ಕಣ್ಣಿನ ಆರೋಗ್ಯದ ಬಗ್ಗೆ ಜಾಗೃತರಾಗಿರಬೇಕು
ಬಜಪೆ:  ಕಣ್ಣಿನ ಆರೋಗ್ಯ ಕಾಪಾಡುವಲ್ಲಿ ಅತೀ ಪ್ರಾಮುಖ್ಯವಾಗಿ ಜಾಗೃತೆ ವಹಿಸುವ ಅಗತ್ಯದ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸಬೇಕು. ಉಚಿತ ಶಿಬಿರಗಳ ಮೂಲಕ ಅಶಕ್ತರಿಗೆ ನೆರವಾಗುವುದು ಪ್ರಮುಖ ಸೇವಾ ಕಾರ್ಯವಾಗಿ ಗುರುತಿಸಿಕೊಳ್ಳುತ್ತದೆ. ಜತೆಗೆ ನೇತ್ರದಾನದ ಬಗೆಗೂ ಜಾಗೃತಿ ಮೂಡಿಸುವುದು ಕೂಡಾ ಇಂದಿನ ಅಗತ್ಯ. ಎಂದು ಬಜಪೆ ಸೈಂಟ್ ಜೋಸೆಫ್ ಚರ್ಚ್‍ನ ಧರ್ಮಗುರು ರೆ|ಫಾ|ಲಿಯೋ ಲೋಬೋ ಹೇಳಿದರು.
ಅವರು ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಿಗೋಳಿ ಇದರ ನೇತೃತ್ವದಲ್ಲಿ ಸಂಚಾರೀ ನೇತ್ರ ಘಟಕ, ವೆನ್ಲಾಕ್ ಆಸ್ಪತ್ರೆ ಮಂಗಳೂರು, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಲಯನ್ಸ್ ಕ್ಲಬ್ ನೀರುಡೆ, ಮುಚ್ಚೂರು ಇವರ ಸಹಯೋಗದಲ್ಲಿ ಬಜಪೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜರಗಿದ ಕಣ್ಣಿನ ಉಚಿತ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

???????????????????????????????

???????????????????????????????ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಅವರು ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆಯ ಸೇವಾ ಕಾರ್ಯ ಹಾಗೂ ಧ್ಯೇಯೋದ್ಧೇಶಗಳ ಬಗ್ಗೆ ಮಾತನಾಡಿದರು.
ವೆನ್ಲಾಕ್ ಆಸ್ಪತ್ರೆಯ ನೇತ್ರತಜ್ಞೆ ಡಾ| ಮಂಜುಳಾ ಅವರು ಮಾತನಾಡಿ ಶಿಬಿರ ಹಾಗೂ ಶಿಬಿರದ ನಂತರದ ಚಿಕಿತ್ಸಾ ಪ್ರಕ್ರಿಯೆಗಳ ಬಗೆಗೆ ಮಾಹಿತಿ ನೀಡಿದರು. ಡಾ|ಮಮತಾ, ನೀರುಡೆ-ಮುಚ್ಚೂರು ಲಯನ್ಸ್ ಕ್ಲಬ್ ಅಧ್ಯಕ್ಷ ಅಶೋಕ್ ನಾಯ್ಕ್ ಉದ್ಯಮಿ ಸಂತೋಷ್ ನಾಯ್ಕ್ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಟ್ರಸ್ಟಿ ಲೋಕಯ್ಯ ಪೂಜಾರಿ, ಸಂಚಾಲಕರಾದ ಸುಮಾ.ಬಿ.ಶೆಟ್ಟಿ ಮುಂತಾದವರು ಉಪಸ್ಥಿತರಿದ್ಧರು.
ಈಗಾಗಲೇ ವೈದ್ಯಕೀಯ ಉಚಿತ ಶಿಬಿರಗಳನ್ನು ಹಾಗೂ ಅಶಕ್ತರಿಗೆ ನೆರವು ಹಾಗೂ ಇತರ ಸೇವಾ ಕಾರ್ಯಗಳನ್ನು ನಡೆಸಿ ಗಮನ ಸೆಳೆದ ಸಂಸ್ಥೆ ತನ್ನ ಸೇವಾ ಕಾರ್ಯಗಳನ್ನು ನಡೆಸುವ ಮೂಲಕ ಗಮನ ಸೆಳೆದಿದೆ.
ಸಂಸ್ಥೆಯ ಸಾರ್ವಜನಿಕ ಸಂವಹನಾಕಾರಿ ಸೀತಾರಾಮ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು. 320 ಮಂದಿ ಶಿಬಿರದಲ್ಲಿ ಪಾಲ್ಗೊಂಡಿದ್ಧು 180 ಮಂದಿಗೆ ಕನ್ನಡಕ ಉಚಿತ ವಿತರಿಸಲಾಗಿದೆ.

By suddi9

Leave a Reply

Your email address will not be published. Required fields are marked *