ನವದೆಹಲಿ: ನಿತಿನ್ ಗಡ್ಕರಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಅರವಿಂದ್ ಕೇಜ್ರಿವಾಲ್ ಅವರನ್ನ ಬಂಧನಕ್ಕೊಳಪಡಿಸಲಾಗಿದೆ. ಆಮ್ ಆದ್ಮಿ ಸಂಸ್ಥಾಪಕರನ್ನ ಮೇ 23ರವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.
kejrival arrest
ಕೇಜ್ರಿವಾಲ್ ವಿರುದ್ಧ ಬಿಜೆಪಿ ಮಾಜಿ ಅಧ್ಯಕ್ಷರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ದೆಹಲಿ ಕೋರ್ಟ್, 10 ಸಾವಿರ ರು. ಬಾಂಡ್ ಸಲ್ಲಿಸುವಂತೆ ಕೇಳಿತ್ತು. ಆದರೆ, ಕೇಜ್ರಿವಾಲ್ ಇದಕ್ಕೆ ಒಪ್ಪದ್ದರಿಂದ ಅವರ ಬಂಧನಕ್ಕೆ ಕೋರ್ಟ್ ಆದೇಶಿಸಿತ್ತು.

ಚುನಾವಣೆಗೆ ಮೊದಲು ಕೇಜ್ರಿವಾಲ್ ಅವರು ಗಡ್ಕರಿ ಸೇರಿದಂತೆ ಹಲವು ನಾಯಕರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದರು. ದೇಶದಲ್ಲಿರುವ ವಿವಿಧ ಪಕ್ಷಗಳ ಭ್ರಷ್ಟಾಚಾರಿ ಅಭ್ಯರ್ಥಿಗಳ ಪಟ್ಟಿ ಮಾಡಿ, ಅಲ್ಲೆಲ್ಲಾ ಆಮ್ ಆದ್ಮಿ ಅಭ್ಯರ್ಥಿಗಳನ್ನ ಕಣಕ್ಕಿಳಿಸುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಿತಿನ್ ಗಡ್ಕರಿಯವರು ಕೇಜ್ರಿವಾಲ್ ವಿರುದ್ಧ ಮಾನನಷ್ಟ ಕ್ರಿಮಿನಲ್ ಮೊಕದ್ದಮೆ ಹಾಕಿದ್ದರು.

By Suddi9

Leave a Reply

Your email address will not be published. Required fields are marked *