ಸುದ್ದಿ9 ಕೈಕಂಬ
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಎರಡನೇ ಬಾರಿ ಸ್ಪರ್ಧಿಸಿ ಪ್ರಚಂಡ ಬಹುಮತದಿಂದ ವಿಜಯಗಳಿಸಿ ಶನಿವಾರ ಬೆಳಗ್ಗೆ ಪೊಳಲಿಗೆ ಬಂದ ನಳಿನ್ ಕುಮಾರ್ ಅವರನ್ನು ಪೊಳಲಿಯ ಕಾರ್ಯಕರ್ತರು ಸ್ವಾಗತಿಸಿ ಕ್ಷೇತ್ರಕ್ಕೆಬರಮಾಡಿ ಕೊಂಡರು.
ನಂತರ ಶ್ರೀ ರಾಜರಾಜೇಶ್ವರೀ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಕಾರ್ಯಕರರ್ತರಿಗೆ ಅಭಿನಂದನೆ ಸಲ್ಲಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಾಧ್ಯಮಗಳೊಂದಿಗೆ ಮಾತಾಡಿದ ನಳಿನ್ ಕುಮಾರ್ ಕಟೀಲ್, ಇದು ನನ್ನ ಗೆಲುವಲ್ಲ ಕಾರ್ಯಕರ್ತರ ಗೆಲುವು. ನನ್ನ ಮೇಲೆ ಪ್ರೀತಿ ವಿಶ್ವಾಸ ಇಟ್ಟು ಗೆಲ್ಲಿಸಿದ ಮತದಾರರ ಋಣವನ್ನು ತೀರಿಸಲು ನನ್ನ ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು. ನಂತರ ಮಾತಾಡಿದ ಮತ್ತೋರ್ವ ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪಾಡಿಗುತ್ತು, ನಾವು ಬಂಟ್ವಾಳದಲ್ಲಿ ಆಯೋಜಿಸಿದ ಗ್ರಾಮದೆಡೆಗೆ ಬಿಜೆಪಿ ನಡಿಗೆ ಫಲ ಕೊಟ್ಟಿದೆ. ಕಾರ್ಯಕರ್ತರು ಫಲಾಪೇಕ್ಷೆ ಇಲ್ಲದೆ ದುಡಿದಿದ್ದರು. ಮೋದಿ ಅಲೆಯೂ ಅಷ್ಟೇ ಪ್ರಭಾವಶಾಲಿಯಾಗಿ ಕೆಲಸ ಮಾಡಿದೆ. ನಳಿನ್ ಕುಮಾರ್ ಅಭಿವೃದ್ಧಿಯ ದೃಷ್ಟಿಯಲ್ಲಿ ಜನತೆ ಮತ ನೀಡಿದ್ದಾರೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಪದ್ಮನಾಭ ಕೊಟ್ಟಾರಿ, ಗಣೇಶ್ ಕಾರ್ಣೀಕ್ ,ರಾಜೇಶ್ ನಾಕ್ ,ವೆಂಕಟೇಶ್ ನಾವಡ, ಸಂಪತ್ ಕುಮಾರ್ ಶೆಟ್ಟಿ, ಜಯರಾಮ ಕ್ರಷ್ಣ , ಪವನ್, ಯಶವಂತ ಕಲ್ಕುಡ, ಯಶೋದರ ಕೆ., ನರೇಶ್, ಸುರೇಂದ್ರ, ಸುನೀಲ್ ಕಲ್ಕುಡ, ನಾಗೇಶ್ ಮಾಯ, ನವೀನ್ , ಗೋಪಾಲ್ ಕರಿಯಂಗಳ, ಸುಖೇಶ್ ಚೌಟ , ರೋಶನ್ ಪಲ್ಲಿಪಾಡಿ, ರುಕ್ಮಯಉಳಿಯ , ಕ್ರಷ್ಣ ಪೊಣ್ನೆಲ ಮಹಮ್ಮದ್ ಸಾದಿಕ್ ಅಡ್ಡೂರು ಮತ್ತಿತರರು ಉಪಸ್ಥಿತರಿದ್ದರು.



