ಮುಂಬಯಿ, ಎ.11 : ನಾರಾಯಣಗುರುಗಳು ಜಾತೀಯ ನೆಲೆಯಲ್ಲಿ ಕೆಲಸ ಮಾಡಿದವರಲ್ಲ. ಮಾನವೀಯ ತತ್ವಾದರ್ಶಗಳನ್ನು ಹೊಂದಿದವರು. ಬರವಣಿಗೆ ಮಾನವೀಯ ಪಾಠ ಕಲಿಸಬೇಕು.ಬರವಣಿಗೆಗೆ ಶ್ರದ್ಧೆ ಮತ್ತು ಪೂರ್ವ ಸಿದ್ಧತೆ ಅತ್ಯಗತ್ಯ.ಇಂದಿನ ಈ ವೇದಿಕೆ ಅರ್ಥಪೂರ್ಣವಾಗಿದೆಎಂದು ಸಾಹಿತಿ, ಚಿಂತಕ ರವಿ ರಾ.ಅಂಚನ್ ನುಡಿದರು.ಅವರು ಶನಿವಾರ ಥಾನೆಘಂಟಾಲಿಯ ರೋಟರಿಕ್ಲಬ್ ಸಭಾಭವನದಲ್ಲಿ ಸಾಹಿತಿ ವಿಶುಕುಮಾರ್ ವೇದಿಕೆಯಡಿ ನೂತನವಾಗಿ ಉದ್ಘಾಟನೆಗೊಂಡ ಬಿಲ್ಲವ ಸಾಹಿತ್ಯ ಕಲಾ ವೇದಿಕೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ರವಿ ಅಂಚನ್ ಮಾತನಾಡಿದರು.
ಸಮಾರಂಭದ ಉದ್ಘಾಟಕರಾಗಿ ಆಗಮಿಸಿದ್ದ ಸಾಹಿತಿ, ಸಂಶೋಧಕ ಬಾಬು ಶಿವ ಪೂಜಾರಿ ಮಾತನಾಡಿ ಸಾಹಿತಿಗಳು ಹಾಗೂ ಕಲಾವಿದರನ್ನು ಪ್ರತಿ ವರ್ಷಗುರುತಿಸುವಂತ ಕಾರ್ಯ ಈ ವೇದಿಕೆಯಿಂದ ನಡೆಯಲಿ. ನಾವು ಕೇವಲ ಬಿಲ್ಲವರಾಗಿಯೇ ಉಳಿಯಬಾರದು ಅದಕ್ಕಿಂತ ಮಿಗಿಲಾಗಿ ಬೆಳೆಯಬೇಕು. ನಮ್ಮವರ ಸಾಹಿತ್ಯ ಮತ್ತು ಚರಿತ್ರೆಯ ದಾಖಲೀಕರಣವಾಗಿಲ್ಲ. ಇತಿಹಾಸಕಾರರೂ ದಾಖಲಿಸಿಲ್ಲ. ವಿಶುಕುಮಾರವರನ್ನು ಸಮಾಜಇತಿಹಾಸಕಾರರನ್ನಾಗಿಕಂಡಿಲ್ಲ. ನಮ್ಮಲ್ಲಿ ಸಂಕುಚಿತ ಬಾವನೆ ಸಲ್ಲದುಇಂತಹ ವೇದಿಕೆಗಳು ಇಂದು ಪ್ರಸ್ತುತವಾಗಿವೆ. ಬಿಲ್ಲವ ಸಂಘ ಸಂಸ್ಥೆಗಳು ಈ ವೇದಿಕೆಯ ಸಹಯೋಗದೊಂದಿಗೆ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಬಹುದುಎಂದರು.
