ಭಕ್ತಿಪೂರ್ವಕವಾಗಿ ರಾಮ ರಾಜ್ಯಕ್ಕೆ ಸಜ್ಜಗೋಣ-ವಿಶ್ವಪ್ರಿಯತೀರ್ಥ ಸ್ವಾಮಿಜಿ
ಮುಂಬಯಿ: ಪ್ರತಿವರ್ಷದಂತೆ ಈ ವರ್ಷವೂ ಆರಂಭವಾಗಿದೆ. ಹೊಸ ವರ್ಷ ಆರಂಭವೇ ಇವತ್ತಾಗಿದೆ. ಯುಗಾದಿಯ ದಿವಸ ಹೊರತು ಜನವರಿ 1 ಅಲ್ಲ. ಕಾರಣ ಶಾಲೆಗಳಿಗಾಗಲಿ, ಬ್ಯಾಂಕ್‍ಗಳಿಗೆ, ಆಡಿಟರ್ಸ್ ಎಲ್ಲರಿಗೂ ವರ್ಷಾರಂಭ ಇದೇ ಸಮಯ. ಆದ್ದರಿಂದ ಆಂಗ್ಲರನ್ನು ಓದಿಸಿದ ನಾವು ಅವರ ಸಂಸ್ಕೃತಿಯನ್ನು ಓಡಿಸಿ ನಮ್ಮ ತನವನ್ನು ಉಳಿಸಿಕೊಳ್ಳುವುದೇ ಈ ಯುಗಾದಿಯ ಸಂದೇಶ ಎಂದು ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮಿಜಿ ತಿಳಿಸಿದರು.
ಉಪನಗರ ಅಂಧೇರಿ ಪಶ್ಚಿಮದ ಇರ್ಲಾ ಅಲ್ಲಿನ ಶ್ರೀ ಅದಮಾರು ಮಠದಲ್ಲಿ 20ನೇ ವಾರ್ಷಿಕ ಉತ್ಸವದ ಆಯೋಜಿಸಲಾದ 2016ನೇ ವಾರ್ಷಿಕ ಶ್ರೀ ರಾಮನವಮಿ ಉತ್ಸವದ ಪೂರ್ವ ಸಿದ್ಧತೆಯಾಗಿಸಿ ಪ್ರಯುಕ್ತ ಇಂದಿಲ್ಲಿ ಶುಕ್ರವಾದ ಸಂಜೆ ರಾಮಾಯಣ ಪ್ರವಚನ ನಡೆಸಿ ಅದಮಾರುಶ್ರೀಗಳು ನುಡಿದರು.

ಹಲಸು, ಮಾವು ಗೇರು ಮೊದÀಲಾದÀ ಫಲಗಳು ಸಿಗುವ ಈ ಸಂದರ್ಭದಲ್ಲಿ ರಾಮಚಂದ್ರನು ಅವತರಿಸಿದ ನಮಗೆ ಪಿತೃಭಕ್ತಿಯೇ ಮೊದಲಾದ ಸದ್ಗುಣಗಳನ್ನು ದಯಾಪಾಲಿಸಲಿ. ರಾಮ ರಾಜ್ಯವನ್ನು ಕೊಡುತ್ತೇವೆ ನಮಗೆ ಮತ ಹಾಕಿ ಎಂದು ಹೇಳುವ ಮಂತ್ರಿಗಳಿಂದ ನಿಜವಾದ ರಾಮರಾಜ್ಯವು ಉದಿಸಲಿ. ಅದಕ್ಕಾಗಿ ರಾಮನನ್ನೇ ಶರಣು ಹೊಂದೋಣ. ಭಾರತೀಯರಲ್ಲಿ ಅಮಂಗಳ ಭಾವನೆ ಸಲ್ಲದು. ರಾಮನವವಿತ ಪರ್ವಕಾಲದಲ್ಲಿ ಭಾಗವತಿಕೆಯ ಸಂದೇಶವನ್ನು ಜೀವನದಲ್ಲಿ ಅಳವಡಿಸಿ ಸಮೃದ್ಧಬಾಳನ್ನು ಬಾಳೋಣ ಎಂದೂ ವಿಶ್ವಪ್ರಿಯತೀರ್ಥ ಸ್ವಾಮಿಜಿ ಭಕ್ತರಿಗೆ ಕರೆಯಿತ್ತರು.
ಪ್ರವಚನ ಕಾರ್ಯಕ್ರಮದ ಮುನ್ನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿಸಲಾಗಿದ್ದು, ವಿಜಯಲಕ್ಷ್ಮೀ ಸುರೇಶ್ ರಾವ್ ನೇತೃತ್ವದಲ್ಲಿ ಗೋಕುಲಕೃಷ್ಣ ಭಜನಾ ಮಂಡಳಿ ಅಂಧೇರಿ ಹಾಗೂ ಗೋಕುಲ ಭಜನಾ ಮಂಡಳಿ ಹರಿಭಜನೆ ನಡೆಸಿದರು. ಶ್ರೀಪಾದರು ಮಠದಲ್ಲಿನ ಶ್ರೀದೇವರಿಗೆ ಪೂಜಾಧಿಗಳನ್ನು ನೆರವೇರಿಸಿ ಆರತಿಗೈದು ನೆರೆದ ಭಕ್ತರಿಗೆ, ಭಜನಾ ಮಂಡಳಿ ಸದಸ್ಯರಿಗೆ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.
ಅದಮಾರು ಮಠ ಮುಂಬಯಿ ಶಾಖೆಯ ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ ಅವರ ಮುಂದಾಳುತ್ವದಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ವಾಸುದೇವ ಉಡುಪ, ಸಾಬಕ್ಕ ಖೇಡ್ಕರ್, ರಾಘವೇಂದ್ರ ಉಡುಪ, ರತ್ನಾ ಆಚಾರ್ಯ, ಸುಧೀರ್ ಆರ್.ಎಲ್.ಭಟ್, ಆರ್.ಎಲ್ ಭಟ್, ಶಿವರಾಮ ನಾಯ್ಕ್, ಹ್ಯಾರಿ ಆರ್.ಸಿಕ್ವೇರಾ ಸೇರಿದಂತೆ ಅನೇಕ ಪುರೋಹಿತರು, ಗಣ್ಯರು ಉಪಸ್ಥಿತರಿದ್ದರು. ಪರೇಲ್ ಶ್ರೀನಿವಾಸ ಭಟ್ ಸ್ವಾಗತಿಸಿದರು. ಅದಮಾರು ಮಠ ಮುಂಬಯಿ ಶಾಖೆಯ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್ ಧನ್ಯವದಿಸಿದರು.
ಎ.10ನೇ ಭಾನುವಾರ ಸಂಜೆ ಅಮಿತಾ ಜತಿನ್ ತಂಡವು ಭರತನಾಟ್ಯ, ಎ.11ನೇ ಸೋಮವಾರ ಸಂಜೆ ವಿದುಷಿ ಚಂದ್ರಿಕಾ ಭಟ್ ಅವರಿಂದ ದೇವರನಾಮ, ಎ.12ನೇ ಮಂಗಳವಾರ ಸಂಜೆ ವಿದುಷಿ ಅರುಣ್‍ದತ್ತಿ ರಾವ್ ಅವರು ಕರ್ನಾಟಕ ಸಂಗೀತ ಪ್ರಸ್ತುತ ಪಡಿಸಲಿದ್ದಾರೆ. ಆ ಪ್ರಯುಕ್ತ ಮಹಾನಗರದಲ್ಲಿನ ಸರ್ವ ಶ್ರೀರಾಮ ಭಕ್ತರು ಬಂಧುಮಿತ್ರರನ್ನೊಳಗೊಂಡು ಆಗಮಿಸಿ ಶ್ರೀರಾಮ ದೇವರ ಅನುಗ್ರಹಕ್ಕೆ ಪಾತ್ರರಾಗಬೇ ಕಾಗಿ ವಿ.ರಾಜೇಶ್ ರಾವ್ ಈ ಮೂಲಕ ವಿನಂತಿಸಿದ್ದಾರೆ.










