ಮುಂಬೈ ಭಯೋತ್ಪಾದನೆ ದಾಳಿಯ ಪ್ರಮುಖ ಆರೋಪಿ ಹಫೀಜ್ ಸಯೀದ್ ಭಾರತದ ವಿರುದ್ಧ ಮತ್ತೊಮ್ಮೆ ವಿಷ ಕಾರಿದ್ದಾನೆ. ಪಾಕಿಸ್ತಾನ ಪರಮಾಣು ಪರೀಕ್ಷೆಯ 16ನೇ ವಾರ್ಷಿಕೋತ್ಸವ ಅಂಗವಾಗಿ ರ‌್ಯಾಲಿ ಹಮ್ಮಿಕೊಂಡ ಹಫೀಜ್, ಭಾರತ ಆಕ್ರಮಿತ ಕಾಶ್ಮೀರವನ್ನು ಬಿಡಿಸಿಕೊಳ್ಳಲು ಭಾರತದ ವಿರುದ್ದ ಜಿಹಾದ್ ನಡೆಸುವುದಕ್ಕೆ ಈಗ ಕಾಲ ಕೂಡಿ ಬಂದಿದೆ.

ಕಾಶ್ಮೀರಿ ಸೋದರರು ಮತ್ತು ಸೋದರಿಯರಿಗೆ ನೆರವಾಗಲು ನೀವೆಲ್ಲರೂ ನೆರವಾಗಬೇಕು ಎಂದು ಹೇಳಿದಾಗ ಜನರೆಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದರು.
ಇಂತಹ ಪ್ರಚೋದನಾಕಾರಿ ಭಾಷಣ ಆಲಿಸುತ್ತಿದ್ದ ಸುಮಾರು 10,000 ಜನರಿದ್ದ ಗುಂಪು ನಾನು ನಿಮ್ಮ ಜೊತೆಯಿದ್ದೇವೆ ಎಂದು ಕೂಗಿದರು.
ನವಾಜ್ ಷರೀಫ್ ಅವರನ್ನು ತರಾಟೆಗೆ ತೆಗೆದುಕೊಂಡ ಅವನು, ಮೋದಿಯ ಪ್ರತಿಜ್ಞಾ ವಿಧಿಯಲ್ಲಿ ಭಾಗವಹಿಸುವ ಮೂಲಕ ಕಾಶ್ಮೀರಿ ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ. ಕಾಶ್ಮೀರದ ಜನರು ಅವರನ್ನು ಕ್ಷಮಿಸುವುದಿಲ್ಲ ಎಂದು ಹಫೀಜ್ ಹೇಳಿದ.
