ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಮೇ 8ರಿಂದ ಜೂನ್ 25ರವರೆಗೆ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಉಚಿತ ಯೋಗ ಶಿಕ್ಷಣ ತರಗತಿ ಪ್ರಾರಂಭಗೊಳ್ಳಲಿದೆ.
ರಾಮಕೃಷ್ಣ ತಪೋವನ ಪೊಳಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ  ಹಾಗೂ ರಾಜಶ್ರೀ ಯುವಕ ಮಂಡಲ ಪೊಳಲಿ ಇದರ ಸಹಯೋಗದೊಂದಿಗೆ  ಮೇ 8ರಂದು ಭಾನುವಾರ ಬೆಳಗ್ಗೆ 9.30ಕ್ಕೆ ಉದ್ಘಾಟನೆಗೊಳ್ಳಲಿದೆ.

ಮೇ. 9ರಿಂದ ಸೋಮವಾರ ಬೆಳಗ್ಗೆ 5 ರಿಂದ 6.30ರವರೆಗೆ ಕೇಂದ್ರ ಸಮಿತಿಯಿಂದ ಶಿಕ್ಷಣ ಪಡೆದ ನುರಿತ ಶಿಕ್ಷಕ ವರ್ಗದವರಿಂದ ಅಷ್ಟಾಂಗ ಯೋಗಾಸನ, ಪ್ರಾಣಾಯಾಮ, ಸೂರ್ಯ ನಮಸ್ಕಾರ, ಧ್ಯಾನ, ಶರೀರ ಶುದ್ಧಿಕರಣ ಕ್ರೀಯೆ ಅಗ್ನಿಹೋತ್ರ , ಮುದ್ರೆ, ಅಕ್ಯೂಪ್ರೆಶರ್, ಹಾಗೂ ಯೋಗ ಚಿಕಿತ್ಸಾತ್ಮಕ ಕ್ರೀಯೆಗಳು ಆಯೂರ್ವೇದ ಆಹಾರ ಪದ್ದತಿಗಳು ,ಭಾಷಣ ಕಲೆ, ಭಜನೆ, ಸತ್ಸಂಗಗಳನ್ನು ಸಮಿತಿಯ ವತಿಯಿಂದ ಹಾಗೂ ನಿತ್ಯ ಜೀವನ ಶೈಲಿಯನ್ನು ಮನಮುಟ್ಟುವಂತೆ ಉಚಿತವಾಗಿ ನೀಡಲಿದ್ದಾರೆ.

ಇದರಿಂದ ಪ್ರಯೋಜನಗಳು:
ಉದ್ವೇಗ,ಒತ್ತಡ, ಖಿನ್ನತೆ ಶಮನಕ್ಕಾಗಿ , ಏಕಾಗ್ರತೆ, ನೆನಪಿನ ಶಕ್ತಿಯ ಚುರುಕಿಗೆ, ಸಂದಿವಾತ ದೋಷ, ನಿದ್ರೆಯ ಸಮಸ್ಯೆ, ಆಸಿಡಿಟಿ, ಮೂಲವ್ಯಾಧಿ, ರಕ್ತದ ಒತ್ತಡ, ಉಸಿರಾಟದ ತೊಂದರೆಗಳು, ಸಕ್ಕರೆ ಕಾಯಿಲೆ, ಗಂಟು ನೊವು, ಬೆನ್ನು ನೋವು, ತಲೆನೋವು, ಮೈಗ್ರೇನ್, ಮರೆವು, ಹಾಗೂ ಸ್ತ್ರೀಯರ ಸಮಸ್ಯೆಗಳ ನಿವಾರಣೆ ಈ ಯೋಗ ತರಗತಿಯಲ್ಲಿ 10 ವರ್ಷದಿಂದ 70 ವರ್ಷದವರೆಗಿನ ಪುರುಷರು, ಮಹಿಳೆಯರು ಇದರ ಪ್ರಯೋಜನ ಪಡೆಯ ಬಹುದು ಎಂದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *