ಮುಂಬಯಿ: ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ (ಬಿಸಿಸಿಐ)ನ ನಿಯೋಗವು ಇಂದಿಲ್ಲಿ ಬುಧವಾರ ಪೂರ್ವಾಹ್ನ ಮಹಾನಗರದ ಮಲಬಾರ್‍ಹಿಲ್ ಅಲ್ಲಿನ ರಾಜಭವನಕ್ಕೆ ಭೇಟಿ ನೀಡಿ
ರಾಜ್ಯಪಾಲ ಸಿ.ಹೆಚ್ ವಿದ್ಯಾಸಾಗರ್ ರಾವ್ ಅವರನ್ನು ಭೇಟಿ ನೀಡಿತು.

Billawa CCI @ Governor Raj Bhavan -A1

Billawa CCI @ Governor Raj Bhavan-B2ಬಿಸಿಸಿಐ ಕಾರ್ಯಾಧ್ಯಕ್ಷ ಹಾಗೂ ಬಿಲ್ಲವ ಜಾಗೃತಿ ಬಳಗ ಮುಂಬಯಿ ಅಧ್ಯಕ್ಷ ಎನ್.ಟಿ ಪೂಜಾರಿ ನೇತೃತ್ವದಲ್ಲಿ ರಾಜಭವನದ ರಾಜ್ಯಪಾಲರ ಅಧಿಕೃತ ಕಾರ್ಯಾಲಯ ಜಲ್ ಭೂಷಣ್‍ನ ಸಭಾಗೃಹದಲ್ಲಿಭೇಟಿಗೈದು ಬಿಲ್ಲವ ಸಮುದಾಯದ ಯುವ ಉದ್ಯಮಿಗಳು ಅಸ್ತಿತ್ವಕ್ಕೆ ತಂದಿರುವ ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ಸಂಸ್ಥೆಯನ್ನು 2016ರ ಜೂನ್.11ರ ಶನಿವಾರ ಬೃಹನ್ಮುಂಬಯಿಯಲ್ಲಿ ಆಯೋಜಿಸಲಾದ ಬಿಸಿಸಿಐ ಸಂಸ್ಥೆಯನ್ನು ಉದ್ಘಾಟಿಸುವಂತೆ ಆಹ್ವಾನಿಸಿದರು. ಸಂದರ್ಭದಲ್ಲಿ ಬಿಸಿಸಿಐನ ಕಾರ್ಯದರ್ಶಿ ನ್ಯಾಯವಾದಿ ಆನಂದ್ ಪೂಜಾರಿ, ನಿರ್ದೇಶಕಪುರುಷೋತ್ತಮ ಎಸ್.ಕೋಟ್ಯಾನ್, ಕಾರ್ಯನಿರ್ವಾಹಕ ಕಾರ್ಯದರ್ಶಿ ಭಾಸ್ಕರ್ ಕರ್ನಿರೆಮತ್ತು ಯುವ ನೇತಾರ ನಿರಂಜನ ಶೆಟ್ಟಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *