ಪುತ್ತೂರು: ಅಟೋ ರಿಕ್ಷಾ  ಮತ್ತು ಕೆಎಸ್ಸಾರ್ಟಿಸಿ ಬಸ್   ನಡುವೆ ಡಿಕ್ಕಿ ಸಂಭವಿಸಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟ ಹಾಗೂ ಚಾಲಕ ಸಹಿತ ಮೂವರು ಗಾಯ ಗೊಂಡ ಘಟನೆ ಪುತ್ತೂರು ತಾಲೂ ಕಿನ  ಕೌಕ್ರಾಡಿ  ಗ್ರಾಮದ ದಡ್ಡಲಪಳಿಕೆ ಎಂಬಲ್ಲಿ  ಸಂಭವಿಸಿದೆ.
ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಾಯರ್‌ತ್ತಡ್ಕ  ಕಮಲಾಕ್ಷಿ (೪೦) ಮೃತಪಟ್ಟವರು.  ಮ್ರತರ  ಅಣ್ಣ ಚೆನ್ನೇ ಗೌಡ, ಅವರ ಪುತ್ರ ಲತೇಶ್ ಹಾಗೂ ರಿಕ್ಷಾ ಚಾಲಕ ಗಣೇಶ್ ಅವರು ಗಾಯಗೊಂಡಿ ರುವುದಾಗಿ ತಿಳಿದು ಬಂದಿದೆ.
ಹಾಸನದಿಂದ ಧರ್ಮಸ್ಥಳಕ್ಕೆ ಬರು ತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮತ್ತು ಕಾಯರ್‌ತ್ತಡ್ಕದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ಈ ದುರಂತ ಸಂಭವಿಸಿದೆ.  ಘಟನೆಯಲ್ಲಿ ಗಂಭೀರ ಗಾಯ ಗೊಂಡ  ಕಮಲಾಕ್ಷಿ ಅವರನ್ನು ಬಂಟ್ವಾಳದ ತುಂಬೆಯ ಫಾದರ್‌ಮುಲ್ಲಾರ‍್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದರೂ ಆ ವೇಳೆಗಾಗಲೇ ಅವರು ಮೃತಪಟ್ಟರೆಂದು ತಿಳಿದು ಬಂ ದಿದೆ.

By suddi9

Leave a Reply

Your email address will not be published. Required fields are marked *