ಗಾಂಧಿನಗರ: ಪ್ರಧಾನಿಯಾಗಿ ಆಯ್ಕೆಯಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬುಧವಾರ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಇವರ ಉತ್ತರಾಧಿಕಾರಿಯಾಗಿ ಕಂದಾಯ ಸಚಿವೆ ಅನಂದಿಬೆನ್ ಪಟೇಲ್ ಅವರು ಆಯ್ಕೆಯಾಗಲಿದ್ದಾರೆ.

ben

ಆ ಮೂಲಕ ಗುಜರಾತಿನ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ. ನರೇಂದ್ರ ಮೋದಿಯ ಸಂಪೂರ್ಣ ವಿಶ್ವಾಸಗಳಿಸಿರುವ 72 ವರ್ಷ ಪ್ರಾಯದ ಆನಂದಿಬೆನ್ ಪಟೇಲ್, ಅದೇ ನರೇಂದ್ರ ಮೋದಿಯ ಬಲಗೈ ಬಂಟ ಅಮಿತ್ ಶಾ ಅವರೊಂದಿಗೆ ಅಷ್ಟಕಷ್ಟೆ ಎಂದು ಗೊತ್ತಾಗಿದೆ.

ಈ ಹಿನ್ನೆಲೆಯಲ್ಲಿ ಇದೀಗ ಬಹುತೇಕ ಗುಜರಾತಿನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲಿರುವ ಆನಂದಿಬೆನ್ ಪಟೇಲ್ ಅವರಿಗೆ ಪ್ರಬಲ ಪೈಪೋಟಿಯೂ ಎದುರಾಗಿದ್ದು, ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿರುವ ಭಿಕು ದಾಲ್ಸಾನಿಯಾ, ಹಣಕಾಸು ಸಚಿವ ನಿತಿನ್ ಪಟೇಲ್, ಇಂಧನ ಸಚಿವ ಸೌರಭ್ ಪಟೇಲ್ ಅವರೂ ಸಿಎಂ ಗಾದಿಯ ಆಕಾಂಕ್ಷಿಗಳಾಗಿದ್ದಾರೆ.

ಇಷ್ಟೆಲ್ಲಾ ಪೈಪೋಟಿಯಿದ್ದರೂ ಆನಂದಿ ಬೆನ್ ಅವರಿಗೆ ಹೆಚ್ಚಿನ ಬೆಂಬಲ ಕಂಡುಬಂದಿದೆ. ಶಿಸ್ತಿನ ಸ್ವಭಾವದ ಆನಂದಿ ಬೆನ್, ಜವಾಬ್ದಾರಿ ನಿರ್ವಹಿಸುವುದರಲ್ಲಿ ಎತ್ತಿದ ಕೈ ಎಂಬ ಮಾತೂ ಕೇಳಿಬಂದಿದೆಯಾದರೂ, ಗ್ರಾಮೀಣ ಪ್ರದೇಶದ ಜನತೆಯೊಂದಿಗೆ ಒಡನಾಟವಾಗಲೀ ಸಂಪರ್ಕವಾಗಲೀ ತೀರಾ ಕಡಿಮೆಯೆಂಬ ಅಪವಾದ ವ್ಯಕ್ತವಾಗಿದೆ.

ಏನೇ ಆದರೂ ನರೇಂದ್ರ ಮೋದಿಗೆ ಆಪ್ತರಾಗಿರುವುದರಿಂದ ಅವರೇ ಆಯ್ಕೆಯಾಗುವುದು ನಿಶ್ಚಿತ ಎನ್ನಲಾಗಿದೆ.

By suddi9

Leave a Reply

Your email address will not be published. Required fields are marked *