ಪುತ್ತೂರು: ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮೇಲ್ಛಾವಣಿ ಕುಸಿತ

ಪುತ್ತೂರು: ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮೇಲ್ಛಾವಣಿ ಕುಸಿದು ಬಿದ್ದಿದೆ. ಗಟ್ಟಿ ಇಲ್ಲದ ಪಾಕ್ಕಾಸು ಹಾಗೂ ಯಾವುದೇ ದುರಸ್ಥಿತಿ ಕಾಣದ ಕಾರಣ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಅದೃಷ್ಟವಶಾತ್ ಈ ಘಟನೆ ಮಕ್ಕಳಿದ ಸಮಯದಲ್ಲಿ ಅಂದರೆ ಭಾನುವಾರ ನಡೆದಿದೆ. ಸಮೀಪದಲ್ಲೇ ಪದವಿ ಪೂರ್ವ ವಿಭಾಗದ ಕಟ್ಟಡ ಫೆಬ್ರವರಿ 25 ರಂದು ಉದ್ಘಾಟನೆಗೊಳ್ಳಲು ಸಿದ್ದವಾಗಿರುವ ಸಂದರ್ಭದಲ್ಲೇ ಈ ಘಟನೆ ಸಂಭವಿಸಿದೆ.