ಸ್ನೇಹಕೂಟಗಳಿಂದ ಬಂಧುತ್ವದ ಭದ್ರತೆ: ಡಾ| ಸುನೀತಾ ಎಂ.ಶೆಟ್ಟಿ
ಮುಂಬಯಿ: ಸ್ನೇಹಕೂಟಗಳಿಂದ ಬಂಧುತ್ವ ಬೆಳೆಯುತ್ತದೆ. ವೈಜ್ಞಾನಿಕ ಮತ್ತು ಯಾಂತ್ರಿಕ ಅವಿಶ್ರಾಂತ ಬದುಕಿನ ಬದುಕಿನಲ್ಲಿ ಮರೆಯಾಗುತ್ತಿರುವ ಸಾಂಘಿಕ ಬದುಕಿಗೆ ಇಂತಹ ಸ್ನೇಹಕೂಟಗಳು ಅವಶ್ಯವಾಗಿದೆ. ಇದು ಒಗ್ಗಟ್ಟಿಗೆ ವೇದಿಕೆಯಾಗುತ್ತಿದೆ. ಸಂಸ್ಥೆಗಳಲ್ಲಿ ಉಪಾಸನೆಕ್ಕಿಂತ ಕಾರ್ಯರೂಪತೆ ಅವಶ್ಯವಾಗಿದೆ. ಸೇವಾ ಸಂಸ್ಥೆಗಳು ಸರ್ವರ ಸಮನ್ವಯ ಕೇಂದ್ರವಾದಲ್ಲಿ ಸೇವೆಗಳು ಸಾರ್ಥಕವಾಗುವುದು. ಮತಬೇಧ ತೊರೆದು ಎಲ್ಲರೊಳು ಒಂದಾಗಿ ಬಾಳುವಲ್ಲಿ ಸಂಘಗಳು ಆದರ್ಶವಾಗಬೇಕು. ಪ್ರಚಾರಕ್ಕಿಂತ ಆಚಾರಕ್ಕೆ ಒತ್ತು ನೀಡುತ್ತಾ ಸೇವೆಗೆ ಬದ್ಧರಾಗಿಸಿದ್ದಲ್ಲಿ ಸಂಸ್ಥೆಗಳ ಹುಟ್ಟು ಸಾರ್ಥಕ ಆಗಬಲ್ಲದು. ಇದಕ್ಕೆ ಈ ಸಂಘವು ಮಾದರಿಯಾಗಿದೆ.
ಸಾರ್ವಜನಿಕರಲ್ಲಿ ಜ್ಞಾನದ ಮಾರ್ಗ ತೋರುವ ಕಾರ್ಯವನ್ನು ಮಾಡಿದಾಗ ಜನತೆಯ ಸಮಸ್ಯೆಗಳು ನೀಗುವುದು ಎಂದು ಹಿರಿಯ ಸಾಹಿತಿ, ಕವಿ ಡಾ| ಸುನೀತಾ ಎಂ.ಶೆಟ್ಟಿ ತಿಳಿಸಿದರು. ಮಹಾನಗರದಲ್ಲಿ ಸುಮಾರು ಎಂಟು ದಶಕಗಳಿಂದ ಸೇವಾ ನಿರತ ಮುಂಬಯಿ ಕನ್ನಡ ಸಂಘ (ರಿ.) ಇದರ ಮಹಿಳಾ ವಿಭಾಗವು ಇಂದಿಲ್ಲಿ ಶುಕ್ರವಾರ ಸಂಜೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಕನ್ನಡ ಸಂಘ ಮುಂಬಯಿ ಇದರ ವಾಚನಾಲಯದಲ್ಲಿ ಸಂಭ್ರಮಿಸಲ್ಪಟ್ಟ ಸ್ನೇಹ ಸಮ್ಮೀಲನದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ಡಾ| ಸುನೀತಾ ಶೆಟ್ಟಿ ಉಪನ್ಯಾಸವನ್ನಿತ್ತರು. ಸಂಘದ ಅಧ್ಯಕ್ಷ ಗುರುರಾಜ್ ಎಸ್.ನಾಯಕ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು ಹಾಗೂ ಸ್ವಾಗತಿಸಿ ಪ್ರಸ್ತಾವನೆಗೈದು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ವಿ.ಪೈ ಅತಿಥಿ ಪರಿಚಯಗೈದರು. ಪಧಾಧಿಕಾರಿಗಳು ಡಾ| ಸುನೀತಾ ಶೆಟ್ಟಿ ಅವರನ್ನು ಪುಷ್ಫಗುಪ್ಚ, ಸ್ಮರಣಿಕೆಯನ್ನೀಡಿ ಶಾಲು ಹೊದಿಸಿ ಗೌರವಿಸಿ ಶುಭಾರೈಸಿದರು. ಶಾರದಾ ಅಂಬೆಸಂಗಿ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಸೋಮನಾಥ ಕರ್ಕೇರ ವಂದನಾರ್ಪಣೆಗೈದರು.
ಈ ಸಂದರ್ಭದಲ್ಲಿ ಸಂಘದ ಸುಧಾಕರ್ ಸಿ.ಪೂಜಾರಿ, ಪುಸ್ತಕ ಭಂಡಾರದ ಅಧಿಕಾರಿ ಎಸ್.ಕೆ ಪದ್ಮನಾಭ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಜಯಂತಿ ಸಿ.ರಾವ್, ಸಂಧ್ಯಾ ಪ್ರಭು ಮತ್ತಿತರರು ಉಪಸ್ಥಿತರಿದ್ದು, ಎಳ್ಳುಬೆಲ್ಲ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ಸಮಾಪನ ಕಂಡಿತು.