ಸಮಾರಂಭದ ಮುಖ್ಯ ಅತಿಥಿ ಹೆಸರಾಂತ ವ್ಯಂಗ್ಯಚಿತ್ರಕಾರ ಮತ್ತು ಲೇಖಕ ಪಂಜು ಗಂಗೊಳ್ಳಿಯವರು ಮಾತನಾಡಿ ಬಿಲ್ಲವ ಸಂಘಟಕರು ಸಾಹಿತ್ಯ ಮತ್ತು ಕಲೆಗಾಗಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ.ಇದೊಂದು ಜಾತಿ ವ್ಯವಸ್ಥೆಗೆ ಹಾಕಿದ ಸವಾಲಾಗಿದೆ.ಈ ಕಾರ್ಯಕ್ರಮವು ಇಪ್ಪತ್ತು- ಮೂವತ್ತು ವರ್ಷಗಳ ಹಿಂದೆಯೇ ನಡೆಯಬೇಕಿತ್ತು. ಇಟ್ಟಿಗೆಯ ಭವನಕಟ್ಟವುದಲ್ಲ, ಅಕ್ಷರದ ಭವನ ಕಟ್ಟಬೇಕು.ಜಾತಿಯೊಂದು ಆಥರ್ಿಕವಾಗಿ ಮುಂದೆ ಬರುವುದು ಮಾತ್ರವಲ್ಲ, ಶೈಕ್ಷಣಿಕವಾಗಿಯೂ ಮುಂದೆ ಬರಬೇಕು. ಶಿಕ್ಷಣ ಹಣಗಳಿಸುವುದಕ್ಕಾಗಿ ಮಾತ್ರವಲ್ಲ, ಅರ್ಥಪೂರ್ಣ ಬದುಕಿಗಾಗಿಎಂದರು.
ಗೌರವ ಅತಿಥಿ ಸಾಹಿತಿ ಶಿಮಂತೂರು ಚಂದ್ರಹಾಸ ಸುವರ್ಣ ಮಾತನಾಡಿ ಬಿಲ್ಲವ ಸಾಹಿತ್ಯ ಕಲಾ ವೇದಿಕೆಯ ಮುಖೇನ ಮುಂಬಯಿ ಬಿಲ್ಲವ ಬರಹಗಾರರನ್ನುಗುರುತಿ ಪ್ರೋತ್ಸಾಹಿಸುವ ಕಾರ್ಯ ನಡೆಯುಂತಾಗಲಿ ಎಂದರು.ಉದ್ಯಮಿ ಪರಮೇಶ್ವರ ಪೂಜಾರಿ ಬಿಜೂರುಇವರು ಮಾತನಾಡುತ್ತಾಇಷ್ಟೊಂದುಜನ ಬಿಲ್ಲವ ಸಾಹಿತಿಗಳನ್ನು ಕಂಡು ನನಗೆ ತುಂಬಾಆಶ್ಚರ್ಯವಾಯಿತು, ನಮ್ಮಉದ್ಯಮದಜೊತೆಜೊತೆಯಲ್ಲಿ ಸಾಹಿತ್ಯವೂ ಬೆಳೆಯಬೇಕು ಅದು ನಮ್ಮ ಸಮಾಜದ ಸ್ಥಿರ ಆಸ್ತಿ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಅಂದಿನ ಸಭೆಯಲ್ಲಿ ಬಿಲ್ಲವ ಜಾಗೃತಿ ಬಳಗದ ಅಧ್ಯಕ್ಷ ಎನ್.ಟಿ.ಪೂಜಾರಿ, ಉಪಾಧ್ಯಕ್ಷ ಪುರುಷೋತ್ತಮ ಕೋಟ್ಯಾನ್, ವಿದ್ಯಾದಾಯಿನಿ ಸಭಾದ ಅಧ್ಯಕ್ಷ ಜೆ.ಎಮ್.ಕೋಟ್ಯಾನ್, ಮಾಜಿ ಅಧ್ಯಕ್ಷ ಕೆ.ಎಮ್.ಕೋಟ್ಯಾನ್, ಉದ್ಯಮಿಎಸ್.ಕೆ. ಪೂಜಾರಿ, ಬಿ.ಜಿ.ರಮೇಶ್, ಸದಾನಂದ ಅಂಚನ್, ಎಲ್.ಬಿ.ಬಂಗೇರ, ಆನಂದ ಎಸ್. ಪೂಜಾರಿ, ಎಸ್.ಕೆ. ಪೂಜಾರಿ, ಉದ್ಯಮಿ ಪ್ರಭಾಕರ ಪೂಜಾರಿ ಆಲೂರು, ಉದಯ ಪೂಜಾರಿ ಕೆಗರ್ಾಲ್, ಗೋರೆಗಾಂ ಕನರ್ಾಟಕ ಸಂಘದ ಮಾಜಿ ಕಾರ್ಯದಶರ್ಿ ಸಚ್ಛೀಂದ್ರ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಮುಂಬಯಿಯ ಬಿಲ್ಲವ ಸಮಾಜದ ಉದಯೋನ್ಮುಖ ಮತ್ತು ಪ್ರತಿಭಾನ್ವಿತ ಲೇಖಕರುಗಳಾದ ಎಂ.ಟಿ.ಪೂಜಾರಿ, ಶಾರದಾ ಎ. ಅಂಚನ್, ಗೋಪಾಲ ತ್ರಾಸಿ, ಅನಿತಾ ಪೂಜಾರಿ ತಾಕೊಡೆ, ಅಶೋಕ ವಳದೂರ್, ಲೀಲಾ ಗಣೇಶ ಕಾರ್ಕಳ, ಹೇಮಾ ಸದಾನಂದ ಅಮೀನ್, ನಾಗರಾಜ ಪೂಜಾರಿ ಅಪ್ಪೇಡಿ, ಮೀರಾ ಪೂಜಾರಿ, ಸುಗುಣ ಬಂಗೇರ, ಗುಲಾಬಿ ಬಾಬು ಪೂಜಾರಿ, ಸುಗಂಧಿ ಶ್ಯಾಮ್ ಹಳೆಯಂಗಡಿ, ಮೀನಾಕ್ಷಿ ಪೂಜಾರಿ, ಮೋಹಿನಿ ಪೂಜಾರಿ, ಸುಮತಿ ಕುಂದರ್, ಈಶ್ವರ್ಕೊಟ್ಯಾನ್, ಪೂಣರ್ಿಮಾ ಅಮೀನ್, ಪ್ರೇಮಾ ಕೆ. ಪೂಜಾರಿ, ರಂಗಎಸ್. ಪೂಜಾರಿ, ಸಿ.ಎ.ಪೂಜಾರಿ ಮುಂತಾದವರು ತಮ್ಮಕಥೆ, ಕವಿತೆ, ಲೇಖನಗಳನ್ನು ವೇದಿಕೆಯಲ್ಲಿ ವಾಚಿಸಿದರು.
ವೇದಿಕೆಯ ಸಂಘಟಕರಲ್ಲಿಒಬ್ಬರಾದ ಸಿ.ಎ.ಪೂಜಾರಿಯವರು ಗೋಳಿಗರಡಿ ಯಕ್ಷಗಾನ ಮೇಳದ ಸಂಸ್ಥಾಪಕ ಭಾಗವತಅಣ್ಣಯ್ಯ ಪೂಜಾರಿ ಮತ್ತು ಸಾಹಿತಿ ವಿಶುಕುಮಾರ್ಅವರಿಗೆಗೌರವ ಸೂಚಕ ಮಾತುಗಳನ್ನಾಡಿ ಪ್ರಸ್ತಾವನೆಗೈದರು. ಕಾರ್ಯಕ್ರಮವನ್ನು ಸಿ.ಎ.ಪೂಜಾರಿ, ಗುಲಾಬಿ ಬಾಬು ಪೂಜಾರಿ, ರಂಗ ಎಸ್.ಪೂಜಾರಿ, ಸುಧಾಕರ ಸಿ. ಪೂಜಾರಿ, ನಾಗರಾಜ ಪೂಜಾರಿ ಅಪ್ಪೇಡಿ ಮುಂತಾದವರು ಸಂಯೋಜಿಸಿದ್ದರು.
ಸಭಾಕಾರ್ಯಕ್ರಮದ ಮೊದಲು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಂಕಿತಾ ನಾಯ್ಕ್, ಪ್ರಥ್ವಿ ಸುಧಾಕರ ಪೂಜಾರಿ, ರೇಷ್ಮಾ, ಪ್ರೇಮಾ ಕೆ.ಪೂಜಾರಿ ಮತ್ತುತಂಡ, ಶಿಲ್ಪಾ ಪೂಜಾರಿ, ಸುರೇಖಾ ಪೂಜಾರಿ, ಪೂಣರ್ಿಮಾ ಅಮಿನ್ ಭಾಗವಹಿಸಿದ್ದರು. ಲೇಖಕಿ ಅನಿತಾ ಪೂಜಾರಿ ತಾಕೊಡೆ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಗೈದರು. ಸಾಹಿತ್ಯ ಕಾರ್ಯಕ್ರಮವನ್ನು ಲೇಖಕ ಗೋಪಾಲ ತ್ರಾಸಿ ಮತ್ತು ಸಭಾ ಕಾರ್ಯಕ್ರಮವನ್ನು ರಂಗಕಮರ್ಿ ಸಾ. ದಯಾ ನಿರೂಪಿಸಿದರು. ಸುಧಾಕರ ಸಿ.ಪೂಜಾರಿ ಧನ್ಯವಾದಗೈದರು.



