ಬಂಟ್ವಾಳ: ಇಲ್ಲಿನ ಫರಂಗಿಪೇಟೆಯ ಅಲ್ ಮಿಸ್ಬಾಹ್ ಫೌಂಡೇಶನ್ ಮತ್ತು ಮುಹಿಯುದ್ದೀನ್ ಜುಮ್ಮಾ ಮಸೀದಿಯ ಆಶ್ರಯದಲ್ಲಿ 10 ಜೋಡಿಯ ಸಾಮೂಹಿಕ ವಿವಾಹ ಕಾರ್ಯಕ್ರಮ ಮೇ.25 ಭಾನುವಾರ ದಂದು ಬೆಳಿಗ್ಗೆ ಫರಂಗಿಪೇಟೆಯ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಮುಂಭಾಗದಲ್ಲಿ ನಡೆಯಲಿದೆ.
ಅಲ್ ಹಾಜ್ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ದುವಾ ಮತ್ತು ಉದ್ಘಾಟನೆ ನೆರವೇರಿಸುವರು. ಮುಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಎಫ್.ಮುಹಮ್ಮದ್ ಬಾವಾ ಅಧ್ಯಕ್ಷತೆ ವಹಿಸುವರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ.ಖಾದರ್, ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಶಾಸಕ ಮೊದೀನ್ ಬಾವ, ಮೂಡ ಆಯುಕ್ತ ಮುಹಮ್ಮದ್ ನಝೀರ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ. ರಶೀದ್, ಅಲ್ವಫಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಮುಹಮ್ಮದ್ ಬದ್ರುದ್ದೀನ್, ಅಲಂಕಾರ್ ಬೀಡಿ ಮಾಲಕ ಎ.ಯೂಸುಫ್, ಟಿ.ಕೆ. ಎಂಟರ್ಪ್ರೈಸಸ್ ಮಾಲಕ ಎಫ್.ಎಂ.ಬಶೀರ್, ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್, ತಾ.ಪಂ, ಸದಸ್ಯ ಆಸೀಫ್ ಇಕ್ಬಾಲ್ ಮತ್ತಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಣ್ಣೂರು ಮುದರ್ರಿಸ್ನ ಸೈಯ್ಯದ್ ಮಹಮ್ಮದ್ ಅಶ್ರಫ್ ಸಖಾಫ್ ಮದನಿ ಅದೂರು ತಂಙಳ್, ಶೈಖುನಾ ಸೈಯ್ಯದ್ ಮಹಮ್ಮದ್ ಜಿಫ್ರಿ ಮತ್ತುಕೋಯಾ ತಂಙಳ್, ಸಮಸ್ತ ಕೇಂದ್ರ ಮುಶಾವರದ ಸದಸ್ಯ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್, ವಳವೂರು ಜುಮ್ಮಾ ಮಸೀದಿಯ ಮುದರ್ರಿಸ್ ಮಹಮ್ಮದ್ ಸಅದಿ, ಫರಂಗಿಪೇಟೆ ಜುಮ್ಮಾ ಮಸೀದಿಯ ಮುದರ್ರಿಸ್ ಉಸ್ಮಾನ್ ದಾರಿಮಿ ಮತ್ತಿತರ ಪ್ರಮುಖರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *