ಬಂಟ್ವಾಳ: ಕಲ್ಲಡ್ಕದಲ್ಲಿ ಜುಗಾರಿ ಆಟದಲ್ಲಿ ನಿರತರಾಗಿದ್ದ ನಾಲ್ಕು ಜನರನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ ಘಟನೆ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಖಚಿತ ಮಾಹಿತಿಯ ಮೇಲೆ ದಾಳಿ ನಡೆಸಿದ ನಗರ ಠಾಣಾ ಪೋಲಿಸರು ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಅಮ್ಟೂರು ಗ್ರಾಮದ ಜಾರಕೋಡಿಯ ಸೇತುವೆಯ ಅಡಿಯಲ್ಲಿ ಜುಗಾರಿ ಆಟದಲ್ಲಿ ನಿರತರಾಗಿದ್ದ ಮೆಹಬೂಬ, ಪಿ.ಜೆ.ಹುಸೈನ್, ಮಹಮ್ಮದ್ ಹಾರೀಶ್ ಮತ್ತು ಶೇಖಬ್ಬ ಎಂಬವರನ್ನು ಬಂಧಿಸಿ ಹನ್ನೋಂದು ಸಾವಿರದ ಇಪ್ಪತ್ತು (11020) ರೂ ನಗದು ಮತ್ತು ಎರಡು ಮೋಟಾರ್ ಬೈಕನ್ನು ವಶಪಡಿಸಿಕೊಂಡು ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.
ವೃತ್ತ ನಿರೀಕ್ಷಕ ಮಂಜಯ್ಯ ಅವರ ಮಾರ್ಗದರ್ಶನದಂತೆ ಬಂಟ್ವಾಳ ನಗರ ಠಾಣಾ ಉಪನೀರಿಕ್ಷಕ ನಂದಕುಮಾರ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಕಾರ್ಯಚರಣೆಯಲ್ಲಿ ಚಾಲಕ ಸಂಪತ್, ಸಿಬ್ಬಂದಿಗಳಾದ ಕರೀಂ, ರಾಜು, ದರ್ಮಪಾಲ, ಕೃಷ್ಣ, ರಾಜೇಶ್, ಗಂಗಾದರ, ಸುಬ್ರಹ್ಮಣ್ಯ, ವಿನೋದ್ ಮತ್ತು ಸುಬ್ರಾಯ ಅವರು ಪಾಲ್ಗೋಂಡಿದ್ದರು

By suddi9

Leave a Reply

Your email address will not be published. Required fields are marked *