ಮುಂಬಯಿ : ತುಳು ಉಳಿಸುವಲ್ಲಿ ಮಕ್ಕಳ ಮೇಲಿನ ಜವಾಬ್ದಾರಿ ಹೆಚ್ಚಿರುವುದರಿಂದ ಅವರಿಗೆ ಬೇಕಾದ ರೀತಿಯ ಸಾಹಿತ್ಯಗಳು ಹೊರ ಬರಬೇಕಾಗಿದೆ. ತುಳು ಉಳಿಸಲು ಸರ್ಕಾರ ಯಾವ ರೀತಿಯ ಕಾರ್ಯಕ್ರಮ ಮಾಡುತ್ತದೆ ಎಂಬುದಕ್ಕಿಂತ, ಮಕ್ಕಳಗೆ ಬೇಕಾದ ಕಾರ್ಯಕ್ರಮ ಮಾಡಲು ನಾವು ಮುಂದಾಗಬೇಕಾಗಿದೆ. ಬದುಕಿನ ದಾರಿ ತೋರಿಸುವ ರೀತಿಯ ಸಾಹಿತ್ಯಗಳು ಪ್ರಸ್ತುವಾಗಿ ಅಗತ್ಯವಿದೆ ಎಂದು ಎಳೆಯರ ಗೆಳೆಯ ಮುಳಿಯ ಎಂದೇ ಪ್ರಸಿದ್ದರಾಗಿರುವ ಮುಳಿಯ ಶಂಕರ್ ಭಟ್ ಹೇಳಿದರು. ಅವರು ಮಕ್ಕಳ ತುಳು ಸಾಹಿತ್ಯ ಸಮ್ಮೇಳನ 2016ರ ಅಂಗವಾಗಿ ನಡೆದ ತುಳು ಜೋಕ್ಲೆನ ಸಾಹಿತ್ಯೊದ ತುಲಿಪು ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಟ್ಟಂಪಾಡಿ ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ ನಮ್ಮ ಮಣ್ಣಿನ ಪ್ರೀತಿ, ಪ್ರೇಮ ನಮ್ಮೊಳಗೆ ತುಂಬಿದಾಗ ಬದುಕಿಗೆ ಬೆಳಕು ಸಿಗುತ್ತದೆ. ಮಕ್ಕಳು ಜಗತ್ತಿನ ಸಂಪತ್ತಾಗಿದ್ದು, ಅದರ ಬೆಳವಣಿಗೆಯನ್ನು ಸರಿಯಾದ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ. ಮಕ್ಕಳ ಕನಸನ್ನು ನನಸಾಗಿಸುವ ಕೆಲಸವನ್ನು ಇಲಾಖೆಗಳು ಮಾಡಬೇಕು.

VIL_16 FEB_6

VIL_16 FEB_7

VIL_16 FEB_8

VIL_16 FEB_9

VIL_16 FEB_10ಮನಸ್ಸು ಇದ್ದಾಗ ಮಾತ್ರ ಕೆಲಸ ಕಾರ್ಯಗಳು ಯಶಸ್ವಿಯಾಗಿ ನಡೆಯಲು ಸಾಧ್ಯ ಎಂದು ತಿಳಿಸಿದರು. ಲೇಖಕಿ ಶಕುಂತಳಾ ಭಟ್ ಮಾತನಾಡಿ ಭಾಷೆ ನಾಶದಿಂದ ಒಂದು ಸಾಮ್ರಾಜ್ಯವನ್ನು ಅಳಿಸಬಹುದೆಂಬುದನ್ನು ಇತಿಹಾಸದಲ್ಲಿ ಕಂಡಿದ್ದೇವೆ. ನಮ್ಮ ಮಾತೃ ಭಾಷೆ ಮರೆತು, ಪರ ಭಾಷೆಯ ವ್ಯಾಮೋಹದಿಂದ ನಮ್ಮ ನಾಡಿಗೆ ಅಪಾಯ ನಿಶ್ಚಿತವಾಗಿದೆ. ಈ ನಿಟ್ಟಿನಲ್ಲಿ ಭಾಷೆ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಹೆತ್ತವರು ಹೇಳಿಕೊಡುವ ಕಾರ್ಯ ನಡೆಸಬೇಕು. ನಾಡು ನುಡಿಯನ್ನು ಉಳಿಸಿದಾಗ ನಮ್ಮೆಲ್ಲರ ಉಳಿವು ಸಾಧ್ಯಎಂದು ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ರಘ ಇಡ್ಕಿದು ಮಾತನಾಡಿ ಮಕ್ಕಳಲ್ಲಿ ಭಾಷೆ ಸಂಸ್ಕೃತಿ ಉಳಿಸುವ ಕಾರ್ಯ ಶಾಲೆಗಳಲ್ಲಿ ನಡೆಯಬೇಕು. ತುಳು ಭಾಷೆಯಲ್ಲಿ ಮಕ್ಕಳ ಸಾಹಿತ್ಯಗಳು ಹೆಚ್ಚು ಹೆಚ್ಚು ಹೊರಬೇಕಾಗಿದೆ. ತುಳು ಭಾಷೆ ಬೆಳೆಯಲು ಮಕ್ಕಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು. ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆಯ ಮೇಲ್ವಿಚಾರಕ ಸದಾಶಿವ ಅಳಿಕೆ ಸ್ವಾಗತಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕ ಲೋಹಿತ್ ಭಂಡಾರಿ ವಂದಿಸಿದರು. ವಿಜಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕತೆ ಪನ್ ಬಾಲೆ:
ವಿದ್ಯಾರ್ಥಿ ಗಳು ಕಥೆ ಹೇಳುವ ಕಾರ್ಯಕ್ರಮ ಗಿರೀಶ್ ಉರ್ವ ಅಧ್ಯಕ್ಷತೆಯಲ್ಲಿ ನಡೆಯಿತು.ನಿತೇಶ್ ಮಿಥುನ್ ಉರ್ವ, ಶ್ರಾವಣಾ ಎನ್ ಚಿಪ್ಪಾರು, ಸ್ವಾತಿ ಬಿ ಶೆಟ್ಟಿ ಕರ್ಮಿನಾಡಿ, ಶ್ರೀಕುಮಾರ್ ಭಟ್ ಸುರತ್ಕಲ್, ರಕ್ಷಿತ್
ಉರ್ವ, ಅಕ್ಷತಾ ಸವಣೂರು, ನಿತ್ಯಾ ಸವಣೂರು, ಪ್ರಶಾಂತ್ ಉರ್ವ ಕಥೆ ಹೇಳಿದರು. ಸಹನ ಶೆಟ್ಟಿ ಸ್ವಾಗತಿಸಿದರು. ಗುರುತೇಜ್ ಒಡಿಯೂರು ವಂದಿಸಿದರು. ಲತಾ ಎಂ ಮೇಲಂಟ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *