ಇದು ಗುಜರಾತ್ ರಾಜ್ಯದ ಭಾವ್ನರ್ಗ ಜಿಲ್ಲೆಯ ಕೊಳಿಯಾಕ್ ಗ್ರಾಮದಲ್ಲಿರುವ ಸಮುದ್ರ ಮಧ್ಯ ಸುಮಾರು 1.5 ಕಿಲೋ ಮೀಟರ್ ದೂರದಲ್ಲಿ ನೆಲೆಸಿರುವ ನಿಷ್ಕಲೇಶ್ವರ ದೇವಸ್ಥಾನ.ಇಲ್ಲಿ ಅರಬ್ಬೀ ಸಮುದ್ರವು ಪ್ರತೀ ದಿನ ಬೆಳಗ್ಗೆ ಒಂಬತ್ತುಗಂಟೆಯಿಂದ ಮಧ್ಯಾಹ್ನ ಹನ್ನೆರಡು ಗಂಟೆಯವರೆಗೆ ಭಕ್ತರಿಗೆ ಭಗವಾನ್ ಶ್ರೀ ನಿಷ್ಕಲೇಶ್ವರ ಸ್ವಾಮಿಯ ದರ್ಶನ ಮಾಡಲು ಅವಕಾಶವನ್ನು ನೀಡುವಂತಹ ಒಂದು ವಿಶಿಷ್ಟ ಶಕ್ತಿಯುಳ್ಳ ದೇವಸ್ಥಾನವಾಗಿದೆ.
ಈ ಸ್ಥಳವು ಮಹಾಭಾರತದ ಪಾಂಡವರುತನ್ನದುಷ್ಟ ಸಹೋದರರಾದ ಕೌರವರನ್ನು ಘನಘೋರಯುದ್ದದಲ್ಲಿ ಕೊಂದು ಶಾಂತಿಯನ್ನು ನೆಲೆಸುವಂತೆ ಮಾಡಿದ ನಂತರ ಈ ಸ್ಥಳದಲ್ಲಿ ಐದು ಶಿವಲಿಂಗವನ್ನು ಸ್ಥಾಪಿಸಿ ಶಿವನನ್ನು ಪೂಜಿಸಿದಂತಹ ಸ್ಥಳವಾಗಿದ್ದು,ಇದರಐತಿಹ್ಯವಾಗಿಐದು ಶಿವಲಿಂಗಗಳನ್ನು ಸಾಗರದ ಮಧ್ಯೆ ಪ್ರತಿಷ್ಠಾಪಿಸಲಾಗಿದೆ. ಈ ದೇವಸ್ಥಾನದಇಪ್ಪತ್ತು ಅಡಿ ಎತ್ತರದಧ್ವಜ ಸ್ಥಂಭವು ಸಮುದ್ರದಉಬ್ಬರ, ದೈತ್ಯಾಕಾರದ ಅಲೆಗಳು, ನೆರೆ ಹಾಗೂ ಚಂಡಮಾರುತಗಳಿಂದ ಯಾವುದೇರೀತಿಯ ಹಾನಿಯಾಗದೆ ಇಂದಿಗೂಉತ್ತಮ ಸ್ಥಿತಿಯಲ್ಲಿರುವುದು ಇಲ್ಲಿನ ವಿಶೇಷತೆಯಾಗಿದೆ.ಮದ್ಯಾಹ್ನದಒಂದುಗಂಟೆಯ ನಂತರದಿಂದ ಮಾರನೇ ದಿನ ಬೆಳಗ್ಗೆ ಒಂಬತ್ತುಗಂಟೆಯ ವರೆಗೂಸಮುದ್ರದ ಅಲೆಗಳು ಈ ದೇವಾಲಯದಗೋಪುರದಧ್ವಜದವರೆಗೂ ಏಳುತ್ತದೆ ಹಾಗೂ ದೇವಸ್ಥಾನವು ಭಾಗಶಃ ಮುಳುಗಿದಂತೆ ಕಾಣಿಸುತ್ತದೆ.ಆದ್ದರಿಂದ ಭಕ್ತರಿಗೆ ಈ ಸಮಯದಲ್ಲಿದೇವರದರ್ಶನ ಸಾಧ್ಯವಾಗುವುದಿಲ್ಲ. ಬೆಳಗ್ಗೆ ಹತ್ತುಗಂಟೆಯ ನಂತರ ಸಮುದ್ರದಉಬ್ಬರದಪ್ರಮಾಣದೇವಳದ ಎರಡೂಕಡೆ ನಿಧಾನವಾಗಿ ಇಳಿಯುತ್ತಾ ಬಂದುತನ್ನಭಕ್ತರನ್ನುದೇವಸ್ಥಾನಕ್ಕೆ ಪ್ರಯಾಣಿಸಲು ಅನುವು ಮಾಡಿಕೊಟ್ಟುಭಗನಾನ್ ನಿಷ್ಕಲೇಶ್ವರನಅರ್ಚನೆಗೆ ಅವಕಾಶ ಮಾಡಿಕೊಡುತ್ತದೆ. ಇದೊಂದುಅತ್ಯದ್ಭುತವಾದಭೌಗೋಳಿಕತೆಯಿರುವ ದೇವಸ್ಥಾನವಾಗಿದ್ದು ಬಹುಶಃ ಪ್ರಪಂಚದಲ್ಲೇ ಪ್ರಥಮಎಂದೆನಿಸುತ್ತದೆ.
ಸ್ವಲ್ಪ ಊಹಿಸಿಕೊಳ್ಳಿಸಿ ಈ ದೇವಾಲಯವಿರುವುದು ವಿಲಕ್ಷಣವಾದ ಭೂ ಪ್ರದೇಶದಲ್ಲಿಅಂದರೆ ಸಾಗರದ ಮಧ್ಯದಲ್ಲಿ ಹಿಂದೂಗಳು ತಮ್ಮ ದೇವಾಲಯಗಳನ್ನು ಗಿರಿ ಕಂದಕಗಳಿಂದ ಕೂಡಿದಕಡಿದಾದಎತ್ತರವಾದ ಬೆಟ್ಟಗಳಲ್ಲಿ, ಬಾನಂಚಿಗೆೆ ಮುತ್ತಿಕ್ಕುವಂತಹ ಪರ್ವತ ಶಿಖರ ಪ್ರದೇಶಗಳ ಸೆರಗಿನ ಸೊಬಗಲ್ಲಿ, ಕಗ್ಗತ್ತಲ ಗುಹೆಗಳ ಒಳಭಾಗದಲ್ಲಿ, ಭೋರ್ಗರೆದುಧೋಎಂದುಧುಮ್ಮಿಕ್ಕುವ ಜಲಪಾತಗಳ ತಟದಲ್ಲಿ ಹಾಗೂ ಸುಂದರರಮಣೀಯವಾದ ಪ್ರಕೃತಿಯತೊಟ್ಟಿಲಿನಲ್ಲಿನಿಮರ್ಿಸುವುದು ಸಹಜಆದರೆ ನಾನಿಲ್ಲಿ ಹೇಳ ಹೊರಟಿರುವುದು ನಿಷ್ಕಲೇಶ್ವರ ಮಹಾದೇವದೇವಸ್ಥಾನದಕುರಿತು. ನಿಷ್ಕಲೇಶ್ವರಅಂದರೆ ಪಾಪಹಾರಕಈಶ್ವರ.ಸಾಗರದಅತಿಯಾದ ಉಬ್ಬರವಿಳಿತಗಳ ಮಧ್ಯೆಇರುವ ಈ ನಿಷ್ಕಲೇಶ್ವರನ ಪೂಜೆಯನ್ನು ಮಾಡಿದಲ್ಲಿಇಲ್ಲಿನ ಸಮುದ್ರದ ಅಲೆಗಳು ಎಲ್ಲವನ್ನು ತೊಳೆಯುವಂತೆ ಭಕ್ತರ ಪಾಪವನ್ನು ತೊಳೆಯುವ ದೇವಾಲಯವಾಗಿ ಪ್ರಪಂಚ ವ್ಯಾಪ್ತಿಯಾಗಿ ಪ್ರಸಿದ್ಧವಾಗಿದೆ.
