ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲೂ ್ಯ.ಡಿ’ಸೋಜಾ-ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ ಪುನರಾಯ್ಕೆ
ಮುಂಬಯಿ: ಕರ್ನಾಟಕ ರಾಜ್ಯದ ಕರಾವಳಿ ಮೂಲದ ರೋಮನ್ ಕಾಥೋಲಿಕ್ ಕ್ರೈಸ್ತ ಸಮೂದಾಯದ ಮುಂದಾಳುಗಳು ಸುಮಾರು 100 ವರ್ಷಗಳ ಹಿಂದೆ ದಿ. ಮೆಂಗ್ಳೂರಿಯ ಕಥೋಲಿಕ್ ಕೋ.ಆಪರೇಟಿವ್ ಕ್ರೆಡಿಟ್
ಸೊಸೈಟಿ ನಿಯಮಿತ ಎಂದಾಗಿಸಿ ಸ್ಥಾಪಿಸಿ ಪ್ರಸ್ತುತ ಮೊಡೇಲ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಎಂದು ನಾಮಕರಿಸಲ್ಪಟ್ಟ ಪ್ರಸ್ತುತ ಮೊಡೇಲ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನಾಮಾಂಕಿತ ಮೊಡೇಲ್
ಬ್ಯಾಂಕ್‍ನ ನೂತನ ಕಾರ್ಯಾಧ್ಯಕ್ಷರಾಗಿ ಆಲ್ಬರ್ಟ್ ಡಬ್ಲೂ ್ಯ.ಡಿ’ಸೋಜಾ ಪಾಂಗ್ಳಾ ಪುನರಾಯ್ಕೆ ಆಗಿದ್ದಾರೆ. ಇತ್ತೀಚೆಗೆ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಉಪ ಕಾರ್ಯಾಧ್ಯಕ್ಷರಾಗಿ ವಿಲಿಯಂ ಜೆ.ಸಿಕ್ವೇರಾ ಮುಲುಂಡ್, ನಿರ್ದೇಶಕರಾಗಿ ವಿನ್ಸೆಂಟ್ ಮಥಾಯಸ್, ಶ್ರೀಮತಿ ಬೆನೆಡಿಕ್ಟಾ ರೆಬೆಲ್ಲೋ, ಶ್ರೀಮತಿ ಮಾರಿಟಾ ಡಿ’ಮೆಲ್ಲೋ, ಅಬ್ರಹಾಂ ಕ್ಲೇಮೆಂಟ್ ಲೊಬೋ, ತೋಮಸ್ ಡಿ.ಲೋಬೊ, ಪೌಲ್ ನಝರೆತ್, ಸಂಜಯ್ ಶಿಂಧೆ, ನ್ಯಾ| ಪಿಯುಸ್ ವಾಸ್, ಲಾರೇನ್ಸ್ ಡಿ’ಸೋಜಾ ಮುಲುಂಡ್, ಜೆರಾಲ್ಡ್ ಕರ್ಡೋಜಾ, ಆ್ಯನ್ಸಿ ಎಸ್.ಡಿ’ಸೋಜಾ ಹಾಗೂ ರೋನಾಲ್ಡ್ ಹೆಚ್.ಮೆಂಡೋನ್ಸಾ, ಜೋರ್ಜ್ ಕಾಸ್ತೇಲಿನೋ (ಸಹ ನಿರ್ದೇಶಕರು), ಅವರನ್ನು ಆಯ್ಕೆಗೊಳಿಸಲಾಗಿದೆ.

