ಮುಂದಿನ ತಂಡಗಳಲ್ಲಿ ಕರ್ತವ್ಯ ನಿರ್ವಹಣೆಗೆ ತೆರಳುವ ಸೈನಿಕರು ಮಾಡಿಕೊಳ್ಳಬೇಕಾದ ತಯಾರಿಗಳ ಕುರಿತು ನಿರ್ದೇಶನವನ್ನು ನೀಡಲಾಗುತ್ತದೆ. ಕೆಲವರಿಗೆಈ ಕರ್ತವ್ಯ ನಿರ್ವಹಣೆಯಅವಧಿಯುಜೀವನದಅತ್ಯಂತ ವಿಶೇಷವಾದಕ್ಷಣವಾಗಿ ಸವಿ ನೆನಪಾಗಿ ಉಳಿದರೆ ಕೆಲವರಿಗಂತೂ ಬದುಕನ್ನೇ ಬದಲಿಸುವ ಕ್ಷಣವಾಗಿ ಮಾರ್ಪಾಡಾಗುವುದೂ ಸಾಮಾನ್ಯ.
ಸೈನಿಕರುಇಲ್ಲಿ ಬಿಡುವಿನ ಸಮಯವನ್ನುಕ್ರಿಕೆಟ್ಇನ್ನಿತರ ಆಟಗಳನ್ನು ಅಡುವ ಮೂಲಕ ಕಳೆಯುತ್ತಾರೆ ಹಾಗೂ ಇಲ್ಲಿಗೆ ಬರುವಾಗಯಾವ ಸೈನಿಕರಿಗೂ ಪರಸ್ಪರ ಪರಿಚಯವಿರುವುದಿಲ್ಲ, ಇಲ್ಲಿ ಬಂದ ನಂತರಒಬ್ಬರಿಗೊಬ್ಬರುಪರಿಚಯವಾಗಿಒಂದೇಕುಟುಂಬದಂತೆ ಬದುಕುತ್ತಾರೆ. 1947ರ ದೇಶ ವಿಭಜನೆಯಾದಎರಡು ತಿಂಗಳ ನಂತರದಲ್ಲಿ ನಡೆದ ಭಾರತ ಮತ್ತು ಪಾಕ್ಯುದ್ಧ ಹಾಗೂ 1971 ರ ಬಾಂಗ್ಲಾ ವಿಮೋಚನೆಯ ಹೋರಾಟದಲ್ಲಿಭಾರತದ ಪಾತ್ರವು ಪಾಕ್ಗೆ ಭಾರತದ ಸೈನ್ಯ ಶಕ್ತಿಯ ಆಳವನ್ನು ಪರಿಚಯಿಸಿತ್ತು.
ಮನುಷ್ಯ ಬದುಕುವುದೇ ಕಷ್ಟ ಎಂಬಂತಹ ಪ್ರದೇಶದಲ್ಲಿ ಪ್ರಕೃತಿಯಜತೆ ಪ್ರತಿಕ್ಷಣವೂ ಹೋರಾಡುತ್ತಾ ಶತ್ರುಗಳ ವಿರುದ್ಧವೂಕಾದಾಟ ನಡೆಸಬೇಕಾದಂತಹವಿಶಿಷ್ಟ ಸನ್ನಿವೇಶ ಹಾಗೂ ವಿಭಿನ್ನ ಹವಾಮಾನದಲ್ಲಿ ಕೆಲಸ ನಿರ್ವಹಿಸುವ ನಮ್ಮ ಸೈನಿಕರಆತ್ಮಸ್ಥೈರ್ಯ ಹಾಗೂ ಛಲವನ್ನು ನಾವೆಲ್ಲರೂಗೌರವಿಸಲೇ ಬೇಕು. ಇತ್ತೀಚೆಗೆ ಸಿಯಾಚಿನ್ ಹಿಮಪಾತದಲ್ಲಿಸಿಲುಕಿ ಐದು ದಿನ ತನ್ನಜೀವವನ್ನು ಹಿಮದಡಿಯಲ್ಲಿ ಹಿಡಿದಿಟ್ಟುಕೊಂಡ ಲ್ಯಾನ್ಸ್ ನಾಯ್ಕ್ಹನುಮಂತಕೊಪ್ಪದ್ ಹಾಗೂ ಅವರೊಂದಿಗೆ ಹುತಾತ್ಮರಾದಇತರಒಂಬತ್ತು ಮಂದಿಯ ಬಲಿದಾನಎಂತವರಎದೆಯನ್ನೂಝಲ್ಎಂದು ನಡುಗಿಸುತ್ತದೆ. ತಾಯಿ ಭಾರತಾಂಬೆಯರಕ್ಷಣೆಯು ನಮ್ಮೆಲ್ಲರಜವಾಬ್ದಾರಿಯಾಗಿದ್ದು ನೇರವಾಗಿದೇಶರಕ್ಷಣೆ ಮಾಡುವ ಅವಕಾಶ ನಮಗಿಲ್ಲದಿದ್ದರೂದೇಶರಕ್ಷಣೆಯ ನೇರಕೈಂಕರ್ಯದಲ್ಲಿತಮ್ಮಕುಟುಂಬ, ಮಕ್ಕಳು, ಬಂಧು ಬಳಗವನ್ನು ಬಿಟ್ಟುಗಡಿಕಾಯುತ್ತಿರುವ ಸೈನಿಕರನ್ನು ನಾವೆಲ್ಲರೂಗೌರವಿಸೋಣಅಲ್ಲವೇ  ?  ಭಾರತ್ ಮಾತಾ ಕೀ ಜೈ……
********
ಲೇಖನ ತಯಾರಿ:
ಸಂತೋಷ್ರಾವ್. ಪೆರ್ಮುಡ
ಪಟ್ರಮೆಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕಜಿಲ್ಲೆ
ದೂ:9742884160
ಚಿತ್ರಗಳು: ಸಂಗ್ರಹ

By suddi9

Leave a Reply

Your email address will not be published. Required fields are marked *