ಉತ್ತರ ಕನ್ನಡ ಜಿಲ್ಲೆಯ ಕುಮುಟಾದ ಒಂದು ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ಸುಮಾರು ಹನ್ನೆರಡು ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡದ ತಾರೆಯಾಗಿ ಮಿನುಗ ಬೇಕೆಂಬ ಮಹದಾಸೆಯನ್ನು ಹೊತ್ತು ಮುಂಬೈ ಎಂಬ ಮಾಯಾ ನಗರಿಗೆ ಬಂದ ಯುಕನೊಬ್ಬನ ಬದುಕು ಅನಿವಾರ್ಯವಾಗಿ ತಿರುವನ್ನು ಪಡೆದುಕೊಂಡ ರಾಘವೇಂದ್ರ ದೇವ್ಗಿರವರ ಕಥೆಯಿದು.ಇವರು ಇಂದು ಭಾರತೀಯ ಕ್ರಿಕೆಟ್ ತಂಡದ ಸಹಾಯಕ ದೈಹಿಕ ತರಬೇತುದಾರ.
ಕುಮಟಾದ ಹಳ್ಳಿಯೊಂದರ ಬಡಕುಟುಂಬದಲ್ಲಿ ಹುಟ್ಟಿದರಾಘವೇಂದ್ರದೇವ್ಗಿರವರುಶಾರದಾ ನಿಲಯ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬಂತೆಕ್ರಿಕೆಟ್ನ ಗೀಳು ಹುಟ್ಟಿಕೊಂಡುತಾನು ಶ್ರೇಷ್ಠ ಕ್ರಿಕೆಟ್ಪಟುವಾಗಬೇಕೆಂಬ ಆಸೆಯುಮನದಲ್ಲಿಗಟ್ಟಿಯಾಗಿ ಬೇರೂರಿತ್ತು. ಕ್ರಿಕೆಟ್ತನ್ನ ಬದುಕು, ಅದೇ ನನ್ನಗುರಿಎಂಬ ಮಾತುಆ ಪುಟ್ಟಹೃದಯದಲ್ಲಿಅದಾಗಲೇ ಸ್ಪಷ್ಟವಾಗಿತ್ತು.ತನ್ನ ಮಗ ಕ್ರಿಕೆಟ್ಕ್ಷೇತ್ರದೆಡೆಗೆಆಕರ್ಷಿತನಾಗುತ್ತಿರುವುದಕ್ಕೆ ಹೆತ್ತವರಿಂದ ಸ್ಪಷ್ಟ ವಿರೋಧವಿದ್ದು, ತನ್ನ ಬಿಡುವಿನ ಹೆಚ್ಚಿನ ಅವಧಿಯನ್ನೆಲ್ಲಾ ಕ್ರಿಕೆಟ್ ಮೈದಾನದಲ್ಲೇ ಕಳೆಯುತ್ತಿದ್ದನ್ನು ಗಮನಿಸಿದ ಪೋಷಕರು, ಶಾಲಾ ಶಿಕ್ಷಕರ ಮಗನಾಗಿ ಉನ್ನತ ವಿದ್ಯಾಬ್ಯಾಸ ಪಡೆದು ಪ್ರಸಿದ್ಧ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರುವಂತೆ ಎಂದು ಹಲವುಬಾರಿ ಗದರಿಸಿದ್ದೂ ಇದೆ. ಆದರೆ ರಾಘವೇಂದ್ರರವರ ಕನಸು ಮತ್ತು ಗುರಿ ಹಿಂದಿರುಗಿ ನೋಡದ ಸ್ಥಿತಿಯಲ್ಲಿ ಕ್ರಿಕೆಟ್ ಕ್ಷೇತ್ರದೆಡೆಗೆ ಅದಾಗಲೇಟಿಸಿಲೊಡೆದಿತ್ತು.


ಶಾಲಾ ರಜಾದಿನಗಳಲ್ಲಿ ರಾಘವೇಂದ್ರರವರು ಮುಂಬೈನಲ್ಲಿರುವತನ್ನ ಬಂಧುಗಳ ಮನೆಗೆ ಹೋಗುತ್ತಿದ್ದಾಗಅಲ್ಲಿಕ್ರಿಕೆಟ್ದಂತಕಥೆತೆಂಡೂಲ್ಕರ್ರವರಕ್ರಿಕೆಟ್ ಗುರುಗಳಾದರಮಾಕಾಂತಅಜ್ರೇಕರ್ರವರಕ್ರಿಕೆಟ್ಅಕಾಡೆಮಿಯಲ್ಲಿಕ್ರಿಕೆಟ್ನವಿವಿಧ ಆಯಾಮಗಳನ್ನು ಸ್ಥೂಲವಾಗಿ ಕಲಿಯುತ್ತಾರೆ.ಆಗಲೇ ಇವರಕಲಿಕಾ ಆಸಕ್ತಿ, ಏಕಾಗ್ರತೆ, ಬದ್ಧತೆ ಮೊದಲಾದವುಗಳನ್ನು ಗಮನಿಸಿದ ಅಜ್ರೇಕರ್ರವರು ಭವಿಷ್ಯದಲ್ಲಿಇವನೊಬ್ಬಉತ್ತಮಕ್ರಿಕೆಟ್ಆಟಗಾರನಾಗಿ ಹೊರ ಹೊಮ್ಮತ್ತಾನೆ ಎಂಬ ಆಶಾವಾದದ ಮಾತುಗಳನ್ನಾಡಿದ್ದರು.ಆದರೆ ಬಂಧುಗಳ ಮನೆಯಲ್ಲಿ ಹೆಚ್ಚು ದಿನ ನಿಲ್ಲಲಾರದೇ ಹಾಗೂ ಮುಂಬೈ ಮಹಾನಗರಿಯದುಬಾರಿಜೀವನದಕಾರಣದಿಂದಾಗಿಇವರು ಮತ್ತೆತನ್ನೂರನ್ನುಸೇರಿಕೊಳ್ಳುತ್ತಾರೆ.ಪ್ರೌಢಶಾಲಾ ಶಿಕ್ಷಣದ ನಂತರ ಪಿ.ಯು.ಸಿ ವಿದ್ಯಾಭ್ಯಾಸವನ್ನುಕುಮಟಾದಕೆ.ಎಲ್.ಇಕಾಲೇಜಿನಲ್ಲಿ ಮಾಡುತ್ತಿರುವಾಗಲೂಇವರುವಿದ್ಯಾಭ್ಯಾಸಕ್ಕಿಂತ ಹೆಚ್ಚಿನಅವಧಿಯನ್ನುಕ್ರಿಕೆಟ್ಗೇ ಮೀಸಲಿಡುತ್ತಾರೆ.ನಂತರಗುರಿ ಸಾಧನೆಯಸಲುವಾಗಿ ರಾಘವೇಂದ್ರರವರು ಮನೆ ಹಾಗೂ ವಿದ್ಯಾಭ್ಯಾಸವನ್ನು ತ್ಯಜಿಸಿ ಹುಬ್ಬಳ್ಳಿ ನಗರವನ್ನು ಸೇರಿಕೊಳ್ಳುತ್ತಾರೆ.
ಆಶ್ರಯಕ್ಕಾಗಿ ಸೂರಿಲ್ಲದ ಪರಿಸ್ಥಿಯಲ್ಲಿಯೂ ಧಾರವಾಡ ವಲಯತಂಡದ ಪರವಾಗಿಆಡಬೇಕೆಂಬ ಅಧಮ್ಯಆಸೆಯಿಂದಇಲ್ಲಿಕನರ್ಾಟಕರಾಜ್ಯಕ್ರಿಕೆಟ್ಅಕಾಡೆಮಿ ಮೈದಾನದಲ್ಲಿದಿನವಿಡೀಅಭ್ಯಾಸ ಮಾಡುತ್ತಾವಿಶ್ರಾಂತಿಗಾಗಿ ಸ್ವಲ್ಪ ದಿನಗಳ ಕಾಲ ಬಸ್ಸ್ಟಾಂಡ್ನ್ನುಆಶ್ರಯಿಸುತ್ತಾರೆ.ಆದರೆಪೋಲೀಸರ ಭಯದಿಂದ ಮೈದಾನದ ಪಕ್ಕದಲ್ಲಿಯೇಇರುವ ಸ್ಮಶಾನವೇ ಸುರಕ್ಷಿತತಾಣವೆಂದು ಮನಗಂಡುಅಲ್ಲಿಯೇಹಲವಾರುರಾತ್ರಿಗಳನ್ನು ಕಳೆಯುತ್ತಾರೆ.ಕ್ರಿಕೆಟ್ಆಡುವ ವೇಳೆ ತನ್ನ ಬಲಗೈಗೆ ಗಂಭೀರವಾದಗಾಯವನ್ನು ಮಾಡಿಕೊಂಡುಶ್ರೇಷ್ಠ ಕ್ರಿಕೆಟ್ಆಟಗಾರನಾಗಬೇಕೆಂಬ ಅವರಕನಸು ಭಗ್ನವಾಗುವ ಹಂತಕ್ಕೆ ಬರುತ್ತದೆ.ಒಂದೆಡೆಕ್ರಿಕೆಟ್ಗಾಗಿ ಬದುಕಿನಲ್ಲಿ ಮಾಡಿದ ತ್ಯಾಗಗಳು ಮತ್ತುಕ್ರಿಕೆಟ್ನ್ನೇದೇವರೆಂದು ಸ್ವೀಕರಿಸಿದ ಮನಸ್ಸು, ಮತ್ತೊಂದೆಡೆಅಡ್ಡಿಯಾಗುವತನ್ನಗಾಯದಸಮಸ್ಯೆಯಮಧ್ಯೆಯೂ ಫಿನಿಕ್ಸ್ ಹಕ್ಕಿಯಂತೆಮೇಲೆದ್ದು ನನ್ನ ಕನಸುಗಳು ಕಮರಲು ಬಿಡೆನೆಂಬ ದಿಟ್ಟನಿರ್ಧಾರದೊಂದಿಗೆ ಬೆಂಗಳೂರಿನ ಎಮ್.ಜಿರಸ್ತೆಗೆ ಬರುತ್ತಾರೆ.ಇದೇ ಬೆಂಗಳೂರು ರಾಘವೇಂದ್ರದೇವ್ಗಿರವರ ಬದುಕಿನ ದಿಕ್ಕನ್ನೇ ಬದಲಾಯಿಸುತ್ತದೆ ಹಾಗೂ ಇವರ ಕನಸಿನ ಮೆಟ್ಟಿಲಾಗಿ ಮಾರ್ಪಾಡಾಗುತ್ತದೆ.ಏಕೆಂದರೆ ಚಿನ್ನಸ್ವಾಮಿ ಕ್ರಿಡಾಂಗಣ ಇರುವುದುಇಲ್ಲೇ.ತನ್ನಕನಸನ್ನು ಹೊತ್ತು ಕುಳಿತ್ತಿದ್ದ ರಾಘವೇಂದ್ರರವರನ್ನುಗಮನಿಸಿದ ಭಾರತತಂಡದಮಾಜಿವೇಗದ ಬೌಲರ್ಜಾವಗಲ್ ಶ್ರೀನಾಥ್ರವರು ಇವರಲ್ಲಿದ್ದ ಕನಸು ಹಾಗೂ ಕ್ರಿಕೆಟ್ನತುಡಿತವನ್ನುಕಂಡು ಕರ್ನಾಟಕಕ್ರಿಕೆಟ್ ಸಂಸ್ಥೆಯ ಮುಖ್ಯ ತರಬೇತುದಾರರಾಗಿದ್ದ ಇರ್ಫಾನ್ ಸೇಠ್ರಿಗೆ ಪರಿಚಯಿಸುತ್ತಾರೆೆ.ಅಲ್ಲಿಂದ ಇಲ್ಲಿಯವರೆಗೂ ಈ ಹುಡುಗ ಮತ್ತೆಂದೂ ಹಿಂದೆತಿರುಗಿ ನೋಡಿದ್ದೇಇಲ್ಲ.
ಕೈಯಗಾಯದಕಾರಣದಿಂದಾಗಿರಾಘುರವರು ಇರ್ಫಾನ್ ಸೇಠ್ರವರಗರಡಿಯಲ್ಲಿ ಸುಮಾರು 2008 ರವರೆಗೆಸಹಾಯಕರಾಗಿಕರ್ತವ್ಯವನ್ನು ನಿರ್ವಹಿಸುವ ಸಂದರ್ಭದಲ್ಲೇಇವರಲ್ಲಿನ ಪರಿಪೂರ್ಣಕ್ರಿಕೆಟಿಗನಾಗಬೇಕೆಂಬ ಮನೋಭಾವವನ್ನು ಗಮನಿಸಿದ್ದಾಗಿ ಹೇಳುತ್ತಾರೆ.ಕೆ.ಎಸ್.ಸಿ.ಎಯಲ್ಲಿದ್ದಾಗ(ಕನಾಟಕರಾಜ್ಯಕ್ರಿಕೆಟ್ಅಕಾಡೆಮಿ) ಸ್ವಾತಿಕ್ಯೂನಿಯನ್ಕ್ರಿಕೆಟ್ಕ್ಲಬ್ ಪರಆಡುತ್ತಾಅದರ ಮುಖ್ಯತರಬೇತುದಾರರಾದಇಫರ್ಾನ್ಸೇಠ್ರವರೊಂದಿಗೆಸಹ ಆಟಗಾರರಿಗೆಅಭ್ಯಾಸಶಿಬಿರದಲ್ಲಿ ಥ್ರೋಡೌನ್ (ವಿವಿಧ ಆಯಾಮಗಳ ಬೌಲಿಂಗ್) ಬೌಲರ್ಆಗಿಯೂಕಾರ್ಯನಿರ್ವಹಿಸುವ ಅವಕಾಶವನ್ನು ಪಡೆಯುತ್ತಾರೆ.ಈ ಒಂದುವಿಶೇಷಕಾರಣದಿಂದಾಗಿಯೇರಾಘವೇಂದ್ರರವರುರಾಷ್ಟ್ರೀಯಕ್ರಿಕೆಟ್ಅಕಾಡೆಮಿ(ಎನ್.ಸಿ.ಎ) ವತಿಯಿಂದಚಿನ್ನಸ್ವಾಮಿಕ್ರೀಡಾಂಗಣದಲ್ಲಿ ಭಾರತದ ಹಿರಿಯಆಟಗಾರರಅಭ್ಯಾಸ ಶಿಬಿರಗಳು ನಡೆಯುತ್ತಿದ್ದಾಗಆಗಾಗ ಸಹಾಯಕರಾಗಿ ಹೋಗುವ ಅವಕಾಶವನ್ನು ಪಡೆಯುತ್ತಾರೆ. ಹೀಗೆ ಕನರ್ಾಟಕರಾಜ್ಯಕ್ರಿಕೆಟ್ಅಕಾಡೆಮಿಯಿಂದ ಭಾರತೀಯಕ್ರಿಕೆಟ್ತಂಡಅಥವಾರಣಜಿಆಟಗಾರರಅಭ್ಯಾಸ ಶಿಬಿರಗಳಲ್ಲಿ ನೆಟ್ಸ್ನಲ್ಲಿ ಬೌಲಿಂಗ್ ಮಾಡಲು ಬೌಲರ್ಗಳ ಬೇಡಿಕೆ ಬಂದಾಗಇಫರ್ಾನ್ ಸೇಠ್ರವರುಧೈರ್ಯದಿಂದರಾಘವೇಂದ್ರರವರನ್ನು ಕಳುಹಿಸಿಕೊಡುತ್ತಿದ್ದರು.
ಕ್ರಿಕೆಟ್ಆಟಗಾರನಾಗಬೇಕೆಂಬ ಹಂಬಲದ ಮಧ್ಯೆಯೂ ನೆಟ್ಸ್ನಲ್ಲಿಆಟಗಾರರಿಗೆಕೇವಲ ಥ್ರೋಡೌನ್ ಬೌಲರ್ಆಗಿರದೇತನ್ನ ಬೌಲಿಂಗ್ಗೆಅಭ್ಯಾಸ ನಡೆಸುತ್ತಿದ್ದಆಟಗಾರರೊಂದಿಗೆ ಹಾಗೂ ಇತರಆಟಗಾರರೊಂದಿಗೆಉತ್ತಮ ಬಾಂಧವ್ಯ ಹಾಗೂ ಅವರಕಠಿಣ ಪರಿರ್ಶಮಕ್ಕೆಆಟಗಾರರೇ ಮನಸೋಲುತ್ತಿದ್ದರು.2008ರಲ್ಲಿ ಪೂರ್ಣಕಾಲಿಕವಾಗಿಬೆಂಗಳೂರಿನ ರಾಷ್ಟ್ರೀಯಕ್ರಿಕೆಟ್ಅಕಾಡೆಮಿಯಲ್ಲಿಕರ್ತವ್ಯಕ್ಕೆ ಸೇರ್ಪಡೆಯಾಗುವಾಗಲೇ ಈ ಸಂಸ್ಥೆಯ ಸಹಭಾಗಿತ್ವದಲ್ಲಿ ಬರುವಎಲ್ಲಾಆಟಗಾಗರಿಗೆಆದಾಗಲೇರಾಘವೇಂದ್ರರವರು ಸಹಾಯಕರಾಗಿಕರ್ತವ್ಯ ನಿರ್ವಹಿಸಿದ್ದರು.ಕ್ರಿಕೆಟ್ದೇವರೆಂದೇಕರೆಯಲ್ಪಡುವ ಮಾಸ್ಟರ್ ಬ್ಲಾಸ್ಟರ್ ಸಚಿನ್ತೆಂಡೂಲ್ಕರ್, ಕ್ರಿಕೆಟ್ಗೋಡೆಎಂದೇಖ್ಯಾತರಾದರಾಹುಲ್ದ್ರಾವಿಡ್, ಅಪ್ರತಿಮ ನಾಯಕ ಮಹೇಂದ್ರ ಸಿಂಗ್ ಧೋನಿರವರಂತಹ ದಿಗ್ಗಜರಿಗೆಹಾಗೂ ರಾಷ್ಟ್ರ ಮತ್ತುಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವಹೆಚ್ಚಿನೆಲ್ಲಾಆಟಗಾರರಿಗೆಥ್ರೋಡೌನ್ ಬೌಲಿಂಗ್ ಮಾಡಿದ ಹೆಗ್ಗಳಿಕೆ ರಾಘವೇಂದ್ರದೇವ್ಗಿರವರದು.
ರಾಘವೇಂದ್ರದೇವ್ಗಿರವರ ವಿಶೇಷತೆಗಳು:
ಅಂತರಾಷ್ಟ್ರೀಯ ಮಟ್ಟದಕ್ರಿಕೆಟಿಗನಾಗಬೇಕೆಂಬ ಕನಸು ಕಂಡಿದ್ದರಾಘವೇಂದ್ರರವರು ವಿಧಿಯಕಾರಣದಿಂದಾಗಿಕ್ರಿಕೆಟಿಗನಾಗಲು ಸಾಧ್ಯವಾಗದೇಇದ್ದಾಗತನ್ನಗುರಿಯನ್ನುಅರ್ಧದಲ್ಲಿಕೈಬಿಡದೆಗುರಿಗೆ ಪೂರಕವಾದ ಸಾಧನೆಯನ್ನು ಮಾಡಬೇಕೆಂದು ಪಣತೊಟ್ಟುಭಾರತೀಯತಂಡದಆಟಗಾರರಿಗೆ ಸಹಾಯಕನಾಗಿಕರ್ತವ್ಯ ನಿರ್ವಹಿಸುವುದರೆಡೆಗೆಗಮನ ಹರಿಸುತ್ತಾರೆ.ನೆಟ್ಸ್ನಲ್ಲಿಆಟಗಾರರಿಗೆ ನಿಮಿಷಕ್ಕೆ 6 ರಿಂದ 7 ಬಾಲ್ಗಳನ್ನು ಥ್ರೋಡೌನ್ ಮಾಡುವಈತಗಂಟೆಗೆ ಸುಮಾರು 350 ಬಾಲ್ಗಳನ್ನು ನಿರಂತರವಾಗಿ ಹಾಗೂ ದಿನದಲ್ಲಿಸುಮಾರು1,200 ಬಾಲ್ಗಳನ್ನು ಎಸೆಯುವಷ್ಟುಬದ್ಧತೆಯನ್ನು ಹೊಂದಿದ್ದಾರೆ.ಎಂದೂಆಟಗಾರ ಮುಂದೆ ಸುಸ್ತಾಗಿ ಕೂರದೆತನ್ನ ಲವಲವಿಕೆಯ ಮನೋಭಾವದಿಂದಆಟಗಾರರಿಗೆ ಸದಾಸ್ಪೂತರ್ಿಯ ಸೆಲೆಯಾಗಿರುವಈತಸಚಿನ್ರಷ್ಟೇಅಲ್ಲದೆಇವರಪುತ್ರಅಜರ್ುನ್ರವರಿಗೂಥ್ರೋಡೌನ್ ಮಾಡಿದ ಹೆಗ್ಗಳಿಕೆ ಇವರದು.ಇವರುಆಟಗಾರರುಧಣಿವಾದಾಗ ನೀರು ನೀಡುವುದು, ಆಟಗಾರರನ್ನುಉಪಚರಿಸುವಿಕೆ, ನೆಟ್ ಅಣಿಗೊಳಿಸುವಿಕೆ, ಆಟಗಾರರಿಗೆಅಗತ್ಯವಿರುವಆಟದ ಸಾಮಾಗ್ರಿಗಳ ಪೂರೈಕೆ ಇವೇ ಮೊದಲಾದವೈವಿಧ್ಯಮಯಕೆಲಸಗಳಲ್ಲೂ ಎತ್ತಿದ ಕೈ.ಈತತಂಡಕ್ಕಾಗಿ ಬೌಲಿಂಗ್ಯಂತ್ರದಂತೆದಣಿವಿಲ್ಲದೇ ನಿರಂತರವಾಗಿ ಬೌಲಿಂಗ್ ಮಾಡಬಲ್ಲ, ಜೊತೆಗೆ ಬ್ಯಾಟ್ಸ್ಮನ್ಗಳು ಹೊಡೆತಗಳಲ್ಲಿ ಪರಿಪೂರ್ಣವಾಗುವವರೆಗೂಛಲಬಿಡದತ್ರಿವಿಕ್ರಮನಂತೆಅವರನ್ನುಕಾಡುವಥ್ರೋಡೌನ್ ಬೌಲರ್ಇವರು.ತನಗೆಷ್ಟುದಣಿವಾದರೂಅದನ್ನುಆಟಗಾರರಿಗೆತೋರ್ಪಡಿಸದೆಆಟಗಾರರು ಹೊಡೆತಗಳಲ್ಲಿ ಪಕ್ವವಾಗುವವರೆಗೂ ಬೌಲಿಂಗ್ ಮಾಡುತ್ತಾರೆ.
ರಾಘವೇಂದ್ರರವರವೃತ್ತಿ ಬದುಕಿನಲ್ಲಿಭಾರತಕ್ರಿಕೆಟ್ತಂಡದಆಸ್ಟ್ರೇಲಿಯಾ ಪ್ರವಾಸವುಮಹತ್ವದತಿರುವನ್ನು ಪಡೆಯುತ್ತದೆ.ಇವರಕ್ರೀಡಾ ಸ್ಪೂತರ್ಿ, ಬದ್ಧತೆಹಾಗೂ ಕಠಿಣಪರಿಶ್ರಮಗಳನ್ನು ಗಮನಿಸಿ ಭಾರತೀಯಕ್ರಿಕೆಟ್ ನಿಯಂತ್ರಣ ಮಂಡಳಿಯು ರಘುರವರನ್ನುಭಾರತೀಯಕ್ರಿಕೆಟ್ತಂಡದಜೊತೆಯಲ್ಲಿ ಸಹಾಯಕನಾಗಿ ಕಳುಹಿಸುವ ನಿಧರ್ಾರವನ್ನು ಮಾಡುತ್ತದೆ. ಈ ರೀತಿ ಭಾರತೀಯತಂಡದಜೊತೆಆಸ್ಟ್ರೇಲಿಯಾ ಪ್ರವಾಸ ಮಾಡುವ ಅವಕಾಶ ಪಡೆದರಾಘವೇಂದ್ರರವರಿಗೆಈ ಸಿಹಿ ಸುದ್ದಿ ತಿಳಿಸುವ ಸಲುವಾಗಿಬಿ.ಸಿ.ಸಿ.ಐ ದೂರವಾಣಿಕರೆ ಮಾಡಿದಾಗಇವರು ಸಂಪರ್ಕಕ್ಕೆ ಸಿಗುವುದಿಲ್ಲ. ಆಗ ಇಫರ್ಾನ್ ಸೇಠ್ರವರೇಖುದ್ದಾಗಿರಾಘವೇಂದ್ರರವರನ್ನು ಭೇಟಿಯಾಗಿ ವಿಷಯವನ್ನು ತಿಳಿಸಿದಾಗ ಇವರಮನಸ್ಸುತುಂಬಿ ಧನ್ಯತಾ ಭಾವಕಣ್ಣೀರಿನರೂಪದಲ್ಲಿ ಹರಿದಿತ್ತು.
ರಾಘವೇಂದ್ರರವರುತಂಡದಲ್ಲಿಕೇವಲ ಥ್ರೋಡೌನ್ ಬೌಲರ್ಮಾತ್ರಆಗಿರದೇಆಟಗಾರರಲ್ಲಿಲವಲವಿಕೆ, ಕಳಕಳಿ, ಬದ್ಧತೆಮತ್ತುಉತ್ತಮ ಬಾಂಧವ್ಯವನ್ನುಬೆಸೆಯುವಅಪರೂಪದವ್ಯಕ್ತಿತ್ವ ಹೊಂದಿದ್ದು,ತಂಡದಆಟಗಾರರೂಇವರನ್ನುಬಹಳವಾಗಿ ಆತ್ಮೀಯವಾಗಿಕಾಣುತ್ತಾರೆ.ಈತನಕ್ರಿಕೆಟ್ ಪ್ರೇಮವನ್ನು ಗಮನಿಸಿ ಭಾರತೀಯಕ್ರಿಕೆಟ್ ನಿಯಂತ್ರಣ ಮಂಡಳಿಯು ಭಾರತೀಯತಂಡದ ಮುಖ್ಯದೈಹಿಕತರಬೇತುದಾರರಾಗಿರುವ ಪ್ಯಾಡಿಆಪ್ಟನ್ರಗರಡಿಯಲ್ಲಿಸಹಾಯಕತರಬೇತುದಾರರನ್ನಾಗಿನೇಮಿಸಿದ್ದು, ಇಂದುಇವರುಭಾರತೀಯಕ್ರಿಕೆಟ್ತಂಡದ ಅವಿಭಾಜ್ಯ ಅಂಗವಾಗಿ ಬೆಳೆದಿದ್ದಾರೆ.ಇವರುಹಣದ ವ್ಯಾಮೋಹಕ್ಕೊಳಗಾಗಿ ತನ್ನ ಪ್ರತಿಭೆಯನ್ನು ಎಂದಿಗೂ ಮಾರಾಟ ಮಾಡಿಕೊಂಡವರಲ್ಲ. ಇವರನ್ನುವಿವಿಧ ಐ.ಪಿ.ಎಲ್ ಫ್ರಾಂಚೈಸಿಗಳು ತಮ್ಮತಂಡದ ಮುಖ್ಯಕೋಚ್ ಹುದ್ದೆಯನ್ನುನಿರ್ವಹಿಸುವ ಬೇಡಿಕೆಯನ್ನುಇಟ್ಟಾಗಲೂಅದನ್ನುನಯವಾಗಿ ತಿರಸ್ಕರಿಸಿನಾನು ಭಾರತೀಯಕ್ರಿಕೆಟ್ ನಿಯಂತ್ರಣ ಮಂಡಳಿಯ ಒಬ್ಬ ಸಹಾಯಕತರಬೇತುದಾರನಾಗಿರಲು ಬಯಸುತ್ತೇನೆಯೇ ವಿನಃ ಹಣಕ್ಕಾಗಿಯಾವುದೇ ಐ.ಪಿ.ಎಲ್ ಫ್ರಾಂಚೈಸಿಗಳ ಕೋಚ್ ಆಗಿ ಅಲ್ಲಎನ್ನುವ ಮೂಲಕ ತಮ್ಮಕ್ರೀಡಾಸ್ಪೂತರ್ಿಯನ್ನುಎತ್ತಿ ಹಿಡಿದಿದ್ದಾರೆ.
ಬಡತನದ ಹಿನ್ನೆಲೆಯಿಂದ ಬಂದಂತಹರಾಘವೇಂದ್ರರವರಿಗೆತಂಡದಆಟಗಾರರುಹಲವಾರು ಬಾರಿಸಹಾಯ ಹಸ್ತವನ್ನುಚಾಚಿದ್ದರೂಅವರಲ್ಲಿ ಸಹಾಯವನ್ನುಯಾಚಿಸದೇತಂಡಕ್ಕೆಕರ್ತವ್ಯ ನಿರ್ವಹಿಸುವಲ್ಲಿನಿಮ್ಮ ಸಹಕಾರವೊಂದಿದ್ದರೆ ಸಾಕೆಂದು ಕೇಳಿಕೊಳ್ಳುತ್ತಾರೆ. ಭಾರತೀಯಕ್ರಿಕೆಟ್ತಂಡದಆರಂಭಿಕಆಟಗಾರರಾದ ಶಿಖರ್ ಧವನ್ರವರುಇವರಕುರಿತಂತೆನನಗೆ ರಘುರವರ ಪರಿಚಯ ಮುಂಬೈ ಕ್ರಿಕೆಟ್ ಸಂಸ್ಥೆಯಲ್ಲಿಆಗಿದ್ದು, ಅವರುತಂಡದಪರವಾಗಿಅಭ್ಯಾಸ ಶಿಬಿರಗಳಿಗೆ ಥ್ರೋಡೌನ್ ಬೌಲರ್ ಆಗಿ ಆಗಮಿಸುತ್ತಿದ್ದು ಬ್ಯಾಟ್ಸ್ಮನ್ಗಳು ಬೆಚ್ಚಿಬೀಳಿಸುವ ವಿವಿಧರೀತಿಯ ಎಸೆತಗಳನ್ನು ವಿವಿಧ ಕೋನಗಳಲ್ಲಿ ಎಸೆಯುತ್ತಿದ್ದು ನಿರಂತರವಾಗಿ ಬೌಲಿಂಗ್ ಮಾಡುವ ಮೂಲಕ ನಮ್ಮನ್ನು ಸುಸ್ತಾಗದಂತೆ ನೋಡಿಕೊಳ್ಳುತ್ತಾರೆ. ಬದ್ದತೆಗೆಇನ್ನೋಂದು ಹೆಸರೇರಾಘವೇಂದ್ರಎನ್ನುತ್ತಾರೆ.ಇನ್ನೊಬ್ಬಆರಂಭಿಕಆಟಗಾರರೋಹಿತ್ ಶರ್ಮ ಹೇಳುವಂತೆ ಈತನ ಪರಿಚಯ ಬೆಂಗಳೂರಿನ ರಾಷ್ಟ್ರೀಯಕ್ರಿಕೆಟ್ಅಕಾಡೆಮಿಯಲ್ಲಾಗಿದ್ದುಈತನ ನಿರಂತರ ಬೌಲಿಂಗ್ ಮಾಡುವರೀತಿ ನಮ್ಮನ್ನು ಮತ್ತಷ್ಟು ಮಾನಸಿಕವಾಗಿ ಗಟ್ಟಿಗೊಳಿಸುತ್ತದೆಎಂದು ಹೆಮ್ಮೆಯಿಂದ ಹೇಳುತ್ತಾರೆ.
