ಮುಂಬಯಿಯಲ್ಲಿ ಸಾರ್ವತ್ರಿಕ ಮನಸ್ಸುಗಳಿವೆ : ಜಯಂತ ಕಾಯ್ಕಿಣಿ
ಮುಂಬಯಿ: ಮುಂಬಯಿ ಜಾತೀಯತೆಯನ್ನು ಮೀರಿರುವ ಮಹಾನಗರ. ಇಲ್ಲಿ ಸಾರ್ವತ್ರಿಕವಾದ ಮನಸ್ಸುಗಳಿವೆ. ಮನಸ್ಸಿನ ಸಣ್ಣಪುಟ್ಟ ಗೋಡೆಗಳ ಸಂಕೋಲೆಯಿಂದ ಬಿಡಿಸಿದ ಮಾಯಾನಗರ ಇದಾಗಿದ್ದು, ಮುಂಬಯಿ ತರಹ ಯಾವ ಶಹರವು ಆಗಲೂ ಸಾಧ್ಯವಿಲ್ಲ. ಬಹುಭಾಷಿಕ ಸಂವೇದನೆಯ ನಗರವು ಹೌದು. ಬರಿ ಸಂವೇದನೆಯಲ್ಲಿಯಲ್ಲ ಬಹುಭಾಷಿಕ ನೆಲೆಯಲ್ಲೂಮುಂಬಯಿ ವಿಶ್ವಕ್ಕೆ ಮಾದರಿಯಾಗಿದೆ. ನಾವು ಮುಂಬಯಿಗರು ಕೆ.ಕೆ.ಹೆಬ್ಬಾರ್ ಅವರ ಲೈನ್ ತರಹ.ಮುಂಬಯಿಗರು ಯಾವುದರ ಅಂಗಿಲ್ಲದೇ ಕಾಯಕದಲ್ಲಿ ಕೈಲಾಸ ಕಂಡವರು ಎಂದು ನಾಡಿನ ಹೆಸರಾಂತ ಸಾಹಿತಿ ಜಯಂತ ಕಾಯ್ಕಿಣಿ ತಿಳಿಸಿದರು. ಇಂದಿಲ್ಲಿ ಆದಿತ್ಯವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಬ್ರಹ್ಮಶ್ರೀ ನಾರಾಯಣ ಗುರು
ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮುಖವಾಣಿ ಅಕ್ಷಯ ಮಾಸಿಕವು ಅಕ್ಷಯದ ಮಾಜಿ ಗೌರವ ಪ್ರಧಾನ ಸಂಪಾದಕ ಎಂ.ಬಿ ಕುಕ್ಯಾನ್ ಪ್ರಾಯೋಜಿತ `ಶ್ರೀ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ 2015′ ಪ್ರಶಸ್ತಿ ಸ್ವೀಕರಿಸಿ ಡಾ| ಜಯಂತ ಗೌರೀಶ್ ಕಾಯ್ಕಿಣಿ ಮಾತನಾಡಿದರು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಯೋಜಿತ ಪ್ರಶಸ್ತಿ ಸಮಾರಂಭಕ್ಕೆ ಜಯಂತ ಕಾಯ್ಕಿಣಿ ದೀಪ ಬೆಳಗಿಸಿ ಚಾಲನೆ ನೀಡಿದರು. ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನೇರವೇರಿದ ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿ ಹಿರಿಯ ಸಾಹಿತಿ, ವಿಮರ್ಶಕ ವಿ.ಗ ನಾಯಕ ಮತ್ತು ಗೌರವ ಅತಿಥಿಯಾಗಿ ಪ್ರಸಿದ್ಧ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ ಉಪಸ್ಥಿತರಿದ್ದು ಜಯಂತ  ಕಾಯ್ಕಿಣಿ ಅವರಿಗೆ ನಗದು ಫಲಪುಷ್ಫ, ಪ್ರಶಸ್ತಿ ಪತ್ರದೊಂದಿಗೆ `ಶ್ರೀ ಗುರುನಾರಾಯಣ ಸಾಹಿತ್ಯ’ ಪ್ರಶಸ್ತಿ ಪ್ರದಾನಿಸಿ ಶುಭಾರೈಸಿದರು. ಜನರು ಎಷ್ಟೇ ಮುಂದುವರಿದರೂ ತಲೆಯಲ್ಲಿ ಮಾತ್ರ ಶಿಲಾಯುಗಕ್ಕೆಹೋಗುತ್ತಿದ್ದೇವೆ. ನಾವು ಷರತ್ತುಗಳಿಲ್ಲದ  ಸಂವೇದನೆಯ ಭಾಗವಾಗಬೇಕು. ಕನ್ನಡವನ್ನು ನಾವೂ ಉಳಿಸುವ ಅಗತ್ಯವಿಲ್ಲ. ಕನ್ನಡವೇ ನಮ್ಮನ್ನು ಉಳಿಸುತ್ತದೆ. ಸಂಸ್ಕೃತಿ ಎಂಬುವುದು ಕಪಾಟಿನಲ್ಲಿಟ್ಟು, ದೂಳು ಹಿಡಿದ ಮ್ಯೂಸಿಯಂ ವಸ್ತು ಆಗಬಾರದು. ಆದು ಉಪವನ ಆಗಬೇಕು.

 

Guru Narayana Award-2016-A2

Guru Narayana Award-2016 -1

Guru Narayana Award-2016 -2

Guru Narayana Award-2016 -3

Guru Narayana Award-2016 -4

Guru Narayana Award-2016 -5

Guru Narayana Award-2016 -6

Guru Narayana Award-2016 -8

Guru Narayana Award-2016 -9

Guru Narayana Award-2016 -17

Guru Narayana Award-2016 -18

Guru Narayana Award-2016 -20

Guru Narayana Award-2016 -21

Guru Narayana Award-2016 -22

Guru Narayana Award-2016 -32

Guru Narayana Award-2016 -34

Guru Narayana Award-2016 -35

Guru Narayana Award-2016-A1ಆದುದರಿಂದ ಗೊಡ್ಡು ಸಂಪ್ರದಾಯಗಳನ್ನು ಮೀರಿ ಸಮತೆಯ ಮತ್ತು ಮಮತೆಯ ದಾರಿಯಲ್ಲಿ ಸಾಗೋಣ. ನನ್ನ ನಲ್ವತ್ತು ವರ್ಷಗಳ ಸಾಹಿತ್ಯ, ಸಾಂಸ್ಕೃತಿಕ ಕೆಲಸಗಳನ್ನು ಗುರುತಿಸಿ ಈ ಪ್ರಶಸ್ತಿ ಮೂಲಕ ಗೌರವಿಸುವುದಕ್ಕಾಗಿ ಧನ್ಯವಾದಗಳು. ಮುಂಬಯಿ ನನ್ನನ್ನು ಪೋಷಿಸಿದ ನಗರ. ನಿರ್ವಿಕಾರ ಪ್ರೀತಿಯ ಸ್ಥಳ ಮುಂಬಯಿ, ನನ್ನ ಕಥೆಯ ಪ್ರಪಂಚ ಬದುಕಿನಿಂದ ನೆರ ಬಂದದ್ದು. ನಮ್ಮನ್ನು ಮೀರಿ ಬಂದಾಗ ಒಳ್ಳೆಯ ಕಥೆಯಾಗುತ್ತದೆ. ಗುರುನಾರಾಯಣರಿಗಿಂತ ತಾತ್ವಿಕತೆಯನ್ನು ಕಂಡಾ ಗುರುಗಳನ್ನು ನಾಕಾಣೆ. ಆದುದರಿಂದ ಗುರುನಾರಾಯಣ ಹೆಸರಿನ ಪ್ರಶಸ್ತಿ ಸಾರ್ಥಕವಾಗಿದೆ ಎಂದೂ ಜಯಂತ ಗೌರೀಶ್ ಕಾಯ್ಕಿಣಿ ತಿಳಿಸಿದರು. ವಿ.ಗ ನಾಯಕ ಮಾತನಾಡಿ ನಾವಿಬ್ಬರೂ ಮುಂಬಯಿ ಹುಟ್ಟೂರು ಎಂದೆಣಿಸಿದವರು. ಇಲ್ಲೇ ನಮ್ಮ ಜನನ ಆದರೆ ಕ್ರಮೇಣ ಕರ್ನಾಟಕವನ್ನು ನಮ್ಮ ನೆಲೆಯಾಗಿಸಿದ್ದೇವೆ. ಸಾಹಿತಿ ಸಾಹಿತಿಗೆ ಮತ್ಸರ ಸಾಮಾನ್ಯ. ಆದರೆ ನಮ್ಮಿಬ್ಬರಲ್ಲಿ ಅಂತಹ ಭಿನ್ನತೆಯಿಲ್ಲ. ಅವರ ಸಾಹಿತ್ಯ ಕಂಡು ನಾನು ಖುಷಿ ಪಟ್ಟಿದ್ದೇನೆ. ವ್ಯಕ್ತಿಗೆ ಬಯಸದೇ ಅಥವಾ ಅಪೇಕ್ಷಿಸದೆ ಸಿಗುವ ಗೌರವವೇ ಶ್ರೇಷ್ಠವಾದದ್ದು. ಇಂತಹದಕ್ಕೆ ಸಕ್ತ, ವೈಚಾರಿಕ ಸಾಹಿತಿ ಕಾಯ್ಕಿಣಿ ಯೋಗ್ಯರು. ಸಿಧ್ಧತೆ ಬದ್ಧತೆ ಮಾನವೀಯತೆಯಗಳ ಸರದಾರರೆಣಿಸಿದ ಇವರು ಅಸಮಾನ್ಯ ಸಂಯಮದ ದೊಡ್ಡಸ್ತಿಕೆಯ ಸಾಹಿತಿಯಾಗಿದ್ದಾರೆ. ಯಾರಲ್ಲೂ ದ್ವೇಷ ಕಟ್ಟಿಕೊಳ್ಳದ ಅನುಭವೀ ಸಾಹಿತಿಯಾಗಿ ಸಾಹಿತ್ಯ ವಲಯದ ಉದ್ದಗಲಕ್ಕೂ ತನ್ನ ಕೈಗಳನ್ನು ಪರಿಸರಿಸಿರುವರು. ಜನಪರತೆ ಕಾಯ್ಕಿಣಿ ಶ್ರೇಷ್ಠತೆ ಆಗಿದ್ದು ಅವರು ಬಂಡಾಯ ಸಾಹಿತಿಯಾಗಿ ಮಾನವೀಯತೆಯ ಸಾಹಿತ್ಯಕ್ಕೆ ಒತ್ತು ನೀಡಿದವರಾಗಿದ್ದಾರೆ ಎಂದು ಕಾಯ್ಕಿಣಿ ಅವರ ಒಟ್ಟು ವ್ಯಕ್ತಿತ್ವದ ಪಕ್ಷಿನೋಟ ನೀಡಿ ಅಭಿನಂಧನಾ ಭಾಷಣ ಗೈದರು. ಈ ಪ್ರಶಸ್ತಿ ಮುಂಬಯಿ ಹೊರಗೆ ಕರ್ನಾಟಕಕ್ಕೂ ವಿಸ್ತರಿಸಿದ್ದು, ಇದು ಪಡೆಯುವ ಸಾಹಿತಿಗಳೇ ಶ್ರೇಷ್ಠರು. ಕಾಯ್ಕಿಣಿ ಸಾಧನೆ ಮುಂಬಯಿಗರಿಗೆ ಅಭಿಮಾನದ ವಿಷಯ. ತನ್ನ ಉಸಿರನ್ನು ಅರಿವು ಜ್ಞಾನಕ್ಕಾಗಿ ಸವಿಸುತ್ತಾ ಉದಯೋನ್ಮುಖ ಸಾಹಿತಿಯಾಗಿ ಬೆಳೆಯುತ್ತಿರುವ ಇವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಸಾಹಿತ್ಯ ನ್ಯಾಯ ಅನ್ಯಾಯಗಳ ವ್ಯತ್ಯಾಸ ಸೂಚಿಸುವಂತಾಗಬೇಕು. ಇದಕ್ಕೆ ಕಾಯ್ಕಿಣಿ ಸೂಕ್ತರು ಆದುದರಿಂದಲೇ ಪ್ರಶಸ್ತಿಗೆ ಯೋಗ್ಯ ಸಾಹಿತಿ ಎಂದೆಣಿಸಿದ್ದಾರೆ ಎಂದು ಸುನೀತಾ ಶೆಟ್ಟಿ ನಿರ್ಣಾಯಕತ್ವದ ನೆಲೆಯಲ್ಲಿ ಪ್ರಶಸ್ತಿ ಕುರಿತು ತಿಳಿಸಿದರು. ನಾರಾಯಣ ಗುರುಗಳೇ ದೊಡ್ಡ ಸಾಹಿತಿ ಆಗಿದ್ದರು. ಅವರು ಸಂಸ್ಕೃತದಲ್ಲೇ ಸಾಹಿತ್ಯ ರಚಿಸಿದ್ದರು. ಯೋಗಾನುಯೋಗ ನಾನೂ ಓರ್ವ ಸಾಹಿತಿ ಬರಹಗಾರನಾಗಿದ್ದರೆ ಅದರ ಶ್ರೇಯಸ್ಸು ಜಯ ಸುವರ್ಣ ಅವರಿಗೆ ಸಲ್ಲುತ್ತದೆ. ಇವರೆಲ್ಲರ ಗರಡಿಯಲ್ಲಿ ಪಳಗಿದ ನಾನು ಸಾಹಿತ್ಯ ಲೋಕದ ಋಣ ತೀರಿಸುವಲ್ಲಿ ಈ ಪ್ರಶಸ್ತಿ ಪ್ರಾಯೋಜಿಸಿದ್ದು, ಇದು ಯೋಗ್ಯ ಮತ್ತು ಅರ್ಹ ಸಾಹಿತಿಗಳಿಗೆ ಸಲ್ಲುತ್ತಿರುವುದು ಸಂತಸ ತಂದಿದೆ ಎಂದು ಎಂ.ಬಿ ಕುಕ್ಯಾನ್ ಪ್ರಶಸ್ತಿ ಬಗ್ಗೆ ತಿಳಿಸಿದರು. ಬಿಲ್ಲವರ ಅಸೋಸಿಯೇಶನ್ ಗುರುನಾರಾಯಣರ ತತ್ವದಂತೆ ಜಾತಿಮತ, ಧರ್ಮಗಳ ಚೌಕಟ್ಟನ್ನು ಬಿಟ್ಟು ಸಾಹಿತ್ಯವನ್ನು ಮನದಲ್ಲಿಟ್ಟು ಮುನ್ನಡೆಯುತ್ತಿದೆ. ಈ ಸಾಹಿತ್ಯ ಪ್ರಶಸ್ತಿಯನ್ನೂ ಇದೇ ಮಾಪಣದಲ್ಲಿ ಅರ್ಹರಿಗೆನೇ ಪ್ರದಾನಿಸುತ್ತೇವೆ. ನಾವು ಸಾಹಿತ್ಯದ ಮೂಲತ್ವ ಅರಿತು ಜಾತಿಮತ ಪಂಥಗಳನ್ನು ಮೀರಿ ಮಾನವರಾಗಿ ಬದುಕಲು ಪ್ರಯತ್ನಿಸೋಣ ಎಂದು ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷೀಯ ಭಾಷಣದಲ್ಲಿ ಕರೆಯಿತ್ತರು. ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದರಾಜವಿ.ಸಾಲ್ಯಾನ್, ಭಾಸ್ಕರ ವಿ.ಬಂಗೇರ, ಶಂಕರ ಡಿ.ಪೂಜಾರಿ, ಡಾ| ಯು.ಧನಂಜಯ ಕುಮಾರ್, ಗೌ| ಪ್ರ| ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್ ವೇದಿಕೆಯಲ್ಲಿ ಅಸೀನರಾಗಿದ್ದು ಪುರಸ್ಕೃತರನ್ನು ಅಭಿನಂದಿಸಿದರು. ಅಕ್ಷಯ ಮಾಸಿಕದ ಸಿಬ್ಬಂದಿಗಳಾದ ಜಯರಾಮ ಜಿ.ನಾಯಕ್, ಸಂತೋಷ್ ಕೆ.ಪೂಜಾರಿ, ಮಮತಾ ನಾಯಕ್ ಉಪಸ್ಥಿತರಿದ್ದು ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಕವಯತ್ರಿ ಶಾರದಾ ಎ.ಅಂಚನ್ ಪ್ರಾರ್ಥನೆಯನ್ನಾಡಿದರು. ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು, ಕುಸುಮಾ ಸಿ.ಪೂಜಾರಿ ಅತಿಥಿಗಳನ್ನು ಪರಿಚಯಿಸಿದರು. ಧರ್ಮೇಶ್ ಸಾಲ್ಯಾನ್ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಾಹಿಸಿದರು. ಸಹಾಯಕ ಸಂಪಾದಕ ಹರೀಶ್ ಕೆ.ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿ, ಪುರಸ್ಕೃತರ ಸನ್ಮಾನಪತ್ರ ವಾಚಿಸಿ ವಂದಿಸಿದರು. ಗುರುನಾರಾಯಣ ರಾತ್ರಿ ಶಾಲಾ ಮಕ್ಕಳು ಮತ್ತು ಅಸೋಸಿಯೇಶನ್‍ನ ವಿವಿಧ ಸ್ಥಳಿಯ ಸಮಿತಿಯ ಮಕ್ಕಳು ಸಾಂಸ್ಕೃತಿಕ ಹಾಗೂ ನೃತ್ಯಾವಳಿಗಳನ್ನು ಪ್ರಸ್ತುತ ಪಡಿಸಿದರು.

By suddi9

Leave a Reply

Your email address will not be published. Required fields are marked *