ಭಾಷಾಭಿಮಾನ ಬೆಳೆದಾಗ ತುಳಿಯೌಳಿಯಬಹುದು : ಒಡಿಯೂರುಶ್ರೀ
ಮುಂಬಯಿ: ಮಕ್ಕಳ ಹೃದಯದಲ್ಲಿ ತುಳು ಭಾಷಾಭಿಮಾನ ಬೆಳೆದಾಗ ಮಾತ್ರ ತುಳಿಯೌಳಿಯಬಹುದು. ತುಳು ನಿರಂತರ ಆಡುಭಾಷೆಯಾದಾಗ ಉಜ್ವಲ ಭವಿಷ್ಯ ಪಡೆಯಪಹುದು. ಮಕ್ಕಳಲ್ಲಿರುವ ಉತ್ಸಾಹ ನೋಡಿದಾಗ ಭಾಷೆಗೆ ಅಳಿವಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಒಡಿಯೂರುಶ್ರೀ ಮಂಗಳವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ನಾಡೋಜ ಕಯ್ಯಾರ ಕಿಞ್ಞಣ್ಣ
ರೈ ವೇದಿಕೆಯಲ್ಲಿ ನಡೆದ ಮಕ್ಕಳ ತುಳು ಸಾಹಿತ್ಯ ಸಮ್ಮೇಳನ-2016 ಉದ್ಘಾಟಿಸಿ ಆಶೀರ್ವಚನ ನೀಡಿದರು. ತುಳು ಹೃದಯದ ಭಾಷೆಯಾಗಿದ್ದು, ತುಳು ಭಾಷಿಗರಲ್ಲಿರುವ ಸಂಕುಚಿತ ಮನೋಭಾವ ದೂರವಾಗ ಬೇಕಾಗಿದೆ. ತುಳುನಾಡಿನಲ್ಲಿ ತುಳುವನ್ನು ಹುಡುಕು ಎಂಬಂತಾಗದೆ, ಶಾಸ್ತ್ರೀಯ ಸ್ಥಾನ ಮಾನ ಸಿಗಬೇಕಾಗಿದೆ.ತುಳುನಾಡಿಗೆ ತೊಂದರೆಯಾಗುವ ನದಿ ತಿರುವು ಯೋಜನೆಯ ಬಗ್ಗೆ ವೈಜ್ಞಾನಿಕ ಸಮೀಕ್ಷೆ ಇನ್ನಷ್ಟು ನಿಖರವಾಗಿ ನಡೆಯಬೇಕು ಎಂದು ತಿಳಿಸಿದರು.
VIL_16 FEB_1ಮಕ್ಕಳ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ವಿಜೇತಾ ಎಂ.ಶೆಟ್ಟಿ ಉಡುಪಿ ಮಾತನಾಡಿ ತುಳು ನಮ್ಮ ಭಾಷೆಯೆಂಬ ಹೃದಯಂತರಾಳದ ಅಭಿಮಾನ ನಮಗಿದ್ದಾಗ ಮಾತ್ರ ಭಾಷೆಭವಿಷ್ಯದಲ್ಲಿ ಉಳಿಯಬಹುದು. ತುಳುವಿನ ಬಗ್ಗೆ ಧನಾತ್ಮಕ ಚಿಂತನೆ ಪ್ರತಿಯೊಬ್ಬರಲ್ಲಿ ನಿರಂತರವಾಗಿ ಬೆಳೆಯಬೇಕಾಗಿದೆ. ನಮ್ಮ ಭಾಷೆಯನ್ನು ಉಳಿಸುವುದೇ ನಮ್ಮ ಕರ್ತವ್ಯವಾಗಬೇಕು ಮತ್ತು ಉಳಿಸಿಕೊಂಡು ಸಮಾಜದ ಇತರ ಭಾಷೆಗಳನ್ನು ಪ್ರೀತಿಸುವ ವಿಶಾಲತೆ ನಮ್ಮಲ್ಲಿರಬೇಕು. ಹೆತ್ತವರ ಮೂಲಕ ಮಕ್ಕಳಲ್ಲಿ ಮಾತೃ ಭಾಷೆ ಉಳಿಸುವ ಕಾರ್ಯ ನಡೆಯಬೇಕು ಎಂದು ಹೇಳಿದರು. ಪಾಡ್ದನದಲ್ಲಿರುವ ಸೊಗಸು ಆಂಗ್ಲ ಭಾಷೆಯ ಹಾಡುಗಳಲ್ಲಿಲ್ಲ. ತುಳು ಜನಪದ ಆರಾಧನೆ, ಆಚರಣೆಯ ಸೊಗಡನ್ನು ಮೂಲ ನಂಬಿಕೆ ಮತ್ತು ಪದ್ದತಿಯೊಂದಿಗೆ ಮತ್ತೆ ಬೆಳಗಿಸುವ ಕಾರ್ಯ ಮಕ್ಕಳ ಮೂಲಕ ಆಗಬೇಕಾಗಿದೆ. ಪಠ್ಯಶಿಕ್ಷಣದಲ್ಲಿ ತುಳುವಿಗೆ ಸರಿಯಾದ ಸ್ಥಾನ ಮಾನ ನೀಡಿ ವಾರದಲ್ಲಿ ಒಂದು ದಿನವಾದರೂ ಮಕ್ಕಳಿಗೆ ತುಳು ಕಲಿಸುವ ಕಾರ್ಯ ನಡೆಯಬೇಕು. ಸಾಮಾಜಿಕ ಜಾಲತಾಣಗಳು ಒಳ್ಳೆವಿಚಾರಗಳನ್ನು ಹಂಚಿಕೊಳ್ಳಲು ಹೆಚ್ಚು ಬಳೆಕೆಯಾಗಬೇಕು. ಮನಸ್ಸಿನಲ್ಲಿ ಅರಳಿದ ಬರಹ ಖಾಲಿ ಕಾಗದಲ್ಲಿ ಬರೆದಾಗ ಉತ್ತಮ ಸಾಹಿತ್ಯ ಹೊರ ಬರಲು ಸಾಧ್ಯ ಎಂದು ತಿಳಿಸಿದರು. ಒಡಿಯೂರು ಸಾಧ್ವೀ ಮಾತಾನಂದಮಯೀ, ಉದ್ಯಮಿ ವಾಮಯ್ಯ ಶೆಟ್ಟಿ ಮುಂಬಯಿ, ಮುಂಬಯಿ ಬೊರಿವಿಲಿ ತುಳು ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪೇಟೆಮನೆ, ಒಡಿಯೂರು ತುಳುಕೂಟದ ಅಧ್ಯಕ್ಷ ಮಲಾರ್ ಜಯರಾಮ ರೈ, ಮಂಗಳೂರು ಗುರುದೇವ ಸೇವಾ ಬಳಗದ ಅಧ್ಯಕ್ಷ ಜಯಂತ್ ಜೆ ಕೋಟ್ಯಾನ್, ನವ್ಯಶ್ರೀ ಉರ್ವ ಮಂಗಳೂರು ಉಪಸ್ಥಿತರಿದ್ದರು. ಮಕ್ಕಳ ತುಳು ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಸಂಚಾಲಕ ತಾರಾನಾಥ ಕೊಟ್ಟಾರಿ ಸ್ವಾಗತಿಸಿದರು. ಪ್ರಧಾನ ಸಂಚಾಲಕ ಡಾ. ವಸಂತ ಕುಮಾರ್ ಪೆರ್ಲ ಪ್ರಸ್ತಾವನೆಗೈದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕ ಜಯಪ್ರಕಾಶ್ ಶೆಟ್ಟಿ ವಂದಿಸಿದರು. ವಿಠಲ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಲತಾ ಎಂ ಮೇಲಂಟ ಕಾರ್ಯಕ್ರಮ ನಿರೂಪಿಸಿದರು.
ಕಬಿ ಕೂಟೊ: ತುಳು ಕವಿಗೋಷ್ಠಿ ಆತ್ರೇಯ ನಾರಾಯಣ ಅಳಿಕೆ ಅಧ್ಯಕ್ಷತೆಯಲ್ಲಿ ನಡೆಯಿತು.ಸಾಗರ್ ಉರ್ವ, ಕಾವ್ಯಶ್ರೀ ಕೆ ಪೈವಳಿಕೆ, ಶರಣ್ಯ ಎಸ್ ಒಡಿಯೂರು, ಮಂಜುನಾಥ ಒಡಿಯೂರು, ಮಂಜುನಾಥ ಮಂಗಳೂರು, ಚೈತ್ರ ಬಿ ಒಡಿಯೂರು, ಅಮಿತ್ ಉರ್ವ, ನಿಶಾ ಸವಣೂರು, ಸುಶ್ಮಿತಾ ಎನ್ ಒಡಿಯೂರು, ಅಮೃತಾ ಒಡಿಯೂರು, ವಂದನಾ ಕೆ ಬಾಯಾರು, ನವ್ಯಶ್ರೀ ಉರ್ವ, ಶ್ರಾವ್ಯ ಕೋಡ್ಲಮೊಗರು ಮೊದಲಾದ ಕವಿಗಳು ಕವಿತೆ ವಾಚಿಸಿದರು.ಒಡಿಯೂರು ಗುರುದೇವ ವಿದ್ಯಾಪೀಠದ ವಿದ್ಯಾರ್ಥಿಗಳಾದ ರಿತೇಷ್ ಶೆಟ್ಟಿ ಸ್ವಾಗತಿಸಿದರು. ಸಮೀಕ್ಷಾವಂದಿಸಿದರು.
ಕವಿತೆ ಪಂಡೆರ್: ಮಲಾರು ಜಯರಾಮ ರೈ, ತಮ್ಮಯ್ಯ ಬಂಟ್ವಾಳ, ವಿಜಯ ಶೆಟ್ಟಿ, ಸಾವಿತ್ರಿ ಕೆ ಭಟ್,ಧನ್ಯ ಶ್ರೀ ಎಂ ಎನ್, ಶರಥಿ ರೈಕವಿತೆ ಹಾಡಿದರು.
ಕೂಟ ನಲಿಕೆ:
ಕೊಣಾಜೆ ವಿಶ್ವಮಂಗಲ ಆಂಗ್ಲ ಮಾಧ್ಯಮ ಶಾಲೆ ಹಾಗೂ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಮೂಹ ನೃತ್ಯ ಕಾರ್ಯಕ್ರಮ ನಡೆಯಿತು.

By suddi9

Leave a Reply

Your email address will not be published. Required fields are marked *