ಮಂಗಳೂರು: ಮೋದಿ ಪ್ರಧಾನಿಯಾದರೆ ನಾನು ದೇಶಬಿಟ್ಟು ಹೋಗುತ್ತೇನೆ ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಅನಂತಮೂತರ್ಿಯವರು ಹೇಳಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಆದರೆ ಬಜ್ಪೆಯ ಕೆಲವರಿಗೆ ಮೋದಿ ಪ್ರಧಾನಿಯಾದ ಮೇಲೆ ದೇಶಬಿಡುವ ಪರಿಸ್ಥಿತಿ ಎದುರಾಗಿದೆ. ಹಲವು ಮಂದಿ ಬೆಟ್ಟಿಂಗ್ ಜಾಲಕ್ಕೆ ಸಿಲುಕಿ ಕೆಲವರು ದೇಶ ಬಿಟ್ಟು ತೆರಳಿದರೆ ಇನ್ನು ಕೆಲವರು ಊರು ಬಿಟ್ಟು ತೆರಳಿದ್ದಾರೆ.

ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯಥರ್ಿ ಜನಾರ್ದನ ಪೂಜಾರಿ ಪರವಾಗಿ ಹಲವಾರು ಮಂದಿ ಲಕ್ಷಾಂತರ ಬೆಟ್ ಕಟ್ಟಿದ್ದರು. ಹಲವಾರು ಸಮೀಕ್ಷೆಗಳು ಸಹ ಪೂಜಾರಿ ಪರವಾಗಿಯೇ ಇದ್ದವು. ಆದುದರಿಂದ ಪೂಜಾರಿ ಖಂಡಿತಾ ಗೆಲ್ತಾರೆ ಎಂಬ ನಂಬಿಕೆಯಿಂದ ಬಜ್ಪೆಯ ಹಲವು ಮಂದಿ ಕಣ್ಣುಮುಚ್ಚಿ ಲಕ್ಷಾಂತರ ರೂ. ಹಣವನ್ನು ಬೆಟ್ ಕಟ್ಟಿದ್ದರು. ಆದರೆ ಜನಾರ್ದನ ಪೂಜಾರಿಗೆ ಚುನಾವಣೆಯಲ್ಲಿ ಸೋಲಾಗಿರುವುದರಿಂದ ಅವರ ಪರವಾಗಿ ಬೆಟ್ ಕಟ್ಟಿದವರು ಈಗ ಕೈ ಸುಟ್ಟುಕೊಂಡಿದ್ದಾರೆ. ಲಕ್ಷಾಂತರ ಹಣವನ್ನು ಹೊಂದಾಣಿಸಲಾಗದೆ ಊರು ಬಿಟ್ಟಿದ್ದಾರೆ ಎನ್ನಲಾಗಿದೆ.
ಲೋಕಸಭಾ ಚುನಾವಣೆಯ ಹಿನ್ನೆಲೆ ಬೇರೆಬೇರೆ ವಿಧಗಳಲ್ಲಿ ಬೆಟ್ಟಿಂಗ್ ನಡೆದಿದೆ. ಇದರಲ್ಲಿ ಲಕ್ಷಾಂತರ ಹಣ ಕೈಬದಲಾಗಿದೆ. ಕೆಲವರು ಸಾಕಷ್ಟು ಹಣವನ್ನು ಮಾಡಿದ್ದರೆ ಇನ್ನು ಕೆಲವರು ಸಾಕಷ್ಟು ಹಣವನ್ನು ಕಳೆದುಕೊಂಡಿದ್ದಾರೆ. ಇದರಲ್ಲಿ ಹಣಕಳೆದುಕೊಂಡವರು ಊರುಬಿಟ್ಟಿದ್ದು ಅವರನ್ನು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಕತ್ತಿ-ಕತ್ತಿ ಮಿಲಾಯಿಸುವ ಹಂತಕ್ಕೂ ತಲುಪಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ.