ಶ್ರೇಷ್ಠ ಕ್ರಿಕೆಟಿಗನಾಗಬೇಕೆಂಬ ಕನಸನ್ನು ಹೊತ್ತರಾಘವೇಂದ್ರರವರಿಗೆಕ್ರಿಕೆಟ್ನ ದಂತಕಥೆಗಳ ಸಾಧನೆಗಳನ್ನು ಮಾಡಲಾಗದಿದ್ದರೂ, ಇತ್ತೀಚಿನ ಹೊಡೆಬಡಿಯದಾಂಡಿಗರ ಸಾಧನೆಯ ಹಿಂದೆ ಎಲೆ ಮರೆಯಕಾಯಿಯಂತೆಎದ್ದುಕಾಣುವುದುರಾಘವೇಂದ್ರದೇವ್ಗಿರವರಪರಿಶ್ರಮಎಂದರೆಅತಿಶಯೋಕ್ತಿಯಾಗಲಾರದು. ಸಚಿನ್ಕ್ರಿಕೆಟ್ನ್ನು ಬಾಲ್ಯದಿಂದಲೇಆಡುತ್ತಾ ಬೆಳೆದು ಸಾಧನೆಯ ಮೂಲಕ ಕ್ರಿಕೆಟ್ನದೇವರುಎಂದು ಕರೆಸಿಕೊಂಡವರು, ರಾಘವೇಂದ್ರರವರುಕ್ರಿಕೆಟ್ನ್ನೇತನ್ನದೇವರಾಗಿ ಸ್ವೀಕರಿಸಿ ಅದರಲ್ಲೇ ಸಾಧನೆಯನ್ನು ಮಾಡಿದವರು.ನಿದ್ದೆಯಲ್ಲಿಕಾಣುವುದುಕನಸಲ್ಲ, ಬದಲಾಗಿ ನಿದ್ದೆಯಿಲ್ಲದಂತೆಮಾಡುವುದೇ ನಿಜವಾದ ಕನಸುಎಂಬ ಅಬ್ದುಲ್ಕಲಾಂರ ಮಾತಿನಂತೆತನ್ನಕನಸನ್ನು ನನಸಾಗಿಸುವ ಸಾಧನೆಯ ಹಾದಿಯಲ್ಲಿಸಾಗುವಾಗ ಎದುರಾಗುವಹಲವಾರುಕಠಿಣ ಸವಾಲುಗಳಿಗೆ ಅಂಜಿಕನಸನ್ನೇ ಕೈ ಬಿಡುವ ಬದಲು ಕನಸಿನ ಪೂರಕಸಾಧನೆಯನ್ನು ಮಾಡುವಲ್ಲಿ ಪ್ರಯತ್ನಿಸಿ ಯಶಸ್ವಿಯಾಗಿರುವ ರಾಘುರವರುಇಂದುತನ್ನಂತೆಯೇ ಸಾಧಿಸ ಹೊರಟಿರುವಅನೇಕ ಯುವಜನತೆಗೆದಾರಿ ದೀಪವಾಗುವ ಮೂಲಕ ವಿಶಿಷ್ಟ ಸಾಧಕರ ಸಾಲಿನಲ್ಲಿಅಗ್ರಮಾನ್ಯರಾಗಿನಿಲ್ಲುತ್ತಾರೆ.
ಲೇಖನ ತಯಾರಿ:ಸಂತೋಷ್ರಾವ್. ಪೆರ್ಮುಡ
ಚಿತ್ರ ಕೃಪೆ:ಅಂತರ್ಜಾಲ

