ಉಳ್ಳಾಲ. ಮೇ, 29: ಇತ್ತೀಚಿನ ದಿನಗಳಲ್ಲಿ ವಾಟ್ಸ್ಅಫ್ ದುರ್ಬಳಕೆ ಅಗುತ್ತಿದ್ದು ನಾವು ವಾಟ್ಸ್ಅಫ್ ಗ್ರೂಫ್ ಮಾಡಿ ರಕ್ತದ ಅಗತ್ಯ ಇರುವವರಿಗೆ ರಕ್ತ ನೀಡುವ ಕೆಲಸ ಮಾಡುತ್ತಿದೆವೆ ನಾವು ಬೇರೆ ಬೇರೆ ಕಡೆಗಳಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ಮಾಡುತ್ತಿದ್ದು ಇಂದು ನರಿಂಗಾನ ಗ್ರಾಮ ಪಂಚಾಯತ್ನಲ್ಲಿ ಮಾಡಿದೆವೆ ನಮ್ಮಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಮಂಗಳೂರು ಬ್ಲಡ್ ಡೋನರ್ಸ್ ಅಧ್ಯಕ್ಷ ಸಿದ್ದೀಕ್ ಉರ್ಣಿ  ಹೇಳಿದರು.

blood camp 1

blood camp 2

blood camp 4

blood camp3
ಅವರು ದೇರಳಕಟ್ಟೆ ಯೆನೆಪೋಯ ಅಸ್ಪತ್ರೆ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ನರಿಂಗಾನ ಗ್ರಾಮ ಪಂಚಾಯತ್ ಅಶ್ರಯದಲ್ಲಿ ನರಿಂಗಾನ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆದ ಬಹೃತ್ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಉದ್ಯಮಿ ಡಾ. ಮುನೀರ್ ಬಾವ ಮಾತನಾಡಿ  ದಾನದಲ್ಲಿ ಶ್ರೇಷ್ಠ ದಾನ ರಕ್ತದಾನವಾಗಿದೆ. ಯುವಜನಾಂಗ ರಕ್ತದಾನ ಮಾಡಲು ಮುಂದಾಗಬೇಕು ಎಂದು ಹೇಳಿದರು.
ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್ ಮೀನಾಕೋಡಿ ಮಾತನಾಡಿ ನರಿಂಗಾನ ಗ್ರಾಮ ಪಂಚಾಯತ್ನ ನೂತನ ಆಡಳಿತ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಪೂರ್ಣಗೊಳ್ಳುವ ಈ ದಿನದಂದು ಸಂತೋಷದಿಂದ ರಕ್ತದಾನ ಮಾಡುವ ಮೂಲಕ ಪ್ರಥಮ ವರ್ಷವನ್ನು ಅಚಾರಿಸುತ್ತಿದೆವೆ ಎಂದು ಹೇಳಿದರು. ಈ ಸಂದರ್ಭ ಸಮಜಸೇವಕರಾದ ಹನೀಫ್ ಮುಡಿಪು ಮತ್ತು ನಿಸಾರ್ ದಮಾಮ್ ಉಳ್ಳಾಳ್ರವರನ್ನು ಸನ್ಮಾನಿಸಲಾಯಿತು.
ನರಿಂಗಾನ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನಳಿನಾಕ್ಷಿ, ಸದಸ್ಯರಾದ ಫಯಾಝ್ ಮೋಂಟೆಪದವು, ಅಬುರ್ರಹ್ಮಾನ್, ಮುರಳಿದರ್ ಶೆಟ್ಟಿ ಮೊರ್ಲ, ಅರಫತ್, ಉಮರ್, ಮಾಜಿ ಸದಸ್ಯ ಶೇಕಬ್ಬ, ಸಮಾಜ ಸೇವಕ ಯಾಕೂಬ್ ಪೋಟ್ಟೊಲಿಕೆ, ಮಂಗಳೂರು ಬ್ಲಡ್ ಡೋನರ್ಸ್ನ ಸದಸ್ಯರಾದ ಮುಸ್ತಫ ಕೆ.ಸಿ ರೋಡ್, ಝೂಲ್ಪಿ ಬ್ಯಾರಿ, ನಿಝಾಮ್ ಮಂಕಿಸ್ಟಾಂಡ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.

By suddi9

Leave a Reply

Your email address will not be published. Required fields are marked *