ಕಿನ್ನಿಗೋಳಿ: ಇಲ್ಲಿಗೆ ಸಮೀಪದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಸೋಮವಾರ ಪ್ರಾರಂಭಗೊಂಡಿತು.ಶ್ರೀದೇವಿಯ ಸನ್ನಿಧಿಯಲ್ಲಿ ಕಲಶಾಭಿಷೇಕ, ಅಲಂಕಾರ ಪೂಜೆ, ಚಂಡಿಕಾಯಾಗ, ಶ್ರೀದೇವಿ ದರ್ಶನ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು.


ರಾತ್ರಿ ಜಾರಂದಾಯ ದೈವದ ಹಾಗೂ ಶ್ರೀದೇವರ ಭೇಟಿ, ಬಲಿ, ಬಳಿಕ ನೋಮೋತ್ಸವ ಜರಗಿತು. ದೇವಳದ ಮೊಕ್ತೇಸರ ಚಂದ್ರಹಾಸ ಕೆ. ಅಮೀನ್ ಮತ್ತಿತರರು ಉಪಸ್ಥಿತರಿದ್ದರು.
