ಬಂಟ್ವಾಳ: ಜಿ.ಪಂ.ಅಧ್ಯಕ್ಷ ಕೊರಗಪ್ಪ ನಾಯ್ಕ್ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ  ಶುಕ್ರವಾರ ಸಂಜೆ ಬಿ.ಸಿ.ರೋಡಿನ ಎಸ್ ಜೆ. ಆರ್ ವೈ ಸಭಾಂಗಣದಲ್ಲಿ ನಡೆಯಿತು.  ಈ ಸಂದರ್ಭ ಅಧಿಕಾರಿಗಳನ್ನು ತರಾಟಗೆ ತೆಗೆದುಕೊಂಡ

ಅಧ್ಯಕ್ಷರು ಸರ್ಕಾರದ ವಿವಿಧ ಯೋಜನೆಗಳಡಿ ಮಂಜೂರಾದ ಅನುದಾನದ  ಪೈಕಿ 3.16  ಕೋಟಿ ರುಪಾಯಿ ಹಣ ಖರ್ಚಾಗದೇ ಉಳಿಸಿವ ಮೂಲಕ ಜಿಲ್ಲೆಯಲ್ಲಿ  ಬಂಟ್ವಾಳ ತಾಲೂಕು ದಾಖಲೆ ಮಾಡಿದೆ ಎಂದು ಕೊರಗಪ್ಪ ನಾಯ್ಕ್

ಟೀಕಿಸಿದರು.  ಇನ್ನೂ ಮಳೆಗಾಲ ಆರಂಭವಾಗುತ್ತದೆ.  ಉಳಿಕೆ ಅನುದಾನವನ್ನು ಹೇಗೆ ಖರ್ಚು  ಮಾಡುತ್ತೀರಿ  ಎನ್ನುವುದು ನಿಮಗೆ ಬಿಟ್ಟಿದ್ದು  ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವರದಿ ತಯಾರಿಕೆ  ಕನ್ನಡದಲಿಯೇ ಮಾಡಬೇಕು ಎನ್ನುವ ನಿಯಮ ಇದ್ದರೂ ಯಾಕೆ ಇಂಗ್ಲೀಷ್ನಲ್ಲಿ ಮಾಡುತ್ತೀರಿ ಎಂದು ತಾ.ಪಂ.ಕಾರ್ಯನಿರ್ವಾ ಹಣಾಧಿಕಾರಿ ಸಿಪ್ರಿಯನ್ ಮಿರಾಂಡ ಅವರನ್ನು ತರಾಟೆಗೆ ತೆಗೆದುಕೊಂಡರು.  ವಸತಿ  ಯೋಜನೆಯಲ್ಲಿ  ಬೆರಳೆಣಿಕೆಯ ಫಲಾನುಭವಿಗಳು ಮಾತ್ರ ಇರುತ್ತಾರೆ.  ಅನಗತ್ಯವಾಗಿ ತಿರುಗಾಡುವ ಬದಲು ಅವರನ್ನು ಭೇಟಿಯಾಗಿ ಮನೆ ನಿರ್ಮಿಸಿ ಕೊಡಲು ಪ್ರಯತ್ನ  ಪಡಿ ಎಂದರು.  ಈ ಸಂದರ್ಭ ಪಂಚಾಯತ್ನ ಸಮಸ್ಯೆಯನ್ನು ಹೇಳಿಕೊಂಡಾಗ ಮಧ್ಯ ಪ್ರವೇಶಿಸಿದ ಉಪಕಾರ್ಯದ ರ್ಶಿ  ಉಮೇಶ್. ಎನ್. ಆರ್ ಬಡವರ ಪರವಾಗಿ ಕೆಲಸ ಮಾಡಿ. ಕಥೆಗಳನ್ನು ಹೇಳಿಕೊಂಡು ಕಾಲ ಕಳೆಯ ಬೇಡಿ ಎಂದು ಕಿವಿ ಮಾತು ನುಡಿದರು. ಬಂಟ್ವಾಳ ತಾಲೂಕಿನ ವಿವಿಧ ಗ್ರಾ.ಪಂ ವ್ಯಾಪ್ತಿಯಲ್ಲಿ ಇನ್ನೂ 305 ಶೌಚಾಲಯಗಳು ನಿರ್ಮಾ ಣವಾಗದ ಬಗ್ಗೆ ಅಧ್ಯಕ್ಷರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.   ತಾ.ಪಂ.ಅಧ್ಯಕ್ಷೆ ಲಲಿತಾ ಶಿವಪ್ಪ ನಾಯ್ಕ್, ಉಪಾಧ್ತಕ್ಷ  ಆನಂದ ಶಂಭೂರು,  ಜಿ.ಪಂ.ಅಧಿಕಾರಿ ಮಂಜುಳಾ ಹಾಜರಿದ್ದರು.

By suddi9

Leave a Reply

Your email address will not be published. Required fields are marked *