ಕೈಕಂಬ:ದಕ್ಷಿಣ ಕನ್ನಡ ಜಿ.ಪ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು(ಗ್ರಾ) ಪ್ರಾಥಮಿಕ ಆರೋಗ್ಯ ಕೇಂದ್ರ ಗಂಜಿಮಠ , ಗ್ರಾಮ ಪಂಚಾಯತ್ ಗಂಜಿಮಠ, ಸ್ತ್ರೀಶಕ್ತಿ ಗೊಂಚಲುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಗುರು ಚಾರಿಟೇಬಲ್ ಟ್ರಸ್ಟ್(ರಿ) ಸುರತ್ಕಲ್ ಇವರ ಸಹಯೋಗದೊಂದಿಗೆ ಎನ್.ಎಸ್.ಎಸ್. ಘಟಕ ನಿಟ್ಟೆ ವಿಶ್ವವಿದ್ಯಾಲಯ, ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಮಂಗಳೂರು, ಎನಪೋಯ ದಂತ ವೈದ್ಯಕೀಯ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಸ್ತ್ರೀಶಕ್ತಿ ಸದಸ್ಯರ ಉಚಿತ ಆರೋಗ್ಯ ತಪಾಸಣೆ ಹಾಗೂ ಬಾಯಿ ಕ್ಯಾನ್ಸರ್ ಮತ್ತು ದಂತ ತಪಾಸಣಾ ಚಿಕಿತ್ಸಾ ಶಿಬಿರ ಜ.8ರಂದು ದ.ಕ.ಜಿ.ಪಂ. ಉರ್ದು ಹಿ.ಪ್ರಾ.ಶಾಲೆ ಗಂಜಿಮಠದಲ್ಲಿ ಗಂಜಿಮಠ ಗ್ರಾ.ಪಂ. ಅಧ್ಯಕ್ಷರಾದ ಮಾಲತಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಬಿ.ಎ. ಮೊಯಿದಿನ್ ಬಾವಾ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು. ಗುರುಪುರ ಕ್ಷೇತ್ರದ ಜಿ.ಪಂ.ಸದಸ್ಯ ಯು.ಪಿ.ಇಬ್ರಾಹಿಂ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ತಾ.ಪಂ.ಸದಸ್ಯರುಗಳಾದ ಸುನೀಲ್ ಜಿ. ಮತ್ತು ನಾಗೇಶ್ ಶೆಟ್ಟಿ, ಮಹಿಳಾ ಮತ್ತು ಮಕ್ಕಳಾ ಅಭಿವೃದ್ದಿ ಇಲಾಖೆಯಿಂದ ಶ್ರೀ ನಟರಾಜ್ ಜಿಲ್ಲಾ ನಿರೂಪಣಾಧಿಕಾರಿಗಳು.ಗಂಜಿಮಠ ಪ್ರಾ.ಆರೋಗ್ಯ ಕೇಂದ್ರದ ವೈದ್ಯದಿಕಾರಿಗಳು ಚೇತನ್ರಾಜ್, ಜಗದೀಶ್ ಗಂಜಿಮಠ ಇವರು ಉಪಸ್ಥಿತರಿದ್ದರು. ಡಾ.ಮುರಳಿಮೋಹನ್ ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇವರು ಬಾಯಿಕ್ಯಾನ್ಸರ್, ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ ಸ್ತ್ರೀರೋಗಗಳ ಬಗ್ಗೆ, ಚರ್ಮದ ಖಾಯಿಲೆ ಹಾಗೂ ಎಲುಬು ಮತ್ತು ಕೀಲು ಸಮಸ್ಯೆಗಳ ಬಗ್ಗೆ ಕೂಲಂಕುಶ ತಪಾಸಣೆ ಮಾಡಿಸರು. ಎನಪೋಯ ದಂತ ವೈದ್ಯಕೀಯ ಆಸ್ಪತ್ರೆ ದೇರಳಕಟ್ಟೆ ವೈದ್ಯಧಿಕಾರಿ ಡಾ. ಇಬ್ರಾನ್ ಪಾ.ಶಾ ಮತ್ತು ತಂಡದ ವೈದ್ಯರಿಂದ ದಂತ ತಪಾಸಣೆ ಹಾಗೂ ಚಿಕಿತ್ಸೆಯನ್ನು ಮಾಡಿದರು. ಸುಮಾರು 250 ಸದಸ್ಯರು ವೈದ್ಯಕೀಯ ತಪಾಸಣೆ ಮಾಡಿಸಿ ಪ್ರಾಯೋಜನ ಪಡೆದರು. ಮೇಲ್ವಿಚಾರಕಿ ಉಷಾ ಡಿ. ಇವರು ಪ್ರಸ್ತಾವನೆಗೈದು ಸ್ವಾಗತಿಸಿದರು. ಮೇಲ್ವಿಚಾರಕಿ ಭಾರತಿ ಕೆ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ಲತಾ ವಂದಿಸಿದರು.
10ವಿಪಿ ತಪಾಸಣಾ ಶಿಬಿರ