ಅದೇರೀತಿ ಪಾಂಡವರುತನ್ನ ವೈರಿಗಳಾದ ದುಷ್ಟ ಸಹೋದರರನ್ನು ಸಂಹರಿಸಿದ ನಂತರಅವರಿಗೆಅಂಟಿದ ಪಾಪವನ್ನು ತೊಳೆದುಕೊಳ್ಳಲು ಈ ಸ್ಥಳದಲ್ಲಿ ಭಗವಾನ್ ಶಿವನ ಲಿಂಗ ಪ್ರತಿಷ್ಠಾಪನೆಯನ್ನು ಮಾಡಿತಮ್ಮಪಾಪವನ್ನು ಪರಿಹಾರ ಮಾಡಿಕೊಂಡರೆಂಬ ಪ್ರತೀತಿಇದೆ.
ಇನ್ನೊಂದು ಮೂಲಗಳ ಪ್ರಕಾರಐದು ಶಿವಲಿಂಗಗಳನ್ನು ಹಾಗೂ ಶಿವನ ವಾಹನವಾದ ನಂದಿ(ಬಸವ)ಯನ್ನು ಪಂಚ ಪಾಂಡವರು ಈ ಸ್ಥಳದಲ್ಲಿ ಪೂಜಿಸಿದರು ಎಂದು ಹೇಳಲಾಗುತ್ತದೆ. ಹಾಗೂ ಇದು ಪಾಪಹರಣನಾದ ನಿಷ್ಕಲೇಶ್ವರನ ಸ್ಥಳವಾಗಿದ್ದು ಇಲ್ಲಿ ಹಲವಾರು ಮಂದಿ ತಮ್ಮ ಬಂಧುಗಳ ಮತ್ತುತಮ್ಮ ವಂಶಸ್ಥರಚಿತಾ ಭಸ್ಮವನ್ನುತಂದು ಈ ಪುಣ್ಯ ಸ್ಥಳದಲ್ಲಿ ವಿಸರ್ಜನೆಯನ್ನು ಮಾಡುತ್ತಾರೆ. ಪೌರ್ಣಮಿಯಮಾರನೇ ದಿನದಿಂದಇಲ್ಲಿನ ಸಮುದ್ರದಉಬ್ಬರಕ್ರಮೇಣ ಹಂತಹಂತವಾಗಿಕಮ್ಮಿಯಾಗುತ್ತಿದ್ದು ಭಕ್ತರು ಮತ್ತು ಮಕ್ಕಳು ಸಾಲು ಸಾಲಾಗಿ ಬಂದುಇಲ್ಲಿನ ನಿಷ್ಕಲೇಶ್ವರನದರ್ಶನವನ್ನು ಪಡೆದು ಪುನೀತರಾಗುತ್ತಾರೆ.
ಇಲ್ಲಿನ ಸಮುದ್ರದಉಬ್ಬರ ಇಳಿಯುವವರೆಗೆ ಸಮುದ್ರದಡದಲ್ಲಿ ಅನೇಕ ಶಿವ ಭಕ್ತರು ಸಂಕಷ್ಟ ನಿವಾರಕ, ಪಾಪ ವಿನಾಶಕನಾದ ಶಿವನ ಭಕ್ತಿಸ್ತೋತ್ರಗಳನ್ನು, ಭಕ್ತಿ ಗೀತೆಗಳನ್ನು, ಮತ್ತು ಭಜನೆಗಳನ್ನು ಮಾಡುತ್ತಾ ಮರದಿಂದ ಹಾಗೂ ಬಟ್ಟೆಯಿಂದ ಮಾಡಿದಕುಠೀರ ಹಾಗೂ ಮಂಟಪಗಳಲ್ಲಿ ಕುಳಿತು ಶಿವಧ್ಯಾನ ಮಾಡುತ್ತಾ ಕಾಲ ಕಳೆಯುತ್ತಾರೆ.ಸಮುದ್ರದಉಬ್ಬರ ಇಳಿಯುತ್ತಿದ್ದಂತೆಯೇ ಶಿವನನ್ನು ಕಂಡುತಮ್ಮ ಪಾಪಗಳನ್ನು ತೊಳೆದು ಪುನೀತರಾಗಲು ತೆರಳುವ ಭಕ್ತರಉತ್ಸಾಹ ಸಪ್ತ ಸರೋವರಗಳ ಅರ್ಭಟವನ್ನೂ ಮೀರಿಸುವಂತಿರುತ್ತದೆ.ಭಕ್ತರುದೇವಸ್ಥಾವದ ಪೌಳಿಗೆ ಪ್ರವೇಶಿಸುತ್ತಿದ್ದಂತೆ ಪಕ್ಕದಲ್ಲೇಇರುವ ಪಾಂಡವಕೆರೆಯಲ್ಲಿ ಭಕ್ತರುತಮ್ಮ ಪಾದಗಳನ್ನು ತೊಳೆದುಕೊಂಡು ದೇವಳದ ಮುಖ್ಯ ಪ್ರಾಂಗಣವನ್ನು ಪ್ರವೇಶಿಸುತ್ತಾರೆ.
ಸ್ವಾಮಿಯದರ್ಶನ:
ದೇವಸ್ಥಾನವನ್ನು ಪ್ರತೀ ದಿನ ಬೆಳಿಗ್ಗೆ ಒಂಬತ್ತುಗಂಟೆಗೆ ಪ್ರವೇಶಿಸಿ ಮಧ್ಯಾಹ್ನಒಂದು ಗಂಟೆಯೊಳಗಾಗಿ ಅಲ್ಲಿಂದ ವಾಪಸ್ಸು ಬರಬೇಕುಇಲ್ಲವಾದಲ್ಲಿ ಸಮುದ್ರದ ಉಬ್ಬರವಿಳಿತಗಳು ಹೆಚ್ಚಾಗಿ ಅಲ್ಲೇ ಸಿಕ್ಕಿ ಹಾಕಿಕೊಳ್ಳುವ ಅಪಾಯವೂಇದ್ದಿದ್ದಲ್ಲ.ಇಲ್ಲಿನ ಸಮುದ್ರದಉಬ್ಬರದಲ್ಲಿನಏರಿಕೆ ಮತ್ತು ಇಳಿಕೆಗಳು ಅತ್ಯಂತ ಸಾಮಾನ್ಯವಾದ ವಿಚಾರವಾಗಿದೆ. ಈ ಉಬ್ಬರದಅವಧಿ ಹಾಗೂ ಗಾತ್ರವು ಸೂರ್ಯ ಮತುಚಂದ್ರರಗುರುತ್ವಾಕರ್ಷಣ ಸೆಳೆತದ ಮೇಲೆ ನಿರ್ಧಾರವಾಗುತ್ತದೆ. ಹಾಗೂ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಸಮುದ್ರದಅಬ್ಬರವುಅತ್ಯಂತರೌದ್ರಾತಾರವನ್ನು ಹೊಂದಿ ಅಧಿಕವಾಗಿರುತ್ತದೆ.
ಪ್ರಯಾಣದ ನೀಲ ನಕ್ಷೆ:
ಕೋಳಿಯಾಕ್ ಗ್ರಾಮವು ಭಾವನಗರಜಿಲ್ಲೆಯಿಂದ ಸುಮಾರು ಮೂವತ್ತು ಕಿ.ಮೀ ದೂರದಲ್ಲಿದ್ದು ಭಾವನಗರರೈಲ್ವೇ ಸ್ಟೇಷನ್ ನಿಂದ ಸ್ಥಳೀಯ ವಾಹನಗಳ ಮೂಲಕ ಸಾರಿಗೆ ಸೌಲಭ್ಯವಿದೆ. ವರ್ಷದಎಲ್ಲಾ ದಿನಗಳಲ್ಲಿಯೂ ಈ ದೇವಾಲದದರ್ಶನಕ್ಕೆಅವಕಾಶವಿದ್ದು ಸಮುದ್ರದ ಉಬ್ಬರಗಳು ಇಳಿಯುವವರೆಗೂ ಕಾದು ಕೆಲವೇ ಗಂಟೆಗಳಲ್ಲಿ ದರ್ಶನವನ್ನು ಮುಗಿಸಿಕೊಂಡು ಬರಬೇಕಾಗಿದೆ.
ಲೇಖನ ತಯಾರಿ: ಸಂತೋಷ್ರಾವ್. ಪೆರ್ಮುಡ
ಬೆಳ್ತಂಗಡಿ ತಾಲೂಕು ದೂ: 9742884160