Untitled-1 copyಬ್ಯಾಂಕ್‍ನ ಸ್ಥಾಪಕಾಧ್ಯಕ್ಷ ಜೋನ್ ಡಿ’ಸಿಲ್ವಾ ಅವರ ದಕ್ಷ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಬ್ಯಾಂಕ್ ಶತಮಾನೋತ್ಸ ಸಂಭ್ರಮದ ಸಮಾಪ್ತಿಯಲ್ಲಿದ್ದು ದ್ವಿಶತಕದತ್ತ ದಾಪು ಕಾಲಿರಿಸುತ್ತಿದೆ. ಬ್ಯಾಂಕ್‍ನ ಮಹಾ ಪ್ರಬಂಧಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ವಿಲಿಯಂ ಎಲ್.ಡಿ’ಸೋಜಾ ಹಾಗೂ ಹೆಚ್ಚುವರಿ ಪ್ರಧಾನ ಪ್ರಬಂಧಕ ಹರೋಲ್ಡ್ ಎಂ.ಸೆರಾವೋ ಸೇವಾ ನಿರತರಾಗಿದ್ದಾರೆ. ದಿ.ಮಹಾರಾಷ್ಟ್ರ ಸ್ಟೇಟ್ ಕೋ.ಅಪರೇಟಿವ್ ಬ್ಯಾಂಕ್’ಸ್ ಅಸೋಸಿಯೇಶನ್ ಲಿಮಿಟೆಡ್ ಮುಂಬಯಿ ಇದರ 2014-2015ರ ಹಣಕಾಸು ಸಾಲಿನಲ್ಲಿ 2014-2015ರ ಹಣಕಾಸು ಸಾಲಿನ ರೂಪಾಯಿ 1,500 ಮೊತ್ತದೊಳಗಿನ ಠೇವಣಿ ಹೊಂದಿದ ಸಹಕಾರಿ ಬ್ಯಾಂಕುಗಳಲ್ಲಿ ಮೊಡೇಲ್ ಬ್ಯಾಂಕ್ `ಉತ್ಕೃಷ್ಟಬ್ಯಾಂಕ್’ ಆಗಿ ಪ್ರಪ್ರಥಮ ಸ್ಥಾನಕ್ಕೆ ಭಾಜನವಾಗಿದ್ದು, 2015ರ ಆಗಸ್ಟ್‍ನಲ್ಲಿ ದಿ.ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್’ಸ್ ಅಸೋಸಿಯೇಶನ್ ಲಿಮಿಟೆಡ್ ಮುಂಬಯಿ ಸಂಸ್ಥೆಯು ತೃತೀಯ ಸ್ಥಾನದೊಂದಿಗೆ `ಶ್ರೇಷ್ಠ ಬ್ಯಾಂಕ್’ ಪುರಸ್ಕಾರ ಪ್ರದಾನಿಸಿ ಗೌರವಿಸಿತ್ತು. ಶತಮಾನದ ಸೇವೆ ಶ್ರೇಷ್ಠತೆ ತೋರುವ ಸಾಧನೆಈ ಬ್ಯಾಂಕ್ ಸಾಧಿಸಿದ್ದು, ಸಾರ್ವಜನಿಕಸೇವೆಯಲ್ಲಿ ವಿಶ್ವಾಸ ಬೆಳೆಸಿಮುನ್ನಡೆದು ಇದೀಗ ಶತಮಾನದ ಸೇವೆ ಫಲಪ್ರದವಾಗಿ ಪೂರೈಸಿದೆ. ಇದೇ ಎ.26ನೇ ಮಂಗಳವಾರ ಕಲೀನಾದಲ್ಲಿ ಬ್ಯಾಂಕ್ ಶತಮಾನೋತ್ಸ ಸಂಭ್ರಮದ ಸಮಾರೋಪ ಸಮಾರಂಭ ಆಯೋಜಿಸಿದೆ. ಉಜ್ವಲ ಭವಿಷ್ಯದೊಂದಿಗೆ ದ್ವಿಶತಕದತ್ತ ದಾಪು ಕಾಲಿರಿಸುತ್ತಿರುವ ಬ್ಯಾಂಕ್‍ನ ಸರ್ವೋನ್ನತಿಗೆ ಬ್ಯಾಂಕ್ ಸಂಸ್ಥಾಪಕರ ದುರದೃಷ್ಠಿತ್ವ, ಷೇಋದಾರರು ಮತ್ತು ಅಪಾರ ಗ್ರಾಹಕರು ಹಾಗೂ ಹಿತೈಷಿಗಳ ಸಹಯೋಗವೇ ಕಾರಣ ಎಂದು ಕಾರ್ಯಾಧ್ಯಕ್ಷ ಆಲ್ಬರ್ಟ್ ಡಿ’ಸೋಜಾ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *